ವಿಶ್ವದಾಖಲೆ ಮಾಡಿದ ವಿಜಯಪುರದ 9 ತಿಂಗಳ ಹಾಲುಗಲ್ಲದ ಹೆಣ್ಣು ಮಗು

Edited By:

Updated on: Feb 09, 2025 | 12:57 PM

ವಿಜಯಪುರದ 9 ತಿಂಗಳ ಬಾಲೆ 422 ವಸ್ತುಗಳನ್ನು ಗುರುತಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾಳೆ. ತಾಯಿಯ ಮಾರ್ಗದರ್ಶನದಲ್ಲಿ ಈ ಸಾಧನೆ ಸಾಧ್ಯವಾಗಿದೆ. ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾಡಳಿತ ಪುಟ್ಟ ಪೋರಿ ಸಾಧನೆ ಕಂಡು ಸನ್ಮಾನಿಸಿದ್ದಾರೆ. ಸದ್ಯ ಪುಟ್ಟ ಬಾಲೆಯ ಸಾಧನೆ ಮೆಲ್ಲರನ್ನು ಬೆರಗಾಗಿಸುತ್ತಿದೆ.

1 / 7
ಬೆಳೆಯೋ ಸಿರಿ ಮೊಳಕೆಯಲ್ಲಿ ಎಂಬ ಮಾತು ವಿಜಯಪುರದ ಪುಟ್ಟ ಕಂದಮ್ಮನಿಗೆ ಸೂಕ್ತವಾಗುತ್ತದೆ. ಇನ್ನೂ ಅಂಬೇಗಾಲು ಇಡಲು ಪ್ರಯತ್ನ ಪಡುವ ಪುಟ್ಟ ಪೋರಿಯ ಸಾಧನೆ ಕೇಳಿದರೆ ನಿಮಗೆ ಆಶ್ಚರ್ಯವಾಗೋದ್ರಲ್ಲಿ ಯಾವುದೇ ಸಂಶಯವೇ ಇಲ್ಲ. ಹಾಲುಗಲ್ಲದ ಕಂದಮ್ಮನ ಸಾಧನೆಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯರೇ ಖುಷಿ ಪಟ್ಟು ಭೇಟಿಯಾಗಿದ್ದಾರೆ. ವಿಜಯಪುರ ಜಿಲ್ಲಾಡಳಿತವೂ ಪುಟ್ಟಗೌರಿಗೆ ಸಲಾಂ ಹೊಡೆದಿದೆ.

2 / 7
ವಿಜಯಪುರ ನಗರದ 9 ತಿಂಗಳ ಪೋರಿ ಐರಾ, ವಿಶ್ವದಾಖಲೆ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ. ಪುಟ್ಟ ಪುಟ್ಟ ಹೆಜ್ಜೆಯನ್ನಿಡಲು ಪ್ರಯತ್ನ ಮಾಡುತ್ತಿರೋ ಐರಾ ವಯಸ್ಸುಗೂ ಮೀರಿದ ಸಾಧನೆ ಮಾಡಿ ಹೆಜ್ಜೆ ಗುರುತು ಇಟ್ಟಿದ್ದಾಳೆ. ನಗರದ ಪಾಟೀಲ್ ಪ್ಲಾನೇಟ್ ಅಪಾರ್ಟಮೆಂಟ್ ವಾಸಿಯಾಗಿರೋ ದೀಪ್ ಹಾಗೂ ಅನುಷಾ ದಂಪತಿಯ ಪುತ್ರಿ.

3 / 7
ಐರಾಳಿಗೆ ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಗುರು ಎಂಬಂತೆ ಈ ಸಾಧನೆಗೆ ಕಾರಣವಾಗಿದೆ. ಹುಟ್ಟಿದ ಕೆಲ ವಾರಗಳಲ್ಲೇ ಎಲ್ಲವನ್ನೂ ಗುರುತು ಹಿಡಿಯೋದನ್ನು ರಿಯಾಕ್ಟ್ ಮಾಡೋದನ್ನ ಗಮನಿಸಿದ ಅನುಷಾ ತನ್ನ ಮಗಳಿಗೆ ಏನೋ ವಿಶೇಷ ಸಾಮರ್ಥ್ಯವಿದೆ ಎಂದು ಮನಗಂಡಿದ್ದರು. ಐರಾಳ ಬುದ್ದಿಮತ್ತೆ, ನೆನಪಿಶ ಶಕ್ತಿ, ಗ್ರಹಣ ಶಕ್ತಿಗಳನ್ನು ಗುರುತಿಸಿ ಐರಾಗೆ ಪೂರಕವಾಗಿ ಕಲಿಕೆ ಮಾಡಿಸುತ್ತಾ, ಕಲಿಕೆ ಜೊತೆಗೆ ತರಬೇತಿಯನ್ನು ನೀಡ ತೊಡಗಿದರು.

4 / 7
ಐರಾಗೆ 9 ತಿಂಗಳು ಆಗಿದ್ದ ವೇಳೆ 24 ಹಣ್ಣುಗಳು, 20 ಸಾಕು ಪ್ರಾಣಿಗಳು, 24 ಸಾರಿಗೆ ವಿಧಾನಗಳು, 24 ದೇಹದ ಭಾಗಗಳು, 24 ತರಕಾರಿಗಳು, 24 ಪಕ್ಷಿಗಳು, 13 ಆಕಾರಗಳು, 11 ಬಣ್ಣಗಳು, 26 ಇಂಗ್ಲೀಷ್ ವರ್ಣಮಾಲೆಗಳು, 24 ಸಂಖ್ಯೆಗಳು, 48 ಏಷ್ಯನ್ ದೇಶಗಳ ಧ್ವಜಗಳು, 28 ಸ್ವಾತಂತ್ರ್ಯ ಹೋರಾಟಗಾರರು, 24 ಹೂವುಗಳು, 24 ಕಾರ್ಯಗಳು, 12 ಸಮುದ್ರ ಜೀವಿಗಳು, 12 ಸಮುದಾಯ ಕಾರ್ಯಕರ್ತರು, 12 ವೃತ್ತಿಪರರು, 12 ಭಾರತದ ಪ್ರಸಿದ್ಧ ಸ್ಥಳಗಳು, 12 ಮನೆಯಲ್ಲಿರುವ ವಸ್ತುಗಳು, 24 ಕಾಡು ಪ್ರಾಣಿಗಳನ್ನು ಐರಾ ಗುರುತಿಸುತ್ತಾಳೆ. ಈ ಮೂಲಕ ಪುಟ್ಟ ಬಾಲೆ ಒಟ್ಟು 422 ವಸ್ತುಗಳನ್ನು ಗುರುತಿಸುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದ್ಧಾಳೆ.

5 / 7
ಐರಾ ತಂದೆ-ತಾಯಿ ಆಕೆಯ ಚಟುವಟಿಕೆಗಳನ್ನು ರೆಕಾರ್ಡ್ ಮಾಡಿ ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಗೆ ಕಳುಹಿಸಿದ್ದಾರೆ. ಕಳೆದ ನವ್ಹೆಂಬರ್ ನಲ್ಲಿ ವಿಶ್ವ ದಾಖಲೆಗಾಗಿ ಅಪ್ಲೈ ಮಾಡಿದ್ದಾರೆ. ಎಲ್ಲಾ ಬಗೆಯ ಪರೀಕ್ಷೆಗಳನ್ನು ಮಾಡಿ ನಿಖರತೆ ಪಡೆದುಕೊಂಡ ಬಳಿಕ ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆ 2024 ಡಿಸೆಂಬರ್ 26 ರಂದು ಪುಟ್ಟ ಬಾಲೆ ಐರಾಗೆ ಯಂಗೆಸ್ಟ್ ಚೈಲ್ಡ್ ಟು ಐಡೆಂಟಿಫೈ ದಿ ಮೋಸ್ಟ್ ನಂಬರ್ ಆಫ್ ಐಟಮ್ಸ್ ಆಟ್ ದಿ ಏಜ್ ಆಫ್ 9 ಮಂಥ್ಸ್ ಸರ್ಟಿಫಿಕೇಟ್ ನೀಡಿದೆ.

6 / 7
ದೀಪಕ ಹಾಗೂ ಅನುಷಾ ತಮ್ಮ ಮಗಳು ಐರಾ ನೊಬೆಲ್ ವರ್ಲ್ಡ್ ರೆಕಾರ್ಡ್ ಮಾಡಿದ್ದರ ಕುರಿತು ಸಿಎಂ ಸಿದ್ಧರಾಮಯ್ಯ ಅವರಿಗೆ ಮೇಲ್ ಮೂಲಕ ಮಾಹಿತಿ ನೀಡಿದ್ದರು. ಅದನ್ನು ಗಮನಿಸಿ ಸಿಎಂ ಕರೆ ಮಾಡಿ, ಬೆಳಗಾವಿಯ ಚಳಿಗಾಲದ ಅಧಿವೇಶನದ ಸಮಯದಲ್ಲಿ ಬೆಳಗಾವಿಗೆ ಕರೆದು, ಸ್ವತಃ ಸಿಎಂ ಭೇಟಿಯಾಗಿದ್ದಾರೆ. ಮಗುವಿನ ಪ್ರತಿಭೆ ಕಂಡು ಆಕೆಗೆ ಸನ್ಮಾನಿಸಿ ಶುಭ ಹಾರೈಸಿದ್ದಾರೆ. ಇನ್ನು ವಿಜಯಪುರ ಜಿಲ್ಲಾಡಳಿತೂ ಐರಾಳ ಸಾಧನೆಗೆ ಸನ್ಮಾನಿಸಿದೆ. ಜಿಲ್ಲಾಧಿಕಾರಿ ಟಿ ಭೂಬಾಲನ್ ಹಾಗೂ ಇತರೆ ಆಧಿಕಾರಿಗಳು ಬಾಲೆಗೆ ಶುಭ ಹಾರೈಸಿದ್ಧಾರೆ.

7 / 7
ಸದ್ಯ 1 ವರ್ಷ ಒಂದು ವಾರ ಪ್ರಾಯದ ಪೋರಿ ಇದೀಗಾ 700 ವಿವಿಧ ಬಗೆಯ ಕಾರ್ಡ್ ಗಳನ್ನು ಗುರುತಿಸುತ್ತಾಳೆ. ಮುಂದೆ ಐರಾಳಿಗೆ ಗಣಿತ ವಿಷಯದಲ್ಲಿ ತರಬೇತಿಯನ್ನು ನೀಡಲು ಅನುಷಾ ನಿರ್ಧಾರ ಮಾಡಿದ್ದಾರೆ. ಮಗಳಿಗೆ ಕಲಿಗೆ ಹಾಗೂ ತರಬೇತಿ ನೀಡಲು ಪತಿ ದೀಪಕ ಹಾಗೂ ಇಡೀ ಕುಟುಂಬ ಬೆಂಬಲ ನೀಡಿದೆ ಎಂದು ಅನುಷಾ ನೆನಪಿಸಿಕೊಂಡಿದ್ದಾರೆ.

Published On - 11:24 am, Sun, 9 February 25