ಅಂತರ್ಜಾಲದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಭಾರತೀಯ ಪ್ರವಾಸಿ ತಾಣಗಳಿವು
ಟ್ರಾವೆಲ್ ವೆಬ್‌ಸೈಟ್ booking.com ಇತ್ತೀಚಿಗಷ್ಟೇ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ವಿದೇಶಿ ಪ್ರವಾಸಿಗರಿಂದ ಅಂತರ್ಜಾಲದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಭಾರತೀಯ ಪ್ರವಾಸಿ ತಾಣಗಳ ಬಗ್ಗೆ ಬಹಿರಂಗಪಡಿಸಿದೆ. ಯಾವೆಲ್ಲಾ ಭಾರತೀಯ ಪ್ರವಾಸಿ ತಾಣಗಳು ವಿದೇಶಿಯರಿಗೆ ಹೆಚ್ಚು ಆಕರ್ಷಕವಾಗಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
1 / 6
ದೆಹಲಿ: ದೆಹಲಿ ಭಾರತದ ರಾಜಧಾನಿ ಮಾತ್ರವಲ್ಲ, ಇದು ಇತಿಹಾಸ ಮತ್ತು ಆಧುನಿಕತೆಯ ಮಿಶ್ರಣವನ್ನು ಹೊಂದಿರುವ ಪ್ರಾಚೀನ ನಗರವಾಗಿದೆ. ಇಲ್ಲಿನ ಕೆಂಪು ಕೋಟೆ ಮತ್ತು ಕುತುಬ್ ಮಿನಾರ್, ತಾಜ್ ಮಹಲ್, ಕರೋಲ್ ಬಾಗ್, ಸರೋಜಿನಿ ನಗರ, ಲಜಪತ್ ನಗರ, ಚಾಂದಿನಿ ಚೌಕ್, ಸೌರಿ ಬಜಾರ್ ಮತ್ತು ಆನ್ ಮಾರ್ಕೆಟ್, ಪ್ರಶಾಂತ ಲೋಧಿ ಗಾರ್ಡನ್ಸ್ ಹಾಗೂ ವಿಸ್ಮಯಕಾರಿ ಸ್ಮಾರಕಗಳು ವಿದೇಶಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಿದೆ.
2 / 6
ಮುಂಬೈ: ಕನಸಿನ ನಗರಿ ಎಂದು ಕರೆಯಲ್ಪಡುವ ಮುಂಬೈ ವಿದೇಶಿ ಪ್ರವಾಸಿಗರಿಗೆ ಎರಡನೇ ಅತ್ಯಂತ ಜನಪ್ರಿಯ ನಗರವಾಗಿದೆ. ಭಾರತದ ಆರ್ಥಿಕ ರಾಜಧಾನಿಯಾಗಿರುವುದರಿಂದ, ಇದು ಬಾಲಿವುಡ್, ಜೀವನಶೈಲಿ ಮತ್ತು ಫ್ಯಾಕ್ಟರಿ ವಾಸ್ತುಶಿಲ್ಪದ ಮೋಡಿಯನ್ನು ಒಟ್ಟಿಗೆ ಸೇರಿಸುವ ಸ್ಥಳವಾಗಿದೆ.
3 / 6
ಬೆಂಗಳೂರು: ಭಾರತದ ಸಿಲಿಕಾನ್ ವ್ಯಾಲಿ ಎಂದೆನಿಕೊಂಡಿರುವ ಬೆಂಗಳೂರು, ಸುಂದರವಾದ ಹವಾಮಾನ, ಉದ್ಯಾನವನಗಳು ಮತ್ತು ಸರೋವರಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ವಾಸ್ತವವಾಗಿ ಬೆಂಗಳೂರಿನಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ನಂದಿ ಹಿಲ್ಸ್, ಲಾಲ್ ಬಾಗ್, ಕಬ್ಬನ್ ಪಾರ್ಕ್, ಬೆಂಗಳೂರು ಅರಮನೆ, ವಿಧಾನಸೌಧ, ಸ್ನೋ ಸಿಟಿ, ಬೆಂಗಳೂರು ಕೋಟೆ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ.
4 / 6
ಜೈಪುರ: ಭಾರತದ ಗುಲಾಬಿ ನಗರ ಎಂದು ಕರೆಯಲ್ಪಡುವ ಜೈಪುರವು ರಾಜಸ್ಥಾನದ ಶ್ರೀಮಂತ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಹೆಬ್ಬಾಗಿಲು ಕೂಡ ಆಗಿದೆ. ಇತಿಹಾಸ ಪ್ರಿಯರಿಗೆ ಇದ8 ನೆಚ್ಚಿನ ತಾಣವಾಗಿದ್ದು, ದೇಶ ವಿದೇಶದಿಂದ ಇಲ್ಲಿಗೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದು ತಿಳಿದುಬಂದಿದೆ.
5 / 6
ಚೆನ್ನೈ: ದೇವಾಲಯಗಳು, ಬ್ರಿಟಿಷರ ಕಾಲದ ವಸ್ತುಸಂಗ್ರಹಾಲಯಗಳು, ಸ್ಮಾರಕಗಳು ಮತ್ತು ದಕ್ಷಿಣ ಭಾರತದ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುವ ಪ್ರಸಿದ್ಧ ಮರೀನಾ ಬೀಚ್ ಚೆನ್ನೈಗೆ ಪ್ರವಾಸಿಗರನ್ನು ಆಕರ್ಷಿಸಲು ಕಾರಣವಾಗಿವೆ. ಜೊತೆಗೆ ವಿದೇಶಿ ಪ್ರವಾಸಿಗರಿಂದ ಅಂತರ್ಜಾಲದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಭಾರತೀಯ ಪ್ರವಾಸಿ ತಾಣಗಳಲ್ಲಿ ಇದೂ ಕೂಡ ಒಂದು.
6 / 6
ಹಂಪಿ: ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿ ನಮ್ಮ ಕರ್ನಾಟದ ಹೆಮ್ಮೆಯಾಗಿದೆ. ದೇಶದ ನಾನಾ ಭಾಗಗಳಿಂದಲೇ ಅಲ್ಲದೆ ವಿದೇಶಿಗರನ್ನು ಹೆಚ್ಚಾಗಿ ಆಕರ್ಷಿಸುವ ಬಲವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.