ತಂತ್ರಜ್ಞಾನದ ಈ ಯುಗದಲ್ಲಿ ಯಾವುದೂ ಅಸಾಧ್ಯವಲ್ಲ! ಸೈಕಲ್​ ಚಕ್ರಗಳು ಗುಂಡಗೆ ಅಲ್ಲ-ಚೌಕಾಕಾರದ ಚಕ್ರಗಳ ಮೇಲೂ ಸೈಕಲ್ ಚಲಿಸುತ್ತದೆ, ವಿಡಿಯೋ ನೋಡಿ

|

Updated on: Apr 18, 2023 | 10:24 AM

ಗುಂಡಗೆ ಅಲ್ಲ, ಚೌಕಾಕಾರದ ಚಕ್ರಗಳ ಸೈಕಲ್ ಇರಲು ಸಾಧ್ಯವಾ? ಸೈಕಲ್ ಕಂಡುಹಿಡಿದಾಗಿನಿಂದ ಅದರ ಚಕ್ರಗಳು ಗುಂಡಗೇ ಇವೆ. ಉರುಳುವ ಚಕ್ರಗಳು ಗುಂಡಗೇ ಇರಬೇಕು ವಿನಃ, ಬೇರೆ ಯಾವುದೇ ಆಕಾರದಲ್ಲೂ ಚಕ್ರಗಳನ್ನು ನಿರ್ಮಿಸಿದರೆ ಅದು ಮುಂದಕ್ಕೆ ಹೋಗದು, ಅಥವಾ ಅದರ ಉದ್ದೇಶವನ್ನೇ ಪೂರೈಸಲು ಸಾಧ್ಯವಾಗದೆ ತೆವಳಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾದೀತು ಅಲ್ಲವಾ!? ಆದರೆ ಕಾಲಾಯತಸ್ಮೈನಮಃ!

1 / 7
ಗುಂಡಗೆ ಅಲ್ಲ, ಚೌಕಾಕಾರದ ಚಕ್ರಗಳ ಸೈಕಲ್ ಇರಲು ಸಾಧ್ಯವಾ? ಸೈಕಲ್ ಕಂಡುಹಿಡಿದಾಗಿನಿಂದ ಅದರ ಚಕ್ರಗಳು ಗುಂಡಗೇ ಇವೆ. ಉರುಳುವ ಚಕ್ರಗಳು ಗುಂಡಗೇ ಇರಬೇಕು ವಿನಃ, ಬೇರೆ ಯಾವುದೇ ಆಕಾರದಲ್ಲೂ ಚಕ್ರಗಳನ್ನು ನಿರ್ಮಿಸಿದರೆ ಅದು ಮುಂದಕ್ಕೆ ಹೋಗದು, ಅಥವಾ ಅದರ ಉದ್ದೇಶವನ್ನೇ ಪೂರೈಸಲು ಸಾಧ್ಯವಾಗದೆ ತೆವಳಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾದೀತು ಅಲ್ಲವಾ!? ಆದರೆ ಕಾಲಾಯತಸ್ಮೈನಮಃ! ಅಸಾಧ್ಯವೂ ಸಾಧ್ಯವಾಗುವ ಕಾಲ ಇದು. ಸೂರ್ಯ ಗುಂಡಗೆ ಸುತ್ತಿದ್ದಾನೆ, ಚಂದ್ರನೂ ದುಂಡಾಗಿದ್ದಾನೆ. ಅನಾದಿಕಾಲದಿಂದಲೂ ತಿರುಗತ್ತಲೇ ಇರುವ ಭೂಮಿಯೂ ಗುಂಡಗೇ ಅಲ್ಲವಾ ಇರೋದು! ಆದರೆ ಇಲ್ಲಿ ಸೈಕಲ್‌ನ ಟೈರ್‌ಗಳು ಚೌಕವಾಗಿವೆ.

2 / 7
ಆದರೆ ಕಾಲಾಯತಸ್ಮೈನಮಃ! ಅಸಾಧ್ಯವೂ ಸಾಧ್ಯವಾಗುವ ಕಾಲ ಇದು. ಸೂರ್ಯ ಗುಂಡಗೆ ಸುತ್ತಿದ್ದಾನೆ, ಚಂದ್ರನೂ ದುಂಡಾಗಿದ್ದಾನೆ. ಅನಾದಿಕಾಲದಿಂದಲೂ ತಿರುಗತ್ತಲೇ ಇರುವ ಭೂಮಿಯೂ ಗುಂಡಗೇ ಅಲ್ಲವಾ ಇರೋದು! ಆದರೆ ಇಲ್ಲಿ ಸೈಕಲ್‌ನ ಟೈರ್‌ಗಳು ಚೌಕವಾಗಿವೆ.

3 / 7
 ಪ್ರಪಂಚದಾದ್ಯಂತ ಪ್ರತಿದಿನ, ಪ್ರತಿ ಕ್ಷಣವೂ ಹೊಸ ಆವಿಷ್ಕಾರಗಳು ನಡೆಯುತ್ತವೆ. ಅದು ಪ್ರತಿಯೊಬ್ಬರನ್ನು ಚಕಿತಗೊಳಿಸುತ್ತದೆ, ವಿಸ್ಮಯಗೊಳಿಸುತ್ತದೆ. ನೀವು ಯಾವಾಗಲೂ ಚಕ್ರವನ್ನು ದುಂಡಗಿನ ಆಕಾರದಲ್ಲಿ ನೋಡಿದ್ದೀರಿ. ಆದರೆ ಚಕ್ರದ ಈ ಹೊಸ ಬೆಳವಣಿಗೆಯನ್ನು ನೋಡಿದರೆ ನಿಮಗೆ ಆಶ್ಚರ್ಯವಾಗುತ್ತದೆ. ವಿಜ್ಞಾನಿಗಳು ನಿರಂತರವಾಗಿ ಹಳೆಯ ವಿಧಾನಗಳಿಗೆ ಆಧುನಿಕ ಪರ್ಯಾಯಗಳನ್ನು ರಚಿಸುವ ಬಗ್ಗೆ ಅಧ್ಯಯನ, ಸಂಶೋಧನೆ ಮಾಡುತ್ತಾರೆ ಮತ್ತು ಹೊಸತನ್ನು ಕಂಡುಹಿಡಿಯುವಲ್ಲಿ ಯಶಸ್ಸೂ ಕಾಣುತ್ತಾರೆ. ಇದೇ ಹಾದಿಯಲ್ಲಿ ಸಾಗಿದ ಇಂಜಿನಿಯರ್ ಒಬ್ಬರು ಚೌಕಾರಾದ ಸೈಕಲ್ (ಸ್ಕ್ವೇರ್ ಟೈರ್ ಸೈಕಲ್-ಸ್ಕ್ವೇರ್ ಸೈಕ್ಲಿಂಗ್) ಮಾಡಿದ್ದು, ಯಾವುದೇ ಏರಿಳಿತಗಳು ಇಲ್ಲದೆ ಈ ಸೈಕಲ್ ಆರಾಮವಾಗಿ ಚಾಲನೆಯಲ್ಲಿದೆ!

4 / 7
ಇಂಜಿನಿಯರ್ ಸೆರ್ಗೆಯ್ ಗೋರ್ಡೀವ್ ಅವರು ಗುಂಡಗೆ ಸುತ್ತುವ ಚಕ್ರಗಳ ಬದಲಿಗೆ ಚೌಕಾಕಾರದ ಗಾಲಿಗಳೊಂದಿಗೆ (ಟೈರುಳೊಂದಿಗೆ) ಹೊಸ ರೀತಿಯ ಬೈಸಿಕಲ್ ಅನ್ನು ರಚಿಸಿದ್ದಾರೆ. ಚೌಕಾರಾದ ಟೈರ್ ಹೊಂದಿರುವ ವಾಹನ ನೆಲದ ಮೇಲೆ ಓಡುವುದು ಹೇಗೆ ಸಾಧ್ಯ ರೀ? ಎಂದು ನೀವು ಆಶ್ಚರ್ಯ ಪಡಬಹುದು. ಇದನ್ನು ನಂಬಲು ನಿಮಗೆ ಕಷ್ಟವೂ ಆಗಬಹುದು. ಆದರೆ ಈ ವಿಡಿಯೋ ಸ್ಟೋರಿ ನೋಡಿ.

5 / 7
ಈ ಚಿತ್ರಗಳನ್ನು ನೋಡಿದಾಗ ಅದರ ಗುಟ್ಟು ಏನು ಎಂಬುದು ನಿಮಗೇ ಗೊತ್ತಾಗುತ್ತದೆ. ಈ  ಸೈಕಲ್​​ನ  ಚೌಕದ ಚಕ್ರಗಳು ಮಿಲಿಟರಿ ಟ್ಯಾಂಕ್‌ನಂತೆ ಕಾರ್ಯನಿರ್ವಹಿಸುತ್ತದೆ. ಅಂದರೆ, ಅದರ ಚೌಕಾಕಾರದ ಚಕ್ರವು ಕಳಚಿಕೊಳ್ಳುವ ಸರಪಳಿಗಳ ಗುಂಪನ್ನು ಹೊಂದಿದೆ. ಅದರ ಕಾರಣದಿಂದಾಗಿ ಚಕ್ರವು ಮುಂದಕ್ಕೆ ಚಲಿಸುತ್ತದೆ!

6 / 7
ಚೌಕಾಕಾರದ ಚಕ್ರದ ಸೈಕಲ್ ಇಲ್ಲಿದೆ ನೋಡಿ: ಈ ಸ್ಕ್ವೇರ್​​ ಟೈರ್‌ಗಳನ್ನು ಹೊಂದಿರುವ ಸೈಕಲ್ ಶಿಸ್ತಾಗಿ ಮಾಮೂಲಿ ರಸ್ತೆಗಳ ಮೇಲೆ ಓಡುತ್ತದೆ. ಮಾಸ್ಸಿಮೊ ಎಂಬ ವ್ಯಕ್ತಿ ಟ್ವಿಟರ್‌ನಲ್ಲಿ ವಿಡಿಯೋ ಸಹ ಪೋಸ್ಟ್​ ಮಾಡಿದ್ದಾರೆ. ಚೌಕಾರಾದ ಚಕ್ರಗಳಿದ್ದರೂ ಈ ಬೈಸಿಕಲ್ ತ್ವರಿತವಾಗಿ ತಿರುಗುವುದನ್ನು ವೀಡಿಯೊದಲ್ಲಿ ಕಾಣಬಹುದು.

7 / 7
ವೀಡಿಯೊವನ್ನು ಹಂಚಿಕೊಳ್ಳುತ್ತಾ, ಮಾಸ್ಸಿಮೊ ಹೀಗೆ ಬರೆದಿದ್ದಾರೆ -  ಈ ವಿಶಿಷ್ಟ ಬೆಳವಣಿಗೆಯನ್ನು ಕಂಡು ಎಲ್ಲರೂ ಅಚ್ಚರಿಗೊಂಡಿದ್ದಾರೆ. ಈ ಆಸಕ್ತಿದಾಯಕ ವೀಡಿಯೊದಲ್ಲಿ ಸರಳವಾಗಿ ಕಾಣುವ ಕಪ್ಪು ಬೈಸಿಕಲ್ ಅನ್ನು ನೋಡಬಹುದು. ಇದು ಚೌಕಾಕಾರದ ಟೈರ್ ಹೊಂದಿರುವ ಬೈಸಿಕಲ್ ಮೇಲೆ ವ್ಯಕ್ತಿಯೊಬ್ಬರು ಕುಳಿತು, ತುಳಿದುಕೊಂಡು ಹೋಗುವುದನ್ನು ಕಾಣಬಹುದು. ಆತ ಪೆಡಲ್ ಮಾಡಿದಾಗ ಅದು ಸರಾಗವಾಗಿ ಚಲಿಸುತ್ತದೆ. ಇದು ನಿಜವಾಗಿಯೂ ಎಲ್ಲರನ್ನೂ ಆಶ್ಚರ್ಯಕ್ಕೆ ದೂಡಿದೆ. ಈ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಜನ ತೀವ್ರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.