AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರಾಟವಾಗದೆ ಉಳಿಯುವ ಭಯ; ಅತಿ ಕಡಿಮೆ ಮೂಲ ಬೆಲೆ ಘೋಷಿಸಿಕೊಂಡ ಪೃಥ್ವಿ- ಸರ್ಫರಾಜ್

IPL 2025 Mega Auction: ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ 1574 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಪ್ರಥ್ವಿ ಶಾ ಮತ್ತು ಸರ್ಫರಾಜ್ ಖಾನ್ ಅವರು ತಮ್ಮ ಮೂಲ ಬೆಲೆಯನ್ನು ಕೇವಲ 75 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಿದ್ದು ಆಶ್ಚರ್ಯವನ್ನುಂಟು ಮಾಡಿದೆ. ಇದು ಅವರ ಇತ್ತೀಚಿನ ಪ್ರದರ್ಶನ ಮತ್ತು ಹರಾಜಿನಲ್ಲಿ ಮಾರಾಟವಾಗದೆ ಉಳಿಯುವ ಆತಂಕದಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಊಹಿಸಲಾಗಿದೆ.

ಪೃಥ್ವಿಶಂಕರ
|

Updated on: Nov 06, 2024 | 4:27 PM

Share
ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ 1574 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ನವೆಂಬರ್ 24 ಮತ್ತು 25 ರಂದು ಎಲ್ಲಾ ತಂಡಗಳು ಈ ಆಟಗಾರರನ್ನು ಬಿಡ್ ಮಾಡುತ್ತವೆ. ಅದಕ್ಕೂ ಮೊದಲು ಎಲ್ಲಾ ಆಟಗಾರರು ತಮ್ಮ ಮೂಲ ಬೆಲೆಗಳನ್ನು ಘೋಷಿಸಿದ್ದಾರೆ. ಪಟ್ಟಿಯಲ್ಲಿ ಭಾರತದ ಭಾಗಶಃ ಆಟಗಾರರು ತಮ್ಮ ಮೂಲ ಬೆಲೆಯನ್ನು 2 ಕೋಟಿಗೆ ಇರಿಸಿದ್ದರೆ, ಇಬ್ಬರು ಆಟಗಾರರು ಮಾತ್ರ ತಮ್ಮ ಮೂಲ ಬೆಲೆಯಲ್ಲಿ ಲಕ್ಷದಲ್ಲಿ ಇರಿಸಿಕೊಂಡಿದ್ದಾರೆ.

1 / 8
ಅತಿ ಕಡಿಮೆ ಮೂಲ ಬೆಲೆಯನ್ನು ಘೋಷಿಸಿಕೊಂಡ ಕ್ಯಾಪ್ಡ್ ಆಟಗಾರರೆಂದರೆ ಅದು ಪೃಥ್ವಿ ಶಾ ಹಾಗೂ ಸರ್ಫರಾಜ್ ಖಾನ್. ಈ ಇಬ್ಬರು ಆಟಗಾರರು ಈಗಾಗಲೇ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದಾರೆ. ಇದರ ಜೊತೆಗೆ  ಐಪಿಎಲ್‌ನಲ್ಲಿ ಈ ಆಟಗಾರರ ಮೇಲೆ ಕೋಟಿಗಳ ಮಳೆಯೂ ಸುರಿದಿದೆ. ಆದಾಗ್ಯೂ ಈ ಆಟಗಾರರು ಮುಂದಿನ ಐಪಿಎಲ್ ಹರಾಜಿಗೆ ತಮ್ಮ ಮೂಲ ಬೆಲೆಯನ್ನು ಕೇವಲ 75 ಲಕ್ಷ ರೂಗಳಿಗೆ ಇರಿಸಿದ್ದಾರೆ.

2 / 8
ಇದಕ್ಕೆ ಕಾರಣವೂ ಇದ್ದು, ಪ್ರಸ್ತುತ ಈ ಇಬ್ಬರ ಪ್ರದರ್ಶನ  ಅಷ್ಟು ಗಮನಾರ್ಹವಾಗಿಲ್ಲ. ಅಲ್ಲದೆ ತಮ್ಮ ಮೂಲ ಬೆಲೆಯನ್ನು ಹೆಚ್ಚಿಸಿದರೆ ಯಾವುದೇ ತಂಡವು ತನ್ನನ್ನು ಖರೀದಿಸಲು ಬಯಸುವುದಿಲ್ಲ ಎಂಬ ಆತಂಕ ಇವರಿಗಿದೆ. ಹೀಗಾಗಿ ಹಳೆ ಸಂಬಳಕ್ಕಿಂತ 10 ಪಟ್ಟು ಕಡಿಮೆ ಮಾಡಿದ್ದಾರೆ.

3 / 8
ಐಪಿಎಲ್ 2024 ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದ ಪೃಥ್ವಿ ಶಾಗೆ ಕಳೆದ 2 ಸೀಸನ್​ನಗಳಲ್ಲಿ 7.5 ಕೋಟಿ ರೂ. ವೇತನ ನೀಡಲಾಗಿತ್ತು. ಆದರೆ ಮುಂಬರುವ ಹರಾಜಿನಲ್ಲಿ ಶಾ ತಮ್ಮ ಆರಂಭಿಕ ಬೆಲೆಯನ್ನು ಕೇವಲ 75 ಲಕ್ಷ ರೂ.ಗೆ ನಿಗದಿ ಮಾಡಿದ್ದಾರೆ. ಆದಾಗ್ಯೂ, ಪೃಥ್ವಿ ಅವರು ಕೊನೆಯದಾಗಿ ಎಷ್ಟು ಹಣ ಪಡೆಯಲ್ಲಿದ್ದಾರೆ ಎಂಬುದು ಹರಾಜಿನ ನಂತರ ತಿಳಿಯಲಿದೆ.

4 / 8
ಪೃಥ್ವಿ ಶಾ ಐಪಿಎಲ್​ನಿಂದ ಇದುವರೆಗೆ 19 ಕೋಟಿ 80 ಲಕ್ಷ ರೂ. ವೇತನ ಪಡೆದಿದ್ದಾರೆ. 2018ರ ಅಂಡರ್-19 ವಿಶ್ವಕಪ್‌ನಲ್ಲಿ ನಾಯಕರಾಗಿದ್ದ ಶಾ ಅವರನ್ನು ಅದೇ ವರ್ಷ ದೆಹಲಿ ತಂಡ 1.2 ಕೋಟಿ ರೂ.ಗೆ ಖರೀದಿಸಿತ್ತು. ಅಂದಿನಿಂದ ಅವರು ದೆಹಲಿ ತಂಡದಲ್ಲಿದದ್ದರು. 2022 ರ ನಂತರ ಪೃಥ್ವಿ ಅವರ ಸಂಬಳವನ್ನು ದೆಹಲಿ 7.5 ಕೋಟಿ ರೂ.ಗೆ ಏರಿಸಿತು.

5 / 8
ಇದೀಗ ಡೆಲ್ಲಿ ಫ್ರಾಂಚೈಸಿ ಫೃಥ್ವಿ ಅವರನ್ನು ತಂಡದಿಂದ ಹೊರಹಾಕಿದೆ. ಕಳೆದ ಸೀಸನ್​ನಲ್ಲಿ 8 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರೂ ಪೃಥ್ವಿ ಅವರಿಗೆ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆಡಿದ 8 ಪಂದ್ಯಗಳಲ್ಲಿ 163 ಸ್ಟ್ರೈಕ್ ರೇಟ್‌ನಲ್ಲಿ 198 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಆದ್ದರಿಂದ ಪೃಥ್ವಿ ಅವರನ್ನು ತಂಡದಿಂದ ಕೈಬಿಡಲಾಯಿತು.

6 / 8
ಪೃಥ್ವಿ ಶಾ ಅವರಂತೆಯೇ ಸರ್ಫರಾಜ್ ಖಾನ್ ಕೂಡ ಹೆಚ್ಚಿನ ಬೆಲೆ ಇಟ್ಟುಕೊಂಡರೆ ಯಾರೂ ತನ್ನನ್ನು ಖರೀದಿಸುವುದಿಲ್ಲ ಎಂಬ ಭಯದಿಂದ ತಮ್ಮ ಮೂಲ ಬೆಲೆಯನ್ನು 75 ಲಕ್ಷ ರೂ.ಗೆ ಇರಿಸಿಕೊಂಡಿದ್ದಾರೆ. ವಾಸ್ತವವಾಗಿ ಸರ್ಫರಾಜ್ ಕಳೆದ ಬಾರಿಯೂ ಮಾರಾಟವಾಗದೆ ಉಳಿದಿದ್ದರು. ಆಗ ಅವರು ತಮ್ಮ ಬೆಲೆಯನ್ನು ಕೇವಲ 50 ಲಕ್ಷ ರೂ. ನಿಗದಿಪಡಿಸಿದ್ದರು. ಆದರೆ, ಈ ಬಾರಿ ಅವರು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿರುವುದರಿಂದ ಅವರನ್ನು ಯಾವ ಫ್ರಾಂಚೈಸಿಯಾದರೂ ಖರೀದಿಸುವ ಸಾಧ್ಯತೆಗಳಿವೆ.

7 / 8
ಸರ್ಫರಾಜ್ 2015ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಮೊದಲ ಸೀಸನ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸರ್ಫರಾಜ್ ಅವರ ಆ ನಂತರದ ಪ್ರದರ್ಶನವು ವಿಶೇಷವೇನೂ ಆಗಿರಲಿಲ್ಲ. ಹೀಗಾಗಿ ಕಳೆದ ಒಂಬತ್ತು ವರ್ಷಗಳಲ್ಲಿ ಸರ್ಫರಾಜ್, ಐಪಿಎಲ್​ನಲ್ಲಿ ಆಡಿದ್ದು ಕೇವಲ 37 ಪಂದ್ಯಗಳು ಮಾತ್ರ. ಲೀಗ್‌ನಲ್ಲಿ ಅವರ ಪ್ರದರ್ಶನವು ಪ್ರಬಲವಾಗಿಲ್ಲದಿದ್ದರೂ, ಅವರಿಗೆ ಸೀಮಿತ ಅವಕಾಶಗಳೂ ಸಿಕ್ಕಿವೆ.

8 / 8