Nothing Phone 1: ನಥಿಂಗ್ ಫೋನ್ 2 ಬಿಡುಗಡೆಗೆ ಕ್ಷಣಗಣನೆ: ನಥಿಂಗ್ ಫೋನ್ 1 ಮೇಲೆ ಊಹಿಸಲಾಗದಷ್ಟು ಡಿಸ್ಕೌಂಟ್

|

Updated on: Jul 09, 2023 | 6:55 AM

Flipkart: ನಥಿಂಗ್ ಫೋನ್ 2 ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಅತ್ತ ಹಿಂದಿನ ಆವೃತ್ತಿಯ ನಥಿಂಗ್ ಫೋನ್ 1 ಮೇಲೆ ಬಂಪರ್ ರಿಯಾಯಿತಿ ಘೋಷಿಸಲಾಗಿದೆ. ಅತಿ ಕಡಿಮೆ ಬೆಲೆಗೆ ನಥಿಂಗ್ ಫೋನ್ 1 ಸೇಲ್ ಕಾಣುತ್ತಿದೆ.

1 / 7
ನಥಿಂಗ್ ಕಂಪನಿಯ ದ್ವಿತೀಯ ಸ್ಮಾರ್ಟ್​ಫೋನ್ ನಥಿಂಗ್ ಫೋನ್ 2 ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಈ ನೂತನ ಮೊಬೈಲ್ ಇದೇ ಜುಲೈ 11 ರಂದು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಅನಾವರಣಗೊಳ್ಳಲಿದೆ.

2 / 7
ನಥಿಂಗ್ ಫೋನ್ 2 ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಅತ್ತ ಹಿಂದಿನ ಆವೃತ್ತಿಯ ನಥಿಂಗ್ ಫೋನ್ 1 ಮೇಲೆ ಬಂಪರ್ ರಿಯಾಯಿತಿ ಘೋಷಿಸಲಾಗಿದೆ. ಅತಿ ಕಡಿಮೆ ಬೆಲೆಗೆ ನಥಿಂಗ್ ಫೋನ್ 1 ಸೇಲ್ ಕಾಣುತ್ತಿದೆ.

3 / 7
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ನಥಿಂಗ್ ಫೋನ್ 1 ಶೇ. 23 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಇದರ 8GB RAM + 256GB ಸ್ಟೋರೇಜ್‌ ವೇರಿಯಂಟ್​ನ ಮೂಲಬೆಲೆ 39,999ರೂ., ಆದರೀಗ ಡಿಸ್ಕೌಂಟ್​ನಲ್ಲಿ ಇದನ್ನು ನೀವು 30,499ರೂ. ಗಳಿಗೆ ಖರೀದಿಸಬಹುದಾಗಿದೆ.

4 / 7
ನಥಿಂಗ್ ಫೋನ್ (1) ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಿದ್ದು, ಅತ್ಯಾಧುನಿಕ ಗ್ಲಿಫ್ ಬಳಕೆದಾರ ಇಂಟರ್ಫೇಸ್​ನ್ನು ಹೊಂದಿದೆ. ಇದು 6.55-ಇಂಚಿನ ಪೂರ್ಣ HD+ OLED ಪರದೆಯನ್ನು ಪಡೆದುಕೊಂಡಿದೆ. ಬಲಿಷ್ಠವಾದ ಕ್ವಾಲ್ಕಾಮ್ ಸ್ನಾಪ್‌ ಡ್ರಾಗನ್ 778G+ SoC ಪ್ರೊಸೆಸರ್‌ ಬಲವನ್ನು ಪಡೆದಿದೆ.

5 / 7
ಫೋನ್‌ನ ಹಿಂಬದಿಯ ಕ್ಯಾಮೆರಾ ಡ್ಯುಯಲ್ 50 MP, ಮುಂಭಾಗದ ಕ್ಯಾಮೆರಾ 16MP ಹೊಂದಿದೆ. Sony IMX766 ಫ್ಲ್ಯಾಗ್‌ಶಿಪ್ ಕ್ಯಾಮೆರಾ ಚಾಲಿತವಾಗಿದೆ. ಇದು ರಾತ್ರಿ ಮೋಡ್​ನ್ನು ಸಹ ಹೊಂದಿದೆ. ಮತ್ತು ಈ ಸ್ಮಾರ್ಟ್‌ಫೋನ್ 4,500mAh ಬ್ಯಾಟರಿಯನ್ನು ಹೊಂದಿದೆ.

6 / 7
ನಥಿಂಗ್ ಫೋನ್ (1) ಅನ್ನು ಒಮ್ಮೆ ಚಾರ್ಜ್​ ಮಾಡಿದರೆ 18ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ. ಎರಡು ದಿನಗಳವರೆಗೆ ಸ್ಟ್ಯಾಂಡ್​ಬೈ ಮೋಡ್​ನಲ್ಲಿ ಸಹ ಬಳಸಬಹುದಾಗಿದೆ. ಈ ಫೋನ್​​ ವೇಗದ ಚಾರ್ಜಿಂಗ್​​ ಸಾಮರ್ಥ್ಯವನ್ನು ಒಳಗೊಂಡಿದೆ. ಕೇವಲ 30 ನಿಮಿಷಗಳಲ್ಲಿ 0 ದಿಂದ 50ಗೆ ಚಾರ್ಜ್​ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

7 / 7
ಇನ್ನು ಈ ಸ್ಮಾರ್ಟ್​​ಫೋನ್​ನಲ್ಲಿ ಕಾಲ್​ ಬರುತ್ತಿರುವಾಗ, ಮೆಸೇಜ್ ಬರುವಾಗ, ನೋಟಿಫಿಕೇಶನ್​ಗಳು ಬಂದಾಗ, ಚಾರ್ಜ್​ಗೆ ಅಳವಡಿಸಿದಾಗ ಗೊತ್ತಾಗುವ ಕಾರಣಕ್ಕಾಗಿ ಮೊಬೈಲ್​ನ ಹಿಂಭಾಗದಲ್ಲಿ ಲೈಟ್​ಗಳನ್ನು ಅಳವಡಿಸಲಾಗಿದೆ.