Updated on: Jul 08, 2023 | 3:06 PM
ನಟ ‘ಮೆಗಾ ಸ್ಟಾರ್’ ಚಿರಂಜೀವಿ ಅವರು ಸಖತ್ ಖುಷಿಯಾಗಿದ್ದಾರೆ. ಕೆಲವೇ ದಿನಗಳ ಹಿಂದೆ ಅವರ ಮಗ ರಾಮ್ ಚರಣ್ ಮತ್ತು ಸೊಸೆ ನಿಹಾರಿಕಾಗೆ ಹೆಣ್ಣು ಮಗು ಜನಿಸಿತು. ಆ ಸಂಭ್ರಮದ ನಡುವೆಯೇ ಅವರು ವಿದೇಶಕ್ಕೆ ತೆರಳಿದ್ದಾರೆ.
ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿರುವ ಚಿರಂಜೀವಿ ಅವರು ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ಅದಕ್ಕಾಗಿ ಐಷಾರಾಮಿ ವಿಮಾನದ ಮೂಲಕ ಅವರು ಪ್ರಯಾಣ ಮಾಡಿದ್ದಾರೆ.
ಟಾಲಿವುಡ್ನಲ್ಲಿ ಚಿರಂಜೀವಿ ಅವರಿಗೆ ಸಖತ್ ಬೇಡಿಕೆ ಇದೆ. ಪ್ರತಿ ಸಿನಿಮಾಗೆ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆಯೇ ಅವರ ಲೈಫ್ ಸ್ಟೈಲ್ ಇದೆ. ಈ ಫೋಟೋಗಳೇ ಅದಕ್ಕೆ ಸಾಕ್ಷಿ.
ಚಿರಂಜೀವಿ ಅವರ ಜೊತೆ ಪತ್ನಿ ಸುರೇಖಾ ಕೂಡ ಸಾಥ್ ನೀಡಿದ್ದಾರೆ. ಇಬ್ಬರೂ ಜೊತೆಯಾಗಿ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈ ಐಷಾರಾಮಿ ವಿಮಾನದ ಒಳಗೆ ಅವರು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಚಿರಂಜೀವಿ ಅವರು ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ತಮ್ಮ ಬಗ್ಗೆ ಅಪ್ಡೇಟ್ ನೀಡುತ್ತಾ ಇರುತ್ತಾರೆ. ವಿಮಾನದಲ್ಲಿ ಕ್ಲಿಕ್ಕಿಸಿದ ಈ ಫೋಟೋಗಳನ್ನು ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಚಿರಂಜೀವಿ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಅವರು ಕುಟುಂಬದ ಸದಸ್ಯರ ಜೊತೆ ಹೆಚ್ಚು ಸಮಯ ಕಳೆಯಲು ಇಷ್ಟ ಪಡುತ್ತಾರೆ. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಫ್ಯಾಮಿಲಿಗೆ ಅವರು ಟೈಮ್ ನೀಡುತ್ತಾರೆ.
‘ಮೆಗಾ ಸ್ಟಾರ್’ ಚಿರಂಜೀವಿ ಅವರಿಗೆ ಈಗ 67 ವರ್ಷ ವಯಸ್ಸು. ಈಗಲೂ ಅವರು ಟಾಲಿವುಡ್ನಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ. ಅವರು ನಟಿಸಿರುವ ‘ಭೋಲಾ ಶಂಕರ್’ ಸಿನಿಮಾ ಆಗಸ್ಟ್ 11ರಂದು ಬಿಡುಗಡೆ ಆಗಲಿದೆ.