ಕಿವಿಯೊಳಗಿನ ಕೊಳೆಯಿಂದ ಕಿರಿಕಿರಿ ಉಂಟಾಗುತ್ತಿದೆಯೇ? ಈ ಮನೆಮದ್ದುಗಳನ್ನು ಬಳಸಿ ಅಪಾಯದಿಂದ ದೂರವಿರಿ

Edited By:

Updated on: Feb 07, 2022 | 7:30 AM

ಕಿವಿಯಲ್ಲಿ ಶೇಖರಣೆಯಾಗುವ ಕೊಳೆಯನ್ನು ಸ್ವಚ್ಛಗೊಳಿಸುವಲ್ಲಿ ಜನರು ಹೆಚ್ಚಾಗಿ ಸೋಮಾರಿತನ ತೋರುತ್ತಾರೆ. ಆದರೆ ಕಿವಿಯಿಂದ ಕೊಳೆಯನ್ನು ಸಮಯಕ್ಕೆ ಸರಿಯಾಗಿ ತೆಗೆದುಹಾಕದಿದ್ದರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ತಜ್ಞರ ಹೊರತಾಗಿ, ಕಿವಿಗಳನ್ನು ಸ್ವಚ್ಛಗೊಳಿಸುವ ಮನೆಮದ್ದುಗಳನ್ನು ಅನುಸರಿಸಬಹುದು.

1 / 5
ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯನ್ನು ಕಿವಿಯ ಕೊಳೆ ತೆಗೆಯಲು ಅನಾದಿ ಕಾಲದಿಂದಲೂ ಬಳಸಲಾಗುತ್ತಿದೆ. ಇದಕ್ಕಾಗಿ ಮೊದಲು ಬಾದಾಮಿ ಎಣ್ಣೆಯನ್ನು ಉಗುರುಬೆಚ್ಚಗೆ ಬೆಚ್ಚಗಾಗಿಸಿ ನಂತರ ಎರಡು ಮೂರು ಹನಿಗಳನ್ನು ಕಿವಿಗೆ ಹಾಕಿ. ಸ್ವಲ್ಪ ಸಮಯದ ನಂತರ ಕೊಳೆ ಮೃದುವಾಗುತ್ತದೆ ಮತ್ತು ಹೊರಬರಲು ಪ್ರಾರಂಭಿಸುತ್ತದೆ.

ಬಾದಾಮಿ ಎಣ್ಣೆ: ಬಾದಾಮಿ ಎಣ್ಣೆಯನ್ನು ಕಿವಿಯ ಕೊಳೆ ತೆಗೆಯಲು ಅನಾದಿ ಕಾಲದಿಂದಲೂ ಬಳಸಲಾಗುತ್ತಿದೆ. ಇದಕ್ಕಾಗಿ ಮೊದಲು ಬಾದಾಮಿ ಎಣ್ಣೆಯನ್ನು ಉಗುರುಬೆಚ್ಚಗೆ ಬೆಚ್ಚಗಾಗಿಸಿ ನಂತರ ಎರಡು ಮೂರು ಹನಿಗಳನ್ನು ಕಿವಿಗೆ ಹಾಕಿ. ಸ್ವಲ್ಪ ಸಮಯದ ನಂತರ ಕೊಳೆ ಮೃದುವಾಗುತ್ತದೆ ಮತ್ತು ಹೊರಬರಲು ಪ್ರಾರಂಭಿಸುತ್ತದೆ.

2 / 5

ಸಾಸಿವೆ ಎಣ್ಣೆ: ಕಿವಿಯೊಳಗಿನ ಕೊಳೆಯನ್ನು ತೆಗೆದುಹಾಕುವಲ್ಲಿ ಸಾಸಿವೆ ಎಣ್ಣೆಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಈ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿದ ನಂತರ ಅದನ್ನು ಕಿವಿಗೆ ಹಾಕಿಕೊಳ್ಳಿ. ಬಳಿಕ ಸುಲಭವಾಗಿ ಕಿವಿಯೊಳಗಿನ ಕೊಳೆಯನ್ನು ಸುಲಭವಾಗಿ ತೆಗೆದುಹಾಕಬಹುದು. ತೈಲದ ಗುಣಮಟ್ಟವು ಉತ್ತಮವಾಗಿರಬೇಕು ಎಂಬುದನ್ನು ಗಮನಿಸಿ.

3 / 5

ಆಪಲ್ ಸೈಡರ್ ವಿನೆಗರ್: ಇದಕ್ಕೆ ಹೈಡ್ರೋಜನ್ ಪೆರಾಕ್ಸೈಡ್ ಸೇರಿಸಿ ಮತ್ತು ಈ ಮಿಶ್ರಣವನ್ನು ಸಣ್ಣ ಪ್ರಮಾಣದಲ್ಲಿ ಕಿವಿಗೆ ಹಾಕಿ. ಸ್ವಲ್ಪ ಸಮಯದ ನಂತರ ಕೊಳೆಯನ್ನು ಕಿವಿಯಿಂದ ತೆಗೆದುಹಾಕಬಹುದು.

4 / 5

ಈರುಳ್ಳಿ ರಸ: ಕಿವಿಯ ಕೊಳೆಯನ್ನು ತೆಗೆದುಹಾಕಲು ನೀವು ಈರುಳ್ಳಿ ರಸದ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಇದಕ್ಕಾಗಿ, ಈರುಳ್ಳಿ ರಸದಲ್ಲಿ ಹತ್ತಿಯನ್ನು ನೆನೆಸಿ. ಸ್ವಲ್ಪ ಸಮಯದವರೆಗೆ ಕಿವಿಗಳನ್ನು ಮುಚ್ಚಿ. ವಾರಕ್ಕೊಮ್ಮೆ ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ವ್ಯತ್ಯಾಸ ಕಾಣಬಹುದು.

5 / 5

ಬೆಚ್ಚಗಿನ ನೀರು: ನೀವು ಬಯಸಿದರೆ ಉಗುರು ಬೆಚ್ಚಗಿನ ನೀರಿನಿಂದ ಕಿವಿಯ ಕೊಳೆಯನ್ನು ತೆಗೆಯಬಹುದು. ಇದನ್ನು ಬಳಸಲು ಹತ್ತಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ ನಂತರ ಅದರ ಸಹಾಯದಿಂದ ನೀರನ್ನು ಕಿವಿಗೆ ಸುರಿಯಿರಿ.

TV9 Web

TV9 Kannada

Read More
Loading...
Unable to load recommendations.
Follow Us