ಇತ್ತೀಚಿನ ದಿನಗಳಲ್ಲಿ ಜನರು ವಿವಿಧ ಗಾತ್ರ ಮತ್ತು ವಿನ್ಯಾಸಗಳ ಗಡಿಯಾರಗಳನ್ನು ಮನೆಯ ಅಲಂಕಾರಿಕ ವಸ್ತುವಾಗಿ ಬಳಸುತ್ತಿದ್ದಾರೆ. ವಾಸ್ತು ಶಾಸ್ತ್ರದ ನಿಯಮಗಳನ್ನು ಪಾಲಿಸುತ್ತಿಲ್ಲ. ಮನೆಯ ಗೋಡೆಯ ಮೇಲೆ ಗಡಿಯಾರವನ್ನು ಇರಿಸಲು ಸರಿಯಾದ ದಿಕ್ಕನ್ನು ಹೊಂದುವುದು ಬಹಳ ಮುಖ್ಯ. ಇಲ್ಲದಿದ್ದರೆ ನೀವು ವಾಸ್ತು ದೋಷಗಳನ್ನು ಎದುರಿಸಬೇಕಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಗಡಿಯಾರವನ್ನು ಇರಿಸುವಾಗ ಸರಿಯಾದ ದಿಕ್ಕನ್ನು ತಿಳಿದುಕೊಳ್ಳುವುದು ಮುಖ್ಯ. ಮನೆಯಲ್ಲಿ ಪೂರ್ವ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ಮನೆಯಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಲೋಲಕದ ಗಡಿಯಾರಗಳನ್ನು ಅಳವಡಿಸುವುದು ಶುಭವಲ್ಲ. ಇದು ಮನೆಯ ಸಂತೋಷ ಮತ್ತು ನೆಮ್ಮದಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಅಪ್ಪಿತಪ್ಪಿಯೂ ಮನೆಯ ದಕ್ಷಿಣ ದಿಕ್ಕಿನಲ್ಲಿ ಗಡಿಯಾರವನ್ನು ಹಾಕಬೇಡಿ. ಹೀಗೆ ಮಾಡುವುದರಿಂದ ವಾಸ್ತು ದೋಷಗಳು ಉಂಟಾಗಿ ಆರ್ಥಿಕ ಮುಗ್ಗಟ್ಟು ಉಂಟಾಗಬಹುದು. ಜೊತೆಗೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.
ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ಆಕಾರ ಮತ್ತು ಬಣ್ಣಗಳ ವಾಚ್‌ಗಳು ಲಭ್ಯವಿವೆ. ವಾಸ್ತು ಶಾಸ್ತ್ರದ ಪ್ರಕಾರ ಕಿತ್ತಳೆ ಮತ್ತು ಹಸಿರು ಬಣ್ಣದ ಗಡಿಯಾರಗಳನ್ನು ಮನೆಯಲ್ಲಿ ಅಳವಡಿಸಬಾರದು. ಈ ಬಣ್ಣದ ಗಡಿಯಾರಗಳು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತವೆ.