
ಉಡುಪಿಯಲ್ಲಿ ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಶ್ರೀಕೃಷ್ಣನ ಪರ್ಯಾಯ (Paryaya) ಕಾರ್ಯಕ್ರಮ ಇಂದಿನಿಂದ ಆರಂಭವಾಗಿದೆ.

ಪುತ್ತಿಗೆ ಮಠದ ಶ್ರೀಗಳ ಪರ್ಯಾಯ ಮೆರವಣಿಗೆಯಲ್ಲಿ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಶಿಷ್ಯರಾದ ಸುಶೀಂದ್ರ ತೀರ್ಥರು ಭಾಗಿಯಾಗಿದ್ದಾರೆ.

ಉಡುಪಿಯ ಜೋಡುಕಟ್ಟೆಯಿಂದ ಪರ್ಯಾಯ ಮೆರವಣಿಗೆ ಆರಂಭವಾಗಿ ರಥ ಬೀದಿಯವರೆಗೂ ಸಾಗಿತು.

ಮೆರವಣಿಗೆಯ ಕೊನೆಯಲ್ಲಿ ಶ್ರೀ ಸುಗುಣೇಂದ್ರ ತೀರ್ಥರು ಹಾಗೂ ಸುಶ್ರೀಂದ್ರ ತೀರ್ಥರು ವಾಹನ ಪಲ್ಲಕ್ಕಿ ಏರಿ ಬಂದರು.

ಪುತ್ತಿಗೆ ಮಠ ಪರ್ಯಾಯ ಮೆರವಣಿಯಲ್ಲಿ ಸಪ್ತ ಮಠಾಧೀಶರು ಗೈರಾಗಿದ್ದಾರೆ.

ಮೆರವಣಿಯಲ್ಲಿ ಹತ್ತಾರು ಟ್ಯಾಬ್ಲೋಗಳು ಸಾಗಿದ್ದು, ಅಯೋಧ್ಯೆ ರಾಮ ಮಂದಿರದ ಟ್ಯಾಬ್ಲೋ ಕೂಡ ಕಾಣಿಸಿತು.

ರಾಜ್ಯದ ವಿವಿಧ ಭಾಗಗಳ ಕಲಾತಂಡಗಳು ಮೆರವಣಿಯಲ್ಲಿ ಸಾಗಿದವು, ಚಂಡೆ ಬಳಗ ಭಜನಾ ತಂಡಗಳ ಕಲರವ, ಹುಲಿ ವೇಷ ಸಹಿತ ವಿವಿಧ ವೇಷಧಾರಿಗಳ ಅಬ್ಬರ ನಡೆಯಿತು.

ಪರ್ಯಾಯ ಮೆರವಣಿಗೆಯಲ್ಲಿ ರಾಜಕೀಯ ಗಣ್ಯರಾದ ಮಾಜಿ ಸಚಿವ ಸುನೀಲ್ ಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಭಾಗಿಯಾದರು.

ಪರ್ಯಾಯ ಮೆರವಣಿಗೆಯಲ್ಲಿ ಭಕ್ತ ಸಾಗರವೇ ಹರಿದು ಬಂದಿತು. ಬೆಳ್ಳಂಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಮೆರವಣಿಯಲ್ಲಿ ಸಾಗಿದರು.

ಪುತ್ತಿಗೆ ಮಠದ ಪರ್ಯಾಯೋತ್ಸವ ಮೆರವಣಿಗೆಯಲ್ಲಿ ಸಾಗಿದ ಟ್ಯಾಬ್ಲೋ

ಪುತ್ತಿಗೆ ಮಠ ಪರ್ಯಾಯ ಮೆರವಣಿಗೆಯಲ್ಲಿ ಸಾಗಿದ ಶ್ರೀರಾಮನ ಟ್ಯಾಬ್ಲೋ
Published On - 7:56 am, Thu, 18 January 24