Updated on: Jul 08, 2023 | 2:37 PM
ನಟ ಯಶ್ ಹಠಾತ್ತನೆ ಮಲೇಷಿಯಾಕ್ಕೆ ತೆರಳಿದ್ದಾರೆ. ಅಲ್ಲಿ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ.
ಪ್ರೈವೇಟ್ ಚಾರ್ಟೆಡ್ ವಿಮಾನದಲ್ಲಿ ಗೆಳೆಯರೊಟ್ಟಿಗೆ ಯಶ್ ಮಲೇಷಿಯಾಕ್ಕೆ ಪ್ರವಾಸ ಬೆಳೆಸಿದ್ದರು.
ಮಲೇಷಿಯಾನಲ್ಲಿ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದ್ದು ಐಶಾರಾಮಿ ಬೆಂಗಾಲು ವಾಹನಗಳ ನಡುವೆ ಯಶ್ ಸಾಗಿದ್ದು ಅದ್ಭುತವಾಗಿತ್ತು.
ಯಶ್, ಮಲೇಷಿಯಾನಲ್ಲಿ ಚಿನ್ನದ ಶೋರೂಂ ಒಂದರ ಉದ್ಘಾಟನೆಗಾಗಿ ತೆರಳಿದ್ದರು.
ಮಲೇಷಿಯಾದಲ್ಲಿನ ಭಾರತೀಯರು, ಕನ್ನಡಿಗರು ಯಶ್ರನ್ನು ಭೇಟಿಯಾಗಿ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.
ಮಲೇಷಿಯಾದ ಸ್ಥಳೀಯರು ಸಹ ಯಶ್ ಅನ್ನು ಕಾಣಲು ಮುಗಿಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಮಲೇಷಿಯಾಕ್ಕೆ ಭೇಟಿ ನೀಡಿದ ಕಲಾವಿದರೊಬ್ಬರು ಯಶ್ರ ಕುಟುಂಬದ ಚಿತ್ರವನ್ನು ಅವರಿಗೆ ಉಡುಗೊರೆಯಾಗಿ ನೀಡಿದರು.