US Open 2023: ಹಾಲಿ ಚಾಂಪಿಯನ್ ಅಲ್ಕರಾಝ್​ಗೆ ಸೋಲು! ಮೆಡ್ವೆಡೆವ್- ಜೊಕೊವಿಚ್ ನಡುವೆ ಫೈನಲ್ ಫೈಟ್

|

Updated on: Sep 09, 2023 | 9:37 AM

US Open 2023: ಯುಎಸ್ ಓಪನ್ 2023 ರ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ-ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಝ್​ರನ್ನು ಮಣಿಸಿದ ಡೇನಿಯಲ್ ಮೆಡ್ವೆಡೆವ್ ಪ್ರಶಸ್ತಿ ಸುತ್ತಿಗೆ ಕಾಲಿರಿಸಿದ್ದಾರೆ.ಮೆಡ್ವೆಡೆವ್ 7-6, 6-1, 3-6, 6-3 ಸೆಟ್‌ಗಳಿಂದ ಅಲ್ಕರಾಝ್​ರನ್ನು ಸೋಲಿಸಿ ಈ ವರ್ಷದ ಯುಎಸ್ ಓಪನ್‌ನ ಫೈನಲ್‌ಗ್ಗೆ ಲಗ್ಗೆ ಇಟ್ಟಿದ್ದು, ಪ್ರಶಸ್ತಿ ಸುತ್ತಿನಲ್ಲಿ ನೊವಾಕ್ ಜೊಕೊವಿಚ್​ರನ್ನು ಎದುರಿಸಲಿದ್ದಾರೆ.

1 / 7
ಯುಎಸ್ ಓಪನ್ 2023 ರ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ-ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾಝ್​ರನ್ನು ಮಣಿಸಿದ ಡೇನಿಯಲ್ ಮೆಡ್ವೆಡೆವ್ ಪ್ರಶಸ್ತಿ ಸುತ್ತಿಗೆ ಕಾಲಿರಿಸಿದ್ದಾರೆ.

2 / 7
ಮೆಡ್ವೆಡೆವ್ 7-6, 6-1, 3-6, 6-3 ಸೆಟ್‌ಗಳಿಂದ ಅಲ್ಕರಾಝ್​ರನ್ನು ಸೋಲಿಸಿ ಈ ವರ್ಷದ ಯುಎಸ್ ಓಪನ್‌ನ ಫೈನಲ್‌ಗ್ಗೆ ಲಗ್ಗೆ ಇಟ್ಟಿದ್ದು,  ಪ್ರಶಸ್ತಿ ಸುತ್ತಿನಲ್ಲಿ ನೊವಾಕ್ ಜೊಕೊವಿಚ್​ರನ್ನು ಎದುರಿಸಲಿದ್ದಾರೆ.

3 / 7
ಮೊದಲ ಸೆಟ್ ತೀವ್ರ ಪೈಪೋಟಿಯಿಂದ ಕೂಡಿತ್ತು. ಹೀಗಾಗಿ ಆಟ ಟೈ-ಬ್ರೇಕ್‌ಗೆ ಹೋಯಿತು. ಇಲ್ಲಿ ಮೇಲುಗೈ ಸಾಧಿಸಿದ ಮೆಡ್ವೆಡೆವ್ ಟೈ-ಬ್ರೇಕ್ ಅನ್ನು 7-3 ಅಂತರದಿಂದ ಗೆದ್ದು ಬೀಗಿದರು. ಆದರೆ ಎರಡನೇ ಸೆಟ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿದ ಮೆಡ್ವೆಡೆವ್, ಅಲ್ಕರಾಝ್ ಅವರ ಸರ್ವ್‌ಗಳನ್ನು ಮುರಿದು 6-1 ಅಂಕಗಳೊಂದಿಗೆ ಸೆಟ್ ಅನ್ನು ಮುಗಿಸಿದರು.

4 / 7
ಆದಾಗ್ಯೂ, ಅಲ್ಕರಾಝ್ ಮೂರನೇ ಸೆಟ್‌ನಲ್ಲಿ ಮೆಡ್ವೆಡೆವ್‌ಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾದರು. ಎರಡು ಬ್ರೇಕ್ ಪಾಯಿಂಟ್‌ಗಳನ್ನು ಉಳಿಸಿದ ಅಲ್ಕರಾಝ್, ಮೆಡ್ವೆಡೆವ್ ಮಾಡಿದ ತಪ್ಪುಗಳ ಲಾಭವನ್ನು ಪಡೆದು ಮೂರನೇ ಸೆಟ್ ಅನ್ನು 6-3 ರಿಂದ ಗೆದ್ದುಕೊಂಡರು. ಈ ಗೆಲುವು ಪಂದ್ಯಕ್ಕೆ ಹೊಸ ಜೀವ ತುಂಬಿ ರೋಚಕ ನಾಲ್ಕನೇ ಸೆಟ್‌ಗೆ ವೇದಿಕೆ ಕಲ್ಪಿಸಿತು.

5 / 7
ನಾಲ್ಕನೇ ಸೆಟ್‌ನಲ್ಲಿ ಇಬ್ಬರೂ ಆಟಗಾರರಿಂದ ತೀವ್ರ ಪೈಪೋಟಿ ಕಂಡು ಬಂತು. ಆದರೆ ಸೆಟ್‌ನ ಆರಂಭದಲ್ಲಿ ಅಲ್ಕರಾಝ್ ಅವರ ಸರ್ವ್ ಅನ್ನು ಮುರಿಯುವಲ್ಲಿ ಯಶಸ್ವಿಯಾದ ಮೆಡ್ವೆಡೆವ್, ನಾಲ್ಕನೇ ಸೆಟ್ ಅನ್ನು 6-3 ರಿಂದ ಗೆದ್ದು ಪ್ರಶಸ್ತಿ ಸುತ್ತಿಗೆ ಕಾಲಿರಿಸಿದರು.

6 / 7
ಇತ್ತ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಅಮೆರಿಕದ ಬೆನ್ ಶೆಲ್ಟನ್ ಅವರನ್ನು ಎದುರಿಸಿದ್ದ ಜೊಕೊವಿಚ್ ಮೊದಲ ಎರಡು ಸೆಟ್‌ಗಳನ್ನು ಸುಲಭವಾಗಿ ಗೆದ್ದರು. ಆದರೆ, ಅಮೆರಿಕದ ಟೆನಿಸ್ ತಾರೆ ಮೂರನೇ ಸೆಟ್​ನಲ್ಲಿ ತಿರುಗೇಟು ನೀಡಿದರು. ಹೀಗಾಗಿ ಈ ಸೆಟ್ ಟೈಬ್ರೇಕರ್‌ಗೆ ಹೋಯಿತು. ಆದರೆ, ಜೊಕೊವಿಚ್ ಪ್ರಬಲ ಆಡದ ಮುಂದೆ ಶೆಲ್ಟನ್ ಸೋಲಪ್ಪಿಕೊಳ್ಳಲೇಬೇಕಾಯಿತು. ಅಂತಿಮವಾಗಿ ಜೊಕೊವಿಚ್ 6-3, 6-2, 7-6 (7-4) ಸೆಟ್​ಗಳಿಂದ ಜಯ ಸಾಧಿಸಿದರು.

7 / 7
ಇದರೊಂದಿಗೆ ಸರ್ಬಿಯಾದ ಟೆನಿಸ್ ಸ್ಟಾರ್ ಜೊಕೊವಿಚ್ 10 ನೇ ಬಾರಿ ಯುಎಸ್ ಓಪನ್‌ನ ಫೈನಲ್‌ಗೆ ಲಗ್ಗೆ ಇಟ್ಟಿದ್ದು, ಇತ್ತ ರಷ್ಯಾದ ಟೆನಿಸ್ ತಾರೆ ಡೇನಿಯಲ್ ಮೆಡ್ವೆಡೆವ್ ಮೂರನೇ ಬಾರಿಗೆ ಯುಎಸ್ ಓಪನ್‌ನ ಫೈನಲ್‌ ತಲುಪಿದದ್ದಾರೆ. ಇನ್ನು ಈ ಹಿಂದೆ ಯುಎಸ್ ಓಪನ್ ಫೈನಲ್‌ನಲ್ಲಿ ಮೆಡ್ವೆಡೆವ್, ಜೊಕೊವಿಚ್ ಅವರನ್ನು ಸೋಲಿಸಿದ್ದರು. ಹೀಗಾಗಿ ಈ ಬಾರಿ ಆ ಸೋಲಿನ ಸೇಡು ತೀರಿಸಿಕೊಳ್ಳಲು ಸರ್ಬಿಯಾದ ಟೆನಿಸ್ ತಾರೆಗೆ ಅವಕಾಶ ಸಿಕ್ಕಿದೆ.

Published On - 9:34 am, Sat, 9 September 23