
ಮಳೆ ಪ್ರಾರಂಭವಾಗುತ್ತಿದ್ದಂತೆ ಕಂಬಳಿ ಹೊತ್ತು ಬೆಚ್ಚಗೆ ಮಲಗುವ ಮನುಜ ಕುಲ ಒಂದೆಡೆಯಾದರೆ, ಇನ್ನೊಂದೆಡೆ ಸೂರಿನ ಹುಡುಕಾಟದಲಿ ಕಂಗಾಲಾಗಿರುವವರನ್ನು ಕಾಣಬಹುದು.

ದೆಹಲಿಯಲ್ಲಿ ಸುರಿದ ಹಠಾತ್ ಮಳೆಯ ಸಮಯದಲ್ಲಿ ಒಂದೇ ಕ್ಯಾಮೆರಾ ಕಣ್ಣಿಗೆ ಸೆರೆಯಾದ ವಿಭಿನ್ನ ಭಾವನೆಗಳ ಫೋಟೋಗಳು ಇಲ್ಲಿವೆ. ಇಂತಹ ಹೃದಯಸ್ಪರ್ಶಿ ಪೋಟೋಗಳನ್ನು ಛಾಯಾಗ್ರಾಹಕ ವಿಪಿನ್ ಕುಮಾರ್ ಸೆರೆಹಿಡಿದ್ದಿದ್ದಾರೆ.

ದೆಹಲಿಯ ಕರ್ತವ್ಯ ಪಥದಲ್ಲಿ ಸುರಿದ ಮಳೆಗೆ ಪುಟ್ಟ ಹುಡುಗನೊಬ್ಬ ತನ್ನೊಂದಿಗೆ ತನ್ನ ಶ್ವಾನವನ್ನು ಕೂಡ ಮಳೆಯಿಂದ ರಕ್ಷಿಸಿ ಒಂದು ಪುಟ್ಟ ಜಾಗದಲ್ಲಿ ಬೆಚ್ಚಗೆ ಆಶ್ರಮ ಪಡೆದಿರುವ ಈ ಚಿತ್ರವು ಮುಗ್ಧ ಮನಸ್ಸುಗಳ ನಿಶ್ಕಲ್ಮಶ ಪ್ರೀತಿಯನ್ನು ಬಿಂಬಿಸುತ್ತದೆ. ಪಕ್ಕದಲ್ಲಿ ಇಂದು ಮಹಿಳೆ ಕೂಡ ಕುಳಿತಿರುವುದು ಕಂಡುಬರುತ್ತದೆ.

ಬೀದಿ ಬದಿಯಲ್ಲಿ ವಸ್ತು, ಆಹಾರಗಳನ್ನು ಮಾರಾಟ ಮಾಡಿ ,ತನ್ನ ಕುಟುಂಬಕ್ಕೆ ಮೂರು ಹೊತ್ತಿನ ತುತ್ತಿಗೆ ಬೇಕಾಗುವಷ್ಟು ಸಂಪಾದಿಸುವ ವ್ಯಕ್ತಿಯು ಮಳೆಗೆ ತತ್ತರಿಸಿ ಹೋಗಿರುವ ದೃಶ್ಯವನ್ನು ಈ ಪೋಟೋದಲ್ಲಿ ಕಾಣಬಹುದು.

ಮಳೆಯಲಿ ಜೊತೆಯಲಿ, ದಿನವಿಡೀ ನೆನೆಯಲು ನನಗೆ ಕುತೂಹಲ ಎಂಬ ಹಾಡಿಗೆ. ಅದರಂತೆಯೇ ದೆಹಲಿಯಲ್ಲಿ ಸುರಿದ ಹಠಾತ್ ಮಳೆಯಲ್ಲಿ ಆನಂದಿಸುತ್ತಿರುತ್ತಿರುವ ಮಹಿಳೆಯೊಬ್ಬರನ್ನು ಈ ಪೋಟೋದಲ್ಲಿ ಕಾಣಬಹುದು.

ಅಯ್ಯೋ ಮಳೆ ಬಂತು, ನಾಳೆ ಜ್ವರ ಶೀತ ಪ್ರಾರಂಭವಾಗದರೆ ಎಂಬ ಭಯದಿಂದ ಬೇಗ ಮನೆ ಸೇರಿಕೊಳ್ಳಬೇಕು ಎಂದು ಮನೆಯತ್ತ ಓಡಲು ಸಿದ್ಧರಾಗಿರುವ ಜನರ ಗುಂಪೊಂದನ್ನು ಈ ಪೋಟೋದಲ್ಲಿ ಕಾಣಬಹುದು.
Published On - 7:11 pm, Thu, 30 March 23