ಉತ್ತರ ಕನ್ನಡ: ಪವಿತ್ರ ಪಡಿ ಅಮವಾಸ್ಯೆಯಂದು ಗೋಕರ್ಣದಲ್ಲಿ ಭಿಕ್ಷುಕರಿಗೆ ದಾನ ನೀಡುವ ವಿಶಿಷ್ಟ ಜಾತ್ರೆ!

ಅನಾದಿಕಾಲದಿಂದಲೂ ಪಡಿ ಅಮವಾಸ್ಯೆಯಂದು ವಿವಿದೆಡೆಯ ಭಿಕ್ಷುಕರು ಗೋಕರ್ಣಕ್ಕೆ ಬಂದು ದಾನ ಪಡೆಯುವುದು ವಾಡಿಕೆಯಾಗಿದೆ. ಭಕ್ತಾದಿಗಳು ಮುಷ್ಟಿಯಷ್ಟು ಚಿಲ್ಲರೆ ಹಾಕುವುದು ಜೊತೆಗೆ ಅಕ್ಕಿಯನ್ನು ಚೀಲದಲ್ಲಿ ತುಂಬಿ ಎಲ್ಲರಿಗೂ ಕುಳಿತಲ್ಲಿ ಹಾಕುತ್ತಾ ಅಲ್ಲಲ್ಲಿ ನೋಟುಗಳನ್ನು ನೀಡುತ್ತಾ ಪುನೀತರಾಗುತ್ತಾರೆ.

Rakesh Nayak Manchi
|

Updated on:Feb 21, 2023 | 4:18 PM

Uttara Kannada Padi Amavasya unique fair for giving alms to beggars in Gokarna Uttara Kannada news in kannada

ಗೋಕರ್ಣ: ಪಡಿ ಅಮವಾಸ್ಯೆ ಎಂದೇ ಕರೆಯಲ್ಪಡುವ ಮಾಘ ಮಾಸ ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನ ಈ ಭಾಗದ ಸುತ್ತಮುತ್ತಲಿನ ಜನ ಅಪಾರ ಸಂಖ್ಯೆಯಲ್ಲಿ ಆಗಮಿಸಿ ಅಕ್ಕಿ ವಿವಿಧ ಧಾನ್ಯ, ಬಟ್ಟೆ ಸೇರಿದಂತೆ ಮುಂತಾದ ವಸ್ತುಗಳನ್ನು ಪಡಿ (ದಾನ) ನೀಡಿದರು. ಅನಾದಿಕಾಲದಿಂದಲೂ ಈ ದಿನದಂದು ಹೊರ ಜಿಲ್ಲೆಯ ಮತ್ತು ಜಿಲ್ಲೆಯ ವಿವಿಧೆಡೆಯ ಭಿಕ್ಷುಕರು ಇಲ್ಲಿಗೆ ಬಂದು ಈ ದಾನ ಪಡೆಯುವುದು ವಾಡಿಕೆಯಾಗಿದ್ದು, ಅದರಂತೆ ಈ ಬಾರಿಯೂ ಆಗಮಿಸಿದರು.

1 / 6
Uttara Kannada Padi Amavasya unique fair for giving alms to beggars in Gokarna Uttara Kannada news in kannada

ವಯಸ್ಸಿನ ಗಣನೆ ಲೆಕ್ಕ ಇಲ್ಲದೇ ಮಕ್ಕಳಿಂದ ಹಿಡಿದು ವೃದ್ಧರು ಸಹ ಮುಖ್ಯ ಸಮುದ್ರ ತೀರದ ರಸ್ತೆಯುದ್ದಕ್ಕೂ ಅಕ್ಕಪಕ್ಕಗಳಲ್ಲಿ ಕುಳಿತು ದಾನ ಯಾಚನೆಯಲ್ಲಿ ತೊಡಗಿದ್ದರು. ಭಕ್ತಾದಿಗಳು ಮುಷ್ಟಿಯಷ್ಟು ಚಿಲ್ಲರೆ ಹಾಕುವುದು ಜೊತೆಗೆ ಅಕ್ಕಿಯನ್ನು ಚೀಲದಲ್ಲಿ ತುಂಬಿ ಎಲ್ಲರಿಗೂ ಕುಳಿತಲ್ಲಿ ಹಾಕುತ್ತಾ ಅಲ್ಲಲ್ಲಿ ನೋಟುಗಳನ್ನು ನೀಡುತ್ತಾ ಪುನೀತರಾದರು.

2 / 6
Uttara Kannada Padi Amavasya unique fair for giving alms to beggars in Gokarna Uttara Kannada news in kannada

ದಾನ ಪಡೆದವರು ಒಳ್ಳೆದಾಗಲಿ ಪುಣ್ಯ ಬರಲಿ ನಿಮ್ಮ ಕುಟುಂಬ ಬೆಳಗಲಿ ಇನ್ನಷ್ಟು ದಾನ ಮಾಡುವ ಶಕ್ತಿ ಭಗವಂತ ಕರುಣಿಸಲಿ ಅಂತ ಹಾರೈಸುತ್ತ ಅಣ್ಣಾ, ಅಕ್ಕಾ, ಅವ್ವಾ, ಇಲ್ಲಿ ಅನ್ನುವ ಕರೆ ಎಲ್ಲೆಡೆ ಕೇಳಿ ಬಂತು. ಇನ್ನು ಮಾರಿಯಮ್ಮ ತಂದವರು ಒಂದೆಡೆ ಕುಳಿತುಕೊಳ್ಳದೆ ಸಮುದ್ರ ತೀರದವರೆಗೂ ತಮ್ಮ ಶೈಲಿಯ ವಾದ್ಯ ಮೊಳಗಿಸಿ ಅಲ್ಲಿಯೂ ಕಾಣಿಕೆ ಪಡೆಯುವುದು ಕಂಡುಬಂತು

3 / 6
Uttara Kannada Padi Amavasya unique fair for giving alms to beggars in Gokarna Uttara Kannada news in kannada

ಪವಿತ್ರ ಅಮಾವಾಸ್ಯೆ ಸಮುದ್ರ ಸ್ನಾನದ ಬಳಿಕ ಭಕ್ತರು ಮಧ್ಯಾಹ್ನ ಹೊತ್ತಿನವರೆಗೆ ದಾನ ಕಾರ್ಯ ನಡೆಸಿದರು. ಅಮಾವಾಸ್ಯೆ ಪೂಜೆಗೆ ದೇವಸ್ಥಾನದಲ್ಲಿ ಸಹ ಭಕ್ತರ ಸಾಲು ನೆರೆದಿತ್ತು. ಮಹಾಗಣಪತಿ, ಮಹಾಬಲೇಶ್ವರ ಮಂದಿರದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದರು. ಕೋಟಿತೀರ್ಥ, ಸಮುದ್ರ ಸ್ನಾನ ಮಾಡಿ ದೇವಾಲಯದತ್ತ ಭಕ್ತರು ಆಗಮಿಸಿದ್ದರು.

4 / 6
Uttara Kannada Padi Amavasya unique fair for giving alms to beggars in Gokarna Uttara Kannada news in kannada

ಮುಖ್ಯ ಕಡಲತೀರದಲ್ಲಿ ಪುರೋಹಿತರ ಮುಖೇನ ಕುಟುಂಬದಲ್ಲಿ ಮೃತರಾದ ಹಿರಿಯರಿಗೆ ಪಿಂಡಪ್ರದಾನ, ತಿಲತರ್ಪಣಗಳನ್ನು ನೀಡಿ ಹಿರಿಯರನ್ನು ಸ್ಮರಿಸಿ ಕುಟುಂಬದ ಒಳಿತಿಗೆ ಪ್ರಾರ್ಥಿಸಿದರು. ಇದರಂತೆ ಕೋಟಿತೀರ್ಥಕಟ್ಟೆ, ಪಿತೃಸ್ಥಾಲೇಶ್ವರದಲ್ಲಿ ಸಹ ಅಪರಕಾರ್ಯ ಜರುಗಿತು. ಜಿಲ್ಲೆಯ ವಿವಿದೆಡೆ ಮತ್ತು ಹೊರ ರಾಜ್ಯದಿಂದ ಬಂದ ಶ್ರದ್ದಾಳುಗಳು ಅಪರಕಾರ್ಯ ನೆರವೇರಿಸಿದರು.

5 / 6
Uttara Kannada Padi Amavasya unique fair for giving alms to beggars in Gokarna Uttara Kannada news in kannada

ಜಾತ್ರೆ ವೇಳೆ ಭಿಕ್ಷೆ ಪಡೆಯಲು ಬರುವ ಕೊಪ್ಪಳ, ಶಿವಮೊಗ್ಗ, ಸಾಗರ, ಬನವಾಸಿ, ಸಿರ್ಸಿ ಕಡೆಯಿಂದ ಬರುವ ಹಲವು ಅಲೆಮಾರಿ ಜನಾಂಗದವರು ಪ್ರತಿ ವರ್ಷ ನಾವು ಈ ಗೋಕರ್ಣದೀಶನ ದರ್ಶನಕ್ಕೆ ಮತ್ತು ನಮ್ಮ ಸಂಪ್ರದಾಯವನ್ನ ಪೂರ್ಣಗೊಳಿಸಲು ಬರುತ್ತೇವೆ ಎನ್ನುತ್ತಾರೆ. ಇನ್ನು ಇಲ್ಲಿ ಬಂದ ಸಾಕಷ್ಟು ಜನರು ಭಿಕ್ಷಾಟನೆ ನಮ್ಮ ಜೀವನವಲ್ಲ ನಾವು ಬೇರೆ ಬೇರೆ ಕೆಲಸಗಳನ್ನ ಮಾಡುತ್ತೇವೆ, ಇದು ನಮ್ಮ ಸಂಪ್ರದಾಯ ಎನ್ನುತ್ತಾರೆ. (ವರದಿ: ವಿನಾಯಕ್ ಬಡಿಗೇರ್, ಟಿವಿ9 ಉತ್ತರ ಕನ್ನಡ)

6 / 6

Published On - 4:18 pm, Tue, 21 February 23

Follow us
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?