ನಿಮ್ಮ ಮನೆಗೆ ಈ ವಸ್ತುಗಳನ್ನ ತಂದರೆ ಹೆಚ್ಚು ಆದಾಯ ಪಡೆಯುತ್ತೀರಿ
TV9 Web | Updated By: sandhya thejappa
Updated on:
Jan 10, 2022 | 11:00 AM
2021ರಲ್ಲಿನ ಎಲ್ಲಾ ಆರ್ಥಿಕ ದೋಷಗಳನ್ನು ಮುಂಬರುವ ವರ್ಷದಲ್ಲಿ ಸರಿಪಡಿಸಿಕೊಳ್ಳಬಹುದು. ಲಕ್ಷ್ಮಿ ದೇವಿಯ ಕೃಪೆ 2022ರಲ್ಲಿ ನಿಮ್ಮ ಮೇಲೆ ಇರಲು ಮತ್ತು ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ಪಡೆಯಲು ಈ ಸರಳ ಮಾರ್ಗಗಳನ್ನು ಪಾಲಿಸಿ.
1 / 5
ಶುಕ್ರವಾರದಂದು ಹಳದಿ ಬಟ್ಟೆಯಲ್ಲಿ 5 ಕಪ್ಪೆ ಚಿಪ್ಪುಗಳು, ಬೆಳ್ಳಿಯ ನಾಣ್ಯ ಮತ್ತು ಸ್ವಲ್ಪ ಕುಂಕುಮವನ್ನು ಹಾಕಿ ಕಟ್ಟಿಕೊಳ್ಳಿ. ಇದನ್ನು ಹಣ ಇಡುವ ಜಾಗ ಅಥವಾ ಇನ್ನಿತರ ಸುರಕ್ಷಿತ ಸ್ಥಳದಲ್ಲಿ ಅರಿಶಿಣದ ಉಂಡೆಯೊಂದಿಗೆ ಇಡಿ.
2 / 5
ರಕ್ತಚಂದನವನ್ನು ನೀರಿನಲ್ಲಿ ಕರಗಿಸಿ ಮತ್ತು ಭೋಜಪತ್ರ ಎಲೆಗಳ ಮೇಲೆ ನವಿಲು ಗರಿಗಳಿಂದ ಶ್ರೀ ಎಂದು ಬರೆಯಿರಿ. ನಂತರ ಈ ಭೋಜಪತ್ರವನ್ನು ಸುರಕ್ಷಿತವಾಗಿ ಮನೆಯಲ್ಲಿ ಇಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಹಣ ಹೆಚ್ಚಾಗುತ್ತದೆ.
3 / 5
ಬೆಳ್ಳಿ, ಹಿತ್ತಾಳೆ ಅಥವಾ ಕಂಚಿನ ಲೋಹದಿಂದ ಮಾಡಿದ ಆಮೆಯನ್ನು ಮನೆಯಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಅಷ್ಟೇ ಅಲ್ಲ ಹಣವೂ ಹೆಚ್ಚಾಗುತ್ತದೆ
4 / 5
ಶಂಖವು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಇದನ್ನು ಹಣ ಇಡುವ ಕಪಾಟಿನಲ್ಲಿಟ್ಟಾಗ, ತಾಯಿ ಲಕ್ಷ್ಮಿಯೇ ಅದರ ಕಡೆಗೆ ಆಕರ್ಷಿತಳಾಗುತ್ತಾಳೆ ಮತ್ತು ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಅದೇ ಸಮಯದಲ್ಲಿ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
5 / 5
ವೀಳ್ಯದೆಲೆ ಅಡಿಕೆಯನ್ನು ಗೌರಿ ಗಣೇಶನ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ. ಜತೆಗೆ ಗಣೇಶ ಎಲ್ಲಿ ನೆಲೆಸುತ್ತಾನೆಯೋ ಅಲ್ಲಿ ತಾಯಿ ಲಕ್ಷ್ಮಿಯೂ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ.
Published On - 8:30 am, Mon, 10 January 22