ಫೈನಲ್​ನಲ್ಲಿ ಮುಗ್ಗರಿಸಿದ ಕನ್ನಡಿಗ ರೋಹನ್ ಬೋಪಣ್ಣ; ಯುಎಸ್ ಓಪನ್ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನ..!

|

Updated on: Sep 09, 2023 | 9:03 AM

US Open 2023: ಬರೋಬ್ಬರಿ 13 ವರ್ಷಗಳ ಬಳಿಕ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ್ದ ಕನ್ನಡಿಗ ರೋಹನ್ ಬೋಪಣ್ಣ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮತೊಮ್ಮೆ ವಿಫಲರಾಗಿದ್ದಾರೆ. ಯುಎಸ್ ಓಪನ್ ಪುರುಷರ ಡಬಲ್ಸ್‌ ವಿಭಾಗದಲ್ಲಿ ಫೈನಲ್ ತಲುಪಿದ್ದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಫೈನಲ್​ನಲ್ಲಿ ಮುಗ್ಗರಿಸಿದೆ.

1 / 7
ಬರೋಬ್ಬರಿ 13 ವರ್ಷಗಳ ಬಳಿಕ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ್ದ ಕನ್ನಡಿಗ ರೋಹನ್ ಬೋಪಣ್ಣ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಮತೊಮ್ಮೆ ವಿಫಲರಾಗಿದ್ದಾರೆ. ಯುಎಸ್ ಓಪನ್ ಪುರುಷರ ಡಬಲ್ಸ್‌ ವಿಭಾಗದಲ್ಲಿ ಫೈನಲ್ ತಲುಪಿದ್ದ  ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಫೈನಲ್​ನಲ್ಲಿ ಮುಗ್ಗರಿಸಿದೆ.

2 / 7
ಸೆಮಿಫೈನಲ್‌ನಲ್ಲಿ  ಫ್ರೆಂಚ್ ಜೋಡಿಯನ್ನು 7-6, 6-2 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದ ರೋಹನ್ ಬೋಪಣ್ಣ ಇದರೊಂದಿಗೆ 13 ವರ್ಷಗಳ ನಂತರ ಗ್ರ್ಯಾನ್‌ಸ್ಲಾಮ್‌ನಲ್ಲಿ ಪುರುಷರ ಡಬಲ್ಸ್‌ನಲ್ಲಿ ಫೈನಲ್ ತಲುಪಿದ್ದ ದಾಖಲೆ ಬರೆದಿದ್ದರು. ಇದರೊಂದಿಗೆ ಗ್ರ್ಯಾಂಡ್ ಸ್ಲಾಮ್ ಫೈನಲ್ ತಲುಪಿದ ಅತ್ಯಂತ ಹಿರಿಯ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

3 / 7
ಆದರೆ ಫೈನಲ್ ಪಂದ್ಯದಲ್ಲಿ ಅಮೆರಿಕದ ರಾಜೀವ್ ರಾಮ್ ಮತ್ತು ಯುನೈಟೆಡ್ ಕಿಂಗ್‌ಡಂನ ಜೋ ಸಾಲಿಸ್‌ಬರಿ ಜೋಡಿಯನ್ನು ಎದುರಿಸಿದ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ಫೈನಲ್​ನಲ್ಲಿ 6-2, 3-6, 4-6 ಅಂತರದಿಂದ ಸೋತು ಪ್ರಶಸ್ತಿಯಿಂದ ವಂಚಿತವಾಯಿತು.

4 / 7
ಫೈನಲ್‌ನಲ್ಲಿ ರಾಜೀವ್ ರಾಮ್-ಜೋ ಸಾಲಿಸ್‌ಬರಿ ಜೋಡಿಯ ವಿರುದ್ಧ ಆರಂಭಿಕ ಎಡವಟ್ಟು ಮಾಡಿಕೊಂಡ ಬೋಪಣ್ಣ ಜೋಡಿ ಮೊದಲ ಸೆಟ್‌ನಲ್ಲಿ 2-6 ಅಂತರದ ಸೋಲು ಕಂಡಿತು. ಎರಡನೇ ಸೆಟ್‌ನಲ್ಲಿ ಪ್ರಬಲ ಪುನರಾಗಮನ ಮಾಡಿ 6-3 ರಿಂದ ಗೆಲುವು ಸಾಧಿಸಿತು. ಆದರೆ ಮೂರನೇ ಸೆಟ್‌ನಲ್ಲಿ ಎದುರಾಳಿ ಎದುರು ಮಂಕಾದ  ಕನ್ನಡಿಗ ಬೋಪಣ್ಣ ಜೋಡಿ 4-6 ಅಂತರದಿಂದ ಸೋಲೊಪ್ಪಿಕೊಂಡಿತು.

5 / 7
ಈ ಮೂಲಕ ವೃತ್ತಿ ಬದುಕಿನ ಮೊದಲನೇ ಗ್ರ್ಯಾಂಡ್ ಸ್ಲಾಮ್ ಗೆಲ್ಲುವ ಬೋಪಣ್ಣ ಕನಸು ನುಚ್ಚು ನೂರಾಗಿದೆ. ವಾಸ್ತವವಾಗಿ 2017 ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದ ಬೋಪಣ್ಣಗೆ ಅಂದಿನಿಂದ ಮತ್ತೊಂದು ಪ್ರಶಸ್ತಿ ಗೆಲ್ಲಲಾಗಿಲ್ಲ.

6 / 7
ತಮ್ಮ ಸುದೀರ್ಘ ಟೆನಿಸ್ ವೃತ್ತಿಜೀವನದಲ್ಲಿ ಹಲವಾರು ಬಾರಿ ಪುರುಷರ ಡಬಲ್ಸ್ ಸೆಮಿಫೈನಲ್ ತಲುಪುವಲ್ಲಿ ಬೋಪಣ್ಣ ಯಶಸ್ವಿಯಾಗಿದ್ದಾರೆ. ಆದರೆ ಎರಡು ಬಾರಿ ಮಾತ್ರ ಫೈನಲ್ ತಲುಪಿದ್ದು, ಎರಡೂ ಬಾರಿಯೂ ಪ್ರಶಸ್ತಿಯಿಂದ ಅವಕಾಶ ವಂಚಿತರಾಗಿದ್ದಾರೆ.

7 / 7
ಭಾರತದ ಪುರುಷ ಟೆನಿಸ್ ಆಟಗಾರರ ಪೈಕಿ ಲಿಯಾಂಡರ್ ಪೇಜ್ ಮತ್ತು ಮಹೇಶ್ ಭೂಪತಿ ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದು, ಈ ಪಟ್ಟಿಯಲ್ಲಿ ರೋಹನ್ ಬೋಪಣ್ಣ ಹೆಸರು ಸೇರುವ ನಿರೀಕ್ಷೆ ಇತ್ತಾದರೂ ಆ ನಿರೀಕ್ಷೆ ಇದೀಗ ಹುಸಿಯಾಗಿದೆ.

Published On - 9:01 am, Sat, 9 September 23