ಒಂದೇ ದಿನ ಬಾಕಿ: ನಾಳೆ ಭಾರತದಲ್ಲಿ ರೋಚಕತೆ ಸೃಷ್ಟಿಸಿರುವ ವಿವೋ V29e ಸ್ಮಾರ್ಟ್ಫೋನ್ ಬಿಡುಗಡೆ
Vivo V29e India Launch: ವಿವೋ ಇಂಡಿಯಾ ತನ್ನ ಮುಂಬರುವ ಫೋನ್ ವಿವೋ ವಿ29ಇ (Vivo V29e) ಸ್ಮಾರ್ಟ್ಫೋನನ್ನು ಅನಾವರಣ ಮಾಡಲು ಸಜ್ಜಾಗಿ ನಿಂತಿದೆ. ದೊಡ್ಡ ಮಟ್ಟದಲ್ಲಿ ತನ್ನ ಹೊಸ ಫೋನನ್ನು ರಿಲೀಸ್ ಮಾಡಲು ಸಿದ್ದವಾಗಿದ್ದು, ಇದಕ್ಕಾಗಿ ಮೀಸಲಾದ ಮೈಕ್ರೋಸೈಟ್ ಅನ್ನು ಸಹ ಪ್ರಾರಂಭಿಸಿದೆ.
1 / 8
ಚೀನಾ ಮೂಲದ ಪ್ರಸಿದ್ಧ ವಿವೋ ಕಂಪನಿ ಭಾರತದಲ್ಲಿ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವುದನ್ನು ಹೆಚ್ಚಿಸಿದೆ. ಮೊದಲ ಕ್ವಾರ್ಟರ್ಗೆ ಹೋಲಿಸಿದರೆ ದ್ವಿತೀಯ ಕ್ವಾರ್ಟರ್ನಲ್ಲಿ ಆಕರ್ಷಕ ಮೊಬೈಲ್ಗಳನ್ನು ಪರಿಚಯಿಸುತ್ತಿದೆ. ಇದೀಗ ಮತ್ತೊಂದು ನೂತನ ಮೊಬೈಲ್ ಬಿಡುಗಡೆ ಮಾಡಲು ವಿವೋ ಸಜ್ಜಾಗಿದೆ.
2 / 8
ವಿವೋ ಇಂಡಿಯಾ ತನ್ನ ಮುಂಬರುವ ಫೋನ್ ವಿವೋ ವಿ29ಇ (Vivo V29e) ಸ್ಮಾರ್ಟ್ಫೋನನ್ನು ಅನಾವರಣ ಮಾಡಲು ಸಜ್ಜಾಗಿ ನಿಂತಿದೆ. ದೊಡ್ಡ ಮಟ್ಟದಲ್ಲಿ ತನ್ನ ಹೊಸ ಫೋನನ್ನು ರಿಲೀಸ್ ಮಾಡಲು ಸಿದ್ದವಾಗಿದ್ದು, ಇದಕ್ಕಾಗಿ ಮೀಸಲಾದ ಮೈಕ್ರೋಸೈಟ್ ಅನ್ನು ಸಹ ಪ್ರಾರಂಭಿಸಿದೆ.
3 / 8
ವಿವೋ V29e ಸ್ಮಾರ್ಟ್ಫೋನ್ ಭಾರತದಲ್ಲಿ ನಾಳೆ ಆಗಸ್ಟ್ 28 ರಂದು ಬಿಡುಗಡೆಯಾಗಲಿದೆ. ಬಿಡುಗಡೆ ಸಮಾರಂಭದ ಕಾರ್ಯಕ್ರಮವು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಪ್ರತಿಯೊಬ್ಬರೂ ಇದನ್ನು ವೀಕ್ಷಿಸಲು ಆನ್‌ಲೈನ್‌ನಲ್ಲಿ ಲೈವ್ ಸ್ಟ್ರೀಮ್ ಆಯ್ಕೆ ನೀಡಲಾಗುತ್ತದೆ ಎಂದು ವಿವೋ ಹೇಳಿದೆ.
4 / 8
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್, ವಿವೋ.ಕಾಮ್ ಮತ್ತು ರಿಟೇಲ್ ಔಟ್‌ಲೆಟ್‌ಗಳ ಮೂಲಕ ಈ ವಿವೋ V29e ಸ್ಮಾರ್ಟ್ಫೋನ್ ಮಾರಾಟವಾಗಲಿದೆ ಎಂಬ ವಿಚಾರ ಕೂಡ ತಿಳಿದುಬಂದಿದೆ.
5 / 8
ವಿವೋ V29e ಕೆಂಪು ಮತ್ತು ನೀಲಿ ಎರಡು ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಆಗಲಿದೆಯಂತೆ. ಇದು ಡ್ಯುಯಲ್-ಟೋನ್ ಹಿಂಬದಿಯ ವಿನ್ಯಾಸದೊಂದಿಗೆ 3D ಡಿಸ್ ಪ್ಲೇ ಮತ್ತು ಬ್ಯಾಕ್ ಪ್ಯಾನಲ್ನಲ್ಲಿ ಬಣ್ಣವನ್ನು ಬದಲಾಯಿಸುವ ಆಯ್ಕೆ ಹೊಂದಿದೆ. ಒಟ್ಟಾರೆಯಾಗಿ, ವಿವೋ V29e ಪ್ರೀಮಿಯಂ ವಿನ್ಯಾಸ ಮತ್ತು ಲುಕ್ ಅನ್ನು ಹೊಂದಿದೆ.
6 / 8
ಭಾರತದಲ್ಲಿ ಬಿಡುಗಡೆಯಾಗಲಿರುವ V29 ಸರಣಿಯ ಮೊದಲ ಫೋನ್ ಇದಾಗಿದೆ. V29e ಬಿಡುಗಡೆಯ ನಂತರ ವಿವೋ V29ಮತ್ತು ವಿವೋ V29 ಪ್ರೊ ಮಾದರಿಗಳು ಅನಾವರಣಗೊಳ್ಳುವ ನಿರೀಕ್ಷೆಯಿದೆ.
7 / 8
ವಿವೋ ಬಿಡುಗಡೆ ಮಾಡಿರುವ ಟೀಸರ್ನಲ್ಲಿ, ವಿವೋ V29e ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ಫೀಚರ್ ಬಹಿರಂಗವಾಗಿದೆ. OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಜೊತೆಗೆ 64MP ಪ್ರಾಥಮಿಕ ಕ್ಯಾಮೆರಾದೊಂದಿಗೆ ಡ್ಯುಯಲ್ ಹಿಂಬದಿಯ ಕ್ಯಾಮೆರಾಗಳನ್ನು ಇದು ಹೊಂದಿದೆ. ಕಡಿಮೆ-ಬೆಳಕಿನ ಛಾಯಾಗ್ರಹಣ ಮತ್ತು ರಾತ್ರಿಯ ಫೋಟೋಕ್ಕಾಗಿ ಕ್ಯಾಮರಾವನ್ನು ಆಪ್ಟಿಮೈಸ್ ಮಾಡಲಾಗಿದೆ. ವಿವೋ V29e ಸಹ ‘ಐ ಆಟೋ ಫೋಕಸ್’ ಜೊತೆಗೆ 50MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
8 / 8
ಭಾರತದಲ್ಲಿ V29e ನ ನಿಖರ ಬೆಲೆ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ ಇದರ ಬೆಲೆ 25,000 ರೂ. ಯಿಂದ 30,000 ರೂ. ಒಳಗಡೆ ಇರಲಿದೆ ಎಂದು ಹೇಳಲಾಗಿದೆ. ಇದು ಭಾರತದಲ್ಲಿ 8GB + 128GB ಮತ್ತು 8GB + 256GB ಯ ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.