IPL 2023: ಐಪಿಎಲ್ ಅಖಾಡದಲ್ಲಿ 10 ಕನ್ನಡಿಗರು..!
IPL 2023 Kannada: ಆರ್ಸಿಬಿ ತಂಡದಲ್ಲಿರುವುದು ಏಕೈಕ ಕನ್ನಡಿಗ ಮಾತ್ರ. ಇನ್ನು ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳಲ್ಲಿ ತಲಾ ಇಬ್ಬರು ಕನ್ನಡಿಗರು ಆಯ್ಕೆಯಾಗಿದ್ದಾರೆ.
Updated on:Mar 30, 2023 | 9:38 PM

ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಕೌಂಟ್ ಡೌನ್ ಶುರುವಾಗಿದೆ. ಈ ಬಾರಿಯ ಐಪಿಎಲ್ನಲ್ಲಿ ಒಟ್ಟು 243 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲಿ 10 ಕನ್ನಡಿಗರೂ ಕೂಡ ಇರುವುದು ವಿಶೇಷ.

ಐಪಿಎಲ್ನ 7 ತಂಡಗಳಲ್ಲಿ ಒಟ್ಟು 10 ಕರ್ನಾಟಕದ ಆಟಗಾರರು ಸ್ಥಾನ ಪಡೆದಿದ್ದಾರೆ. ಇವರಲ್ಲಿ ಆರ್ಸಿಬಿ ತಂಡದಲ್ಲಿರುವುದು ಏಕೈಕ ಕನ್ನಡಿಗ ಮಾತ್ರ. ಇನ್ನು ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳಲ್ಲಿ ತಲಾ ಇಬ್ಬರು ಕನ್ನಡಿಗರು ಆಯ್ಕೆಯಾಗಿದ್ದಾರೆ.

ಹಾಗಿದ್ರೆ ಈ ಬಾರಿಯ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿರುವ ಕರ್ನಾಟಕದ ಆಟಗಾರರು ಯಾರೆಲ್ಲಾ ಎಂದು ನೋಡೋಣ...

ಕೆಎಲ್ ರಾಹುಲ್ (ಲಕ್ನೋ ಸೂಪರ್ ಜೈಂಟ್ಸ್)

ಕೃಷ್ಣಪ್ಪ ಗೌತಮ್ (ಲಕ್ನೋ ಸೂಪರ್ ಜೈಂಟ್ಸ್)

ದೇವದತ್ ಪಡಿಕ್ಕಲ್ (ರಾಜಸ್ಥಾನ್ ರಾಯಲ್ಸ್)

ಕೆಸಿ ಕಾರ್ಯಪ್ಪ (ರಾಜಸ್ಥಾನ್ ರಾಯಲ್ಸ್)

ಮಯಾಂಕ್ ಅಗರ್ವಾಲ್ (ಸನ್ರೈಸರ್ಸ್ ಹೈದರಾಬಾದ್)

ಮನೀಷ್ ಪಾಂಡೆ (ಡೆಲ್ಲಿ ಕ್ಯಾಪಿಟಲ್ಸ್)

ಪ್ರವೀಣ್ ದುಬೆ (ಡೆಲ್ಲಿ ಕ್ಯಾಪಿಟಲ್ಸ್)

ಅಭಿನವ್ ಮನೋಹರ್ (ಗುಜರಾತ್ ಟೈಟಾನ್ಸ್)

ಮನೋಜ್ ಭಾಂಡಗೆ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ವಿಧ್ವತ್ ಕಾವೇರಪ್ಪ (ಪಂಜಾಬ್ ಕಿಂಗ್ಸ್)
Published On - 9:23 pm, Thu, 30 March 23



















