Cyclone Biparjoy: ಬಾಹ್ಯಾಕಾಶದಿಂದ ಬಿಪೋರ್​​ಜಾಯ್ ಚಂಡಮಾರುತ ಹೇಗೆ ಕಾಣಿಸುತ್ತದೆ?; ಚಿತ್ರಗಳಲ್ಲಿ ನೋಡಿ

ರಶ್ಮಿ ಕಲ್ಲಕಟ್ಟ

Updated on: Jun 15, 2023 | 2:50 PM

ಬಾಹ್ಯಾಕಾಶದಿಂದ ನೋಡಿದರೆ ಬಿಪೋರ್​​ಜಾಯ್ ಚಂಡಮಾರುತ ಹೇಗೆ ಕಾಣುತ್ತದೆ? ಯುಎಇ ಗಗನಯಾತ್ರಿ ಸುಲ್ತಾನ್ ಅಲ್ ನೆಯಾಡಿ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸೆರೆ ಹಿಡಿದಿರುವ ಚಿತ್ರಗಳು ಇಲ್ಲಿವೆ.

1 / 8
ಬಿಪೋರ್​​ಜಾಯ್  ಚಂಡಮಾರುತದ ಚಿತ್ರವನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಯೊಬ್ಬರು ಸೆರೆ ಹಿಡಿದಿದ್ದಾರೆ.

ಬಿಪೋರ್​​ಜಾಯ್ ಚಂಡಮಾರುತದ ಚಿತ್ರವನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಯೊಬ್ಬರು ಸೆರೆ ಹಿಡಿದಿದ್ದಾರೆ.

2 / 8

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗಗನಯಾತ್ರಿ ಸುಲ್ತಾನ್ ಅಲ್ ನೆಯಾಡಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಅರಬ್ಬೀ ಸಮುದ್ರದ ಮೇಲೆ ಬಿಪೋರ್​​ಜಾಯ್ ಚಂಡಮಾರುತದ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ

3 / 8

ನನ್ನ ಹಿಂದಿನ ವಿಡಿಯೊದಲ್ಲಿ ಭರವಸೆ ನೀಡಿದಂತೆ ಬಿಪೋರ್​​ಜಾಯ್ ಚಂಡಮಾರುತವು ಅರಬ್ಪೀ ಸಮುದ್ರದಲ್ಲಿ ರೂಪುಗೊಳ್ಳುವ ಕೆಲವು ಚಿತ್ರಗಳನ್ನು ನಾನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಎರಡು ದಿನಗಳಲ್ಲಿ ಕ್ಲಿಕ್ ಮಾಡಿದ್ದೇನೆ ಎಂದು ಅಲ್ ನೆಯಾಡಿ ಟ್ವೀಟ್ ಮಾಡಿದ್ದಾರೆ.

4 / 8

ಎರಡು ದಿನಗಳ ಹಿಂದೆ ಅರಬ್ಬೀ ಸಮುದ್ರದ ಮೇಲೆ ದೈತ್ಯಾಕಾರದ ಚಂಡಮಾರುತವು ಭಾರತದ ಕರಾವಳಿಯತ್ತ ಸಾಗುತ್ತಿರುವುದನ್ನು ತೋರಿಸುವ ವಿಡಿಯೊವನ್ನು ಅಲ್ ನೆಯಾಡಿ ಹಂಚಿಕೊಂಡಿದ್ದರು.

5 / 8

ಗುರುವಾರ ಸಂಜೆ ಬಿಪೋರ್​​ಜಾಯ್ ಚಂಡಮಾರುತ ಗುಜರಾತಿನ ಕಚ್‌ಗೆ ಅಪ್ಪಳಿಸುವ ನಿರೀಕ್ಷೆಯಿದೆ. 74,000 ಕ್ಕೂ ಹೆಚ್ಚು ಜನರನ್ನು ಕರಾವಳಿ ಪ್ರದೇಶಗಳಿಂದ ಸುರಕ್ಷಿತ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ

6 / 8

ಬಿಪೋರ್‌ಜಾಯ್ ಚಂಡಮಾರುತವು ಪ್ರಸ್ತುತ ಗುಜರಾತ್ ಕರಾವಳಿಯಿಂದ ಸುಮಾರು 200 ಕಿಮೀ ದೂರದಲ್ಲಿ ಮಾಂಡ್ವಿ ಮತ್ತು ಕರಾಚಿ ನಡುವೆ ಜಖೌ ಬಂದರಿನ ಬಳಿ ಸಂಜೆ 4-8 ಗಂಟೆಯ ನಡುವೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

7 / 8

ಚಂಡಮಾರುತವು ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳು ಮತ್ತು ಪಕ್ಕದ ಪಾಕಿಸ್ತಾನದ ಕರಾವಳಿಯಲ್ಲಿ ಭಾರೀ ಮಳೆ ಮತ್ತು ಪ್ರಬಲ ಗಾಳಿಗೆ ಕಾರಣವಾಗಲಿದೆ

8 / 8

ವರ್ಗ 3 ರ ಅತ್ಯಂತ ತೀವ್ರ ಚಂಡಮಾರುತ ಎಂದು ವರ್ಗೀಕರಿಸಿರುವ ಬಿಪೋರ್​​ಜಾಯ್ ಚಂಡಮಾರುತವು ಗಂಟೆಗೆ 120-130 ಕಿಮೀ ವೇಗದಲ್ಲಿ ಗಾಳಿಯನ್ನು ತರುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.

Published On - 2:48 pm, Thu, 15 June 23

ರಶ್ಮಿ ಕಲ್ಲಕಟ್ಟ

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Loading...
Unable to load recommendations.
Follow Us