Puja Room: ಪೂಜಾ ಕೋಣೆಯಲ್ಲಿ ಈ ವಸ್ತುಗಳು ಇದ್ದರೆ ಸಾಕು ಕನಕವೃಷ್ಟಿ ಖಚಿತ

|

Updated on: Apr 25, 2023 | 11:29 AM

Vastu Tips for Puja Room: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಪೂಜಾ ಕೋಣೆ ಇದ್ದರೆ ಉತ್ತಮ. ಪೂಜೆಯ ಕೋಣೆ ಈ ದಿಕ್ಕಿನಲ್ಲಿದ್ದರೆ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ಇರುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

1 / 6
ಜ್ಯೋತಿಷ್ಯ  ಶಾಸ್ತ್ರದಂತೆಯೇ, ವಾಸ್ತು ಶಾಸ್ತ್ರವೂ ಸಹ ಮನುಷ್ಯನ ಜೀವನದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ಇರಬೇಕಾದ ವಸ್ತುಗಳಿಗಾಗಿ ನಿರ್ದಿಷ್ಟ ಸ್ಥಾನಮಾನಗಳಿವೆ. ಅವುಗಳನ್ನು ಆಯಾ ಸ್ಥಳಗಳಲ್ಲಿ ಮಾತ್ರ ಇರಿಸಬೇಕು. ಇಲ್ಲದಿದ್ದರೆ ಆ ಮನೆಯಲ್ಲಿ ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆಗಳು ತಾಂಡವವಾಡುತ್ತವೆ ಎನ್ನುತ್ತಾರೆ ವಾಸ್ತು ತಜ್ಞರು. ವಿಶೇಷವಾಗಿ ಪೂಜಾ ಕೊಠಡಿಯಲ್ಲಿ (puja Room) ಕೆಲವು ರೀತಿಯ ವಸ್ತುಗಳನ್ನು ಇಡಬೇಕು (Vastu puja Room). ಅವು ಲಕ್ಷ್ಮಿ ದೇವಿಗೆ ತುಂಬಾ ಪ್ರಿಯವಾಗಿರುವುದು ಮಾತ್ರವಲ್ಲದೆ ಸಂತೋಷವನ್ನು ತರುತ್ತದೆ. ಮನೆಯ ಪೂಜಾ ಕೋಣೆಯಲ್ಲಿ ಯಾವ ಯಾವ ವಸ್ತುಗಳನ್ನು  ಎಲ್ಲೆಲ್ಲಿ ಇಡಬೇಕು ಎಂದು ತಿಳಿಯೋಣ (Vastu Tips).

2 / 6
ಪೂಜಾ ಕೊಠಡಿಯ ಸ್ಥಳ: ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಪೂಜಾ ಕೋಣೆ ಇದ್ದರೆ ಉತ್ತಮ. ಪೂಜೆಯ ಕೋಣೆ ಈ ದಿಕ್ಕಿನಲ್ಲಿದ್ದರೆ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ಇರುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಅದರೆ ದಕ್ಷಿಣ ದಿಕ್ಕಿಗೆ ಪೂಜಾ ಕೋಣೆಯನ್ನು ಅಪ್ಪಿತಪ್ಪಿಯೂ ಇಡಬಾರದು. ಆ ಕಡೆ ಪೂಜಾ ಕೋಣೆ ಇದ್ದರೆ ಆ ಮನೆಯಲ್ಲಿ ಆರ್ಥಿಕ ನಷ್ಟವಾಗುವ ಸಂಭವವಿದೆ.

3 / 6
ಸಾಲಿಗ್ರಾಮ: ಶಿವನನ್ನು ಲಿಂಗ ರೂಪದಲ್ಲಿ ಪೂಜಿಸುವಂತೆ, ವಿಷ್ಣುವನ್ನು ಸಾಲಿಗ್ರಾಮ ಎಂದು ಪೂಜಿಸಲಾಗುತ್ತದೆ. ಆ ಕಾರಣಕ್ಕಾಗಿ ಸಾಲಿಗ್ರಾಮವನ್ನು ಪೂಜಾ ಸ್ಥಳದಲ್ಲಿ ಇಡುವುದು ತುಂಬಾ ಶ್ರೇಯಸ್ಕರ. ಪೂಜಾ ಸ್ಥಳದಲ್ಲಿ ಪತಿಯನ್ನೂ ಪೂಜಿಸಿದರೆ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಇದೆ.

4 / 6
ಶಂಖ: ಮನೆಯಲ್ಲಿ ನಿಯಮಿತವಾಗಿ ಶಂಖವನ್ನು ಊದುವುದರಿಂದ ಧನಾತ್ಮಕ ಶಕ್ತಿ ಬರುತ್ತದೆ. ಪೂಜಾ ಸ್ಥಳದಲ್ಲಿ ಶಂಖವನ್ನು ಇಡುವುದು ತುಂಬಾ ಮಂಗಳಕರವೆಂದು ಹಿಂದೂಗಳು ನಂಬುತ್ತಾರೆ. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

5 / 6
ಗಂಗಾ ಜಲ: ಹಿಂದೂ ಧರ್ಮದಲ್ಲಿ ಪವಿತ್ರವಾದ ಗಂಗಾ ನದಿಗೆ ವಿಶೇಷ ಮಹತ್ವವಿದೆ. ಈ ಪವಿತ್ರ ನದಿ ನೀರು ಎಂದಿಗೂ ಕೆಡುವುದಿಲ್ಲ ಎಂದು ನಂಬಲಾಗಿದೆ ಮತ್ತು ಅದು ಸಾಬೀತಾಗಿರುವ ವಿಷಯವೂ ಹೌದು. ಈ ಪವಿತ್ರ ನೀರನ್ನು ಯಾವಾಗಲೂ ಪೂಜಾ ಸ್ಥಳದಲ್ಲಿ ಇಡಲು ಇದು ಕಾರಣವಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆ ಇದೆ.

6 / 6
ನವಿಲು ಗರಿ: ಶ್ರೀಕೃಷ್ಣನಿಗೆ ನವಿಲು ಗರಿಗಳೆಂದರೆ ತುಂಬಾ ಇಷ್ಟ ಎಂಬುದು ಗೊತ್ತಿರುವ ಸಂಗತಿ. ಪೂಜೆ ಮಾಡುವ ಸ್ಥಳದಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ವಾಸ್ತು ಶಾಸ್ತ್ರದ ಪ್ರಕಾರ, ಪೂಜಾ ಕೋಣೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

Published On - 11:22 am, Tue, 25 April 23