ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಫ್ರಾಂಚೈಸಿಗಳ ನಿದ್ದೆ ಕೆಡಿಸಿದ ಶ್ರೇಯಸ್ ಅಯ್ಯರ್

Shreyas Iyer: ರಣಜಿ ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್ ಸತತ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಅವರು ಭಾರತ ತಂಡಕ್ಕೆ ಮರಳುವ ಭರವಸೆ ಮೂಡಿಸಿದ್ದಾರೆ.ಇದಲ್ಲದೆ ರಣಜಿಯಲ್ಲಿನ ಅವರ ಈ ಶತಕದ ಇನ್ನಿಂಗ್ಸ್ ಐಪಿಎಲ್ ಮೆಗಾ ಹರಾಜಿನಲ್ಲಿ ಅವರ ಮೌಲ್ಯವನ್ನು ಹೆಚ್ಚಿಸಲಿದೆ.

|

Updated on: Nov 06, 2024 | 6:12 PM

ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಲುವಾಗಿ ಇನ್ನಿಲ್ಲದ ಪ್ರಯತ್ನ ಪಡುತ್ತಿರುವ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್​ಗೆ ಕಳೆದ ಕೆಲವು ತಿಂಗಳಿನಿಂದ ಯಾವುದು ಅಂದುಕೊಂಡಂತೆ ನಡೆಯುತ್ತಿಲ್ಲ. ಹೀಗಾಗಿಯೇ ಅಯ್ಯರ್ ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಇದಲ್ಲದೆ ಟೀಂ ಇಂಡಿಯಾದ ಮುಂಬರುವ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಪ್ರವಾಸಕ್ಕೂ ಅಯ್ಯರ್ ತಂಡದಲ್ಲಿ ಸ್ಥಾನ ಪಡೆದಿಲ್ಲ.

1 / 6
ಈ ನಡುವೆ ಬಿಡುಗಡೆಯಾದ ಐಪಿಎಲ್ ಆಟಗಾರರ ರಿಟೆನ್ಷನ್ ಪಟ್ಟಿಯಲ್ಲೂ ಶ್ರೇಯಸ್ ಅಯ್ಯರ್ ಅವರ ಹೆಸರು ಕಾಣಿಸಿಕೊಳ್ಳಲಿಲ್ಲ. ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದ ನಾಯಕತ್ವವಹಿಸಿಕೊಂಡು ತಂಡವನ್ನು ಚಾಂಪಿಯನ್‌ ಮಾಡಿದ್ದ ಅಯ್ಯರ್​ ಅವರನ್ನು ಕೆಕೆಆರ್ ಫ್ರಾಂಚೈಸಿ ಉಳಿಸಿಕೊಂಡಿರಲಿಲ್ಲ. ಹೀಗಾಗಿ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಅಯ್ಯರ್ ಅವರನ್ನು ಕಡಿಮೆ ಮೊತ್ತಕ್ಕೆ ತಮ್ಮ ಬತ್ತಳಿಕೆಗೆ ಹಾಕಿಕೊಳ್ಳುವ ಇರಾದೆಯಲ್ಲಿ ಕೆಲವು ಫ್ರಾಂಚೈಸಿಗಳಿದ್ದವು.

2 / 6
ಆದರೆ ತನ್ನ ಅಮೋಘ ಬ್ಯಾಟಿಂಗ್‌ ಪ್ರದರ್ಶನದ ಮೂಲಕ ಅಯ್ಯರ್, ಹರಾಜಿನಲ್ಲಿ ಭಾರಿ ಮೊತ್ತ ಪಡೆಯುವ ಸುಳಿವು ನೀಡಿದ್ದಾರೆ. ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಮುಂಬೈ ತಂಡದ ಪರ ಆಡುತ್ತಿರುವ ಅಯ್ಯರ್, ಟೂರ್ನಿಯಲ್ಲಿ ಸತತ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ತಾನು ಎಂತಹ ಆಟಗಾರ ಎಂಬುದನ್ನು ಸಾಭೀತುಪಡಿಸಿದ್ದಾರೆ.

3 / 6
ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿಯ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಅಯ್ಯರ್, ಒಡಿಶಾ ವಿರುದ್ಧ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ. ಇದು 2024-25ರ ರಣಜಿ ಟ್ರೋಫಿಯಲ್ಲಿ ಶ್ರೇಯಸ್ ಅಯ್ಯರ್ ಅವರ ಸತತ ಎರಡನೇ ಶತಕವಾಗಿದೆ. ಅಯ್ಯರ್ 14 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಕೇವಲ 101 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಅವರ ಪ್ರಥಮ ದರ್ಜೆ ವೃತ್ತಿ ಬದುಕಿನ 15ನೇ ಶತಕವಾಗಿದೆ. ಇದಕ್ಕೂ ಮುನ್ನ ಮಹಾರಾಷ್ಟ್ರ ವಿರುದ್ಧವೂ ಶತಕ ಬಾರಿಸಿದ್ದರು. ಆದರೆ ಇಂಜುರಿಯಿಂದಾಗಿ ಅಯ್ಯರ್​ಗೆ ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ.

4 / 6
ಇದೀಗ ಮತ್ತೊಮ್ಮೆ ತಂಡಕ್ಕೆ ಕಮ್ ಬ್ಯಾಕ್ ಮಾಡಿರುವ ಅಯ್ಯರ್, ಶತಕ ಬಾರಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇದಕ್ಕೂ ಮುನ್ನ ಅಯ್ಯರ್ ಮಹಾರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 190 ಎಸೆತಗಳಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್್​ಗಳ ಸಹಿತ 142 ರನ್ ಗಳಿಸಿದ್ದರು. ರಣಜಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಬಾರಿಸುವ ಮೂಲಕ ಶ್ರೇಯಸ್ ಅಯ್ಯರ್ ಫಾರ್ಮ್‌ಗೆ ಮರಳಿದ್ದು, ಇದೀಗ ಭಾರತ ತಂಡದಲ್ಲಿ ಪುನರಾಗಮನದತ್ತ ದೃಷ್ಟಿ ನೆಟ್ಟಿದ್ದಾರೆ.

5 / 6
ಇನ್ನು ಐಪಿಎಲ್ ವಿಚಾರಕ್ಕೆ ಬರುವುದಾದರೆ.. ಶ್ರೇಯಸ್ ಅಯ್ಯರ್ ಅವರನ್ನು ಕೆಕೆಆರ್ ಫ್ರಾಂಚೈಸಿ ಉಳಿಸಿಕೊಂಡಿರಲಿಲ್ಲ. ಆ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ತಂಡದ ಸಿಇಒ ವೆಂಕಿ ಮೈಸೂರು, ಅಯ್ಯರ್ ಅವರೇ ಹರಾಜಿಗೆ ಹೋಗಲು ನಿರ್ಧಾರ ಮಾಡಿದ್ದ ಕಾರಣದಿಂದಾಗಿ ಅವರನ್ನು ತಂಡದಿಂದ ಬಿಡುಗಡೆ ಮಾಡಬೇಕಾಯಿತು ಎಂದಿದ್ದರು. ಇದರರ್ಥ ಅಯ್ಯರ್ ಮುಂದಿನ ಆವೃತ್ತಿಯಲ್ಲಿ ಬೇರೆ ತಂಡದ ಪರ ಕಣಕ್ಕಿಳಿಯುವುದನ್ನು ಕಾಣಬಹುದಾಗಿದೆ.

6 / 6
Follow us
ಚುನಾವಣೆ ಗೆಲ್ಲಲು ತಂತ್ರಗಾರಿಕೆ ಸಾಕೆಂದು ಆಡಿಯೋದಲ್ಲಿ ಹೇಳಿರುವ ಹೆಚ್​ಡಿಕೆ

ಪುರುಷರು ಹೆದರಿ ಹಿಂದೆ ಸರಿಯುವಾಗ ಮುಂದೆ ಬಂದು ಹೆಬ್ಬಾವು ಹಿಡಿದ ಧೀರ ಮಹಿಳೆ!

ವಕ್ಫ್ ವಿರುದ್ಧ ನಡೆಯುತ್ತಿರುವ ಹೋರಾಟ ಎಲ್ಲ ಜಾತಿಗಳಿಗೆ ಸೇರಿದ್ದು: ಯತ್ನಾಳ್

ಬಿಗ್​ಬಾಸ್: ಹನುಮಂತನಿಗೆ ಸಾಕಾಗಿದೆ ಕ್ಯಾಪ್ಟನ್ಸಿ ರಗಳೆ

ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧಿಸಬೇಕೆಂದು ಹೇಳಿದ್ದು ನಾನು: ದೇವೇಗೌಡ

ಸಿಎಂ ಲೋಕಾಯುಕ್ತ ಅಧಿಕಾರಿಗಳ ಮುಂದೆ ಕೈಕಟ್ಟಿ ಕೂರೋದು ನಾಚಿಕೆಗೇಡು: ಅಶೋಕ

ಎಲ್ಲ ಸಚಿವರಿಗೆ 10-15 ಆಪ್ತ ಕಾರ್ಯದರ್ಶಿಗಳಿರುತ್ತಾರೆ ಎಂದ ಹೆಬ್ಬಾಳ್ಕರ್

CM ರಾಜೀನಾಮೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ BJP ನಾಯಕರು ಪೊಲೀಸ್​ ವಶಕ್ಕೆ

ಮುಖ್ಯಮಂತ್ರಿ ಪತ್ನಿಯ ವಿಚಾರಣೆ ಈಗಾಗಲೇ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು

ಧರಣಿ ವೇದಿಕೆಯಲ್ಲೇ ರಾತ್ರಿ ಊಟ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್