Valentine’s Week 2022: ನಿಮ್ಮ ಸಂಗಾತಿಯ ಮುಂದೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಇದಕ್ಕಿಂತ ಒಳ್ಳೆಯ ಸ್ಥಳ ಸಿಗುವುದಿಲ್ಲ

| Updated By: preethi shettigar

Updated on: Feb 10, 2022 | 5:00 PM

Valentine’s Week Dessert Ideas: ಪ್ರೇಮಿಗಳ ದಿನದಂದು ನೀವು ಸಹ ನಿಮ್ಮ ಸಂಗಾತಿಯೊಂದಿಗೆ ಸುಂದರ ಕ್ಷಣಗಳನ್ನು ಕಳೆಯಲು ಬಯಸಿದರೆ, ಈ ಪ್ರಮುಖ ಸ್ಥಳಕ್ಕೆ ಭೇಟಿ ನೀಡಿ.

1 / 6
ಮದುವೆಯ ನಂತರ ಅಥವಾ ಮದುವೆಗೂ ಮೊದಲು ತಮ್ಮ ಸಂಗಾತಿಯ ಜತೆಗೆ ಪ್ರೇಮಿಗಳ ದಿನವನ್ನು ಆಚರಿಸಲು ಜನರು ಹೆಚ್ಚು ಉತ್ಸಾಹಿಗಳಾಗಿರುತ್ತಾರೆ. ಹೀಗಿರುವಾಗ ನೀವು ಈ ಬಾರಿ ನಿಮ್ಮ ಸಂಗಾತಿಯೊಂದಿಗೆ ಮೊದಲ ಬಾರಿಗೆ ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದರೆ ಮತ್ತು ಈ ವಿಶೇಷ ದಿನವನ್ನು ರೋಮ್ಯಾಂಟಿಕ್ ಸ್ಥಳದಲ್ಲಿ ಆಚರಿಸಲು ಬಯಸಿದರೆ, ನೀವು ಈ ಸ್ಥಳಗಳಿಗೆ ಭೇಟಿ ನೀಡಬಹುದು. ಸರ್ಪ್ರೈಸ್ ಉಡುಗೊರೆ ಜತೆಗೆ ಒಂದಷ್ಟು ಸಮಯ ಏಕಾಂತದಲ್ಲಿ ಕಳೆಯಲು ನಿಮಗೆ ಈ ಸ್ಥಳಗಳು ನೆರವಾಗುತ್ತದೆ.

2 / 6
ಪುದುಚೇರಿಯನ್ನು "ಭಾರತದ ಫ್ರೆಂಚ್ ರಾಜಧಾನಿ" ಎಂದೂ ಕರೆಯುತ್ತಾರೆ. ದಂಪತಿಗಳು ಭೇಟಿ ನೀಡಲು ಇದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿನ ಖಾಸಗಿ ಬೀಚ್‌ನಲ್ಲಿ ನಿಮ್ಮ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯಬಹುದು. ಈ ಬಾರಿಯ ಪ್ರೇಮಿಗಳ ದಿನಕ್ಕೆ ಈ ಸ್ಥಳ ಅತ್ಯುತ್ತಮ ಆಯ್ಕೆಯಾಗಿದೆ.

3 / 6
ಕರ್ನಾಟಕದಲ್ಲಿರುವ ಕೊಡಗನ್ನು ಭಾರತದ ಸ್ಕಾಟ್ಲೆಂಡ್ ಎಂದೂ ಕರೆಯುತ್ತಾರೆ. ಇಲ್ಲಿನ ಮೋಡ ಕವಿದ ವಾತಾವರಣ, ಹಸಿರಿನಿಂದ ಕೂಡಿದ ಪರಿಸರ, ಮಂಜಿನಿಂದ ಕೂಡಿದ ನೋಟವು ತುಂಬಾ ಸುಂದರವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಇಲ್ಲಿ ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯಬಹುದು. ಇಲ್ಲಿನ ಪಕ್ಷಿಸಂಕುಲ ಮತ್ತು ಶ್ರೀಗಂಧದ ಕಾಡಿನಲ್ಲಿ ನೀವು ವಿಶೇಷ ಅನುಭವ ಪಡೆಯಬಹುದು.

4 / 6
ಕಸೋಲ್ ಪ್ರವಾಸಿಗರ ಪಟ್ಟಿಯಲ್ಲಿ ಯಾವಾಗಲೂ ಅಗ್ರಸ್ಥಾನದಲ್ಲಿದೆ. ಇದು ಭಾರತದ ಸುಂದರವಾದ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಕಸೋಲ್ ಹಿಮಾಚಲ ಪ್ರದೇಶದಲ್ಲಿರುವ ಒಂದು ಸಣ್ಣ ಹಳ್ಳಿ. ಈ ಸ್ಥಳವು ದಂಪತಿಗಳಿಗೆ ತುಂಬಾ ವಿಶೇಷವಾಗಿದೆ.

5 / 6
 ಗೋವಾಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಪ್ರೇಮಿಗಳಿಗೆ ಗೋವಾ ತುಂಬಾ ಇಷ್ಟವಾಗುತ್ತದೆ. ಗೋವಾಗೆ ತುಂಬಾ ರೋಮ್ಯಾಂಟಿಕ್ ಸ್ಥಳ. ಪ್ರೇಮಿಗಳ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ಇಲ್ಲಿಗೆ ನಿಮ್ಮ ಸಂಗಾತಿಯೊಂದಿಗೆ ಬರಬಹುದು. ರಾತ್ರಿ ವೇಳೆ ಗೋವಾ ಮತ್ತಷ್ಟು ಅಂದವಾಗಿ ಕಾಣುತ್ತದೆ.

6 / 6
ಝೀರೋ ವ್ಯಾಲಿ ಪ್ರೇಮಿಗಳಿಗೆ ತುಂಬಾ ವಿಶೇಷವಾಗಿದೆ. ಜಿರೋ ವ್ಯಾಲಿ ಅರುಣಾಚಲ ಪ್ರದೇಶದಲ್ಲಿದೆ. ಇಲ್ಲಿ ಭತ್ತವನ್ನು ವಿಶೇಷವಾಗಿ ಬೆಳೆಯಲಾಗುತ್ತದೆ. ಇದು ಅರುಣಾಚಲ ಪ್ರದೇಶದ ಅತ್ಯಂತ ಹಳೆಯ ನಗರವಾಗಿದ್ದು, ಇದನ್ನು ಶಾಂತಿ ಹುಡುಕುವವರ ಸ್ವರ್ಗ ಎಂದೂ ಕರೆಯುತ್ತಾರೆ. ಇಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಬಂದು ಸ್ವಲ್ಪ ಸಮಯ ಕಳೆದರೆ ನಿಮ್ಮ ನಡುವಿನ ಸಂಬಂಧ ಮತ್ತಷ್ಟು ಬಿಗಿಯಾಗುತ್ತದೆ.