
ನಟಿ ವೈಷ್ಣವಿ ಗೌಡ ಅವರು ಶಾಲಾ ದಿನಗಳಿಗೆ ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದ ಹೊಸ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಸ್ಕೂಲ್ ಗೆಟಪ್ ಡ್ರೆಸ್ನಲ್ಲಿ ಅವರು ಗಮನ ಸೆಳೆದಿದ್ದಾರೆ. ಈ ಫೋಟೋಗಳಿಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ವೈಷ್ಣವಿ ಗೌಡ ಅವರು ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ದಾರಾವಾಹಿಯಲ್ಲಿ ಸ್ಕೂಲ್ ದೃಶ್ಯಗಳು ಇವೆ. ಈ ಕಾರಣಕ್ಕೆ ವೈಷ್ಣವಿ ಗೌಡ ಅವರು ಮಕ್ಕಳ ಗೆಟಪ್ನಲ್ಲಿ ಬಂದಿದ್ದಾರೆ. ಈ ಲುಕ್ ಗಮನ ಸೆಳೆದಿದೆ.

ಸೀತಾ (ವೈಷ್ಣವಿ ಗೌಡ), ರಾಮ್ (ಗಗನ್ ಚಿನ್ನಪ್ಪ) ವಿದ್ಯಾರ್ಥಿ ಆದರೆ ಸಿಹಿ (ರೀತು) ಟೀಚರ್ ಆಗಿದ್ದಾರೆ. ಈ ಎಪಿಸೋಡ್ ಗಮನ ಸೆಳೆಯುತ್ತಿದೆ. ಟೀಚರ್ ಆಗಿ ಸಿಹಿ ಕ್ಲಾಸ್ ತೆಗೆದುಕೊಳ್ಳುತ್ತಾ ಇದ್ದಾರೆ.

ವೈಷ್ಣವಿ ಗೌಡ ಅವರು ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾರೆ. ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ಗಾಗಿ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಫೋಟೋಗಳು ವೈರಲ್ ಆಗುತ್ತವೆ.

‘ಸೀತಾ ರಾಮ’ ಧಾರಾವಾಹಿ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದೆ. ಈ ಧಾರಾವಾಹಿಗೆ ಒಳ್ಳೆಯ ಟಿಆರ್ಪಿ ಕೂಡ ಸಿಗುತ್ತಿದೆ. ಈ ಮೂಲಕ ಧಾರಾವಾಹಿಯಲ್ಲಿ ಹಲವು ಕಲಾವಿದರು ನಟಿಸುತ್ತಾ ಇದ್ದಾರೆ.