Water Fasting: ನೀರಿನ ಉಪವಾಸ ಎಂದರೇನು? ಬೊಜ್ಜು ಕಡಿಮೆ ಮಾಡಲು ಇದು ಹೇಗೆ ಪ್ರಯೋಜನಕಾರಿ?
ಅಕ್ಷತಾ ವರ್ಕಾಡಿ | Updated By: Digi Tech Desk
Updated on:
Jan 22, 2024 | 11:44 AM
ನೀರಿನ ಉಪವಾಸವು ದೇಹಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಏನನ್ನೂ ತಿನ್ನದಿದ್ದಾಗ, ದೇಹವು ತನ್ನನ್ನು ತಾನೇ ಸರಿಪಡಿಸಿಕೊಳ್ಳಲು ಅಂದರೆ ಜೀರ್ಣ ಕ್ರಿಯೆಯನ್ನು ಸರಾಗ ಪೂರ್ಣ ಸಮಯವನ್ನು ತೆಗೆದುಕೊಳ್ಳುತ್ತದೆ.
1 / 6
ಹೆಸರೇ ಸೂಚಿಸುವಂತೆ, ಈ ಉಪವಾಸದಲ್ಲಿ ನೀರನ್ನು ಮಾತ್ರ ಕುಡಿಯಲಾಗುತ್ತದೆ. ಸಾಕಷ್ಟು ಜನರು ತಮ್ಮ ತೂಕ ಇಳಿಸಿಕೊಳ್ಳಲು ಈ ರೀತಿಯ ಉಪವಾಸವನ್ನು ಮಾಡುತ್ತಾರೆ. ಜನರು ಇದನ್ನು 24 ರಿಂದ 72 ಗಂಟೆಗಳ ಕಾಲ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡುತ್ತಾರೆ.
2 / 6
ನೀರಿನ ಉಪವಾಸವು ದೇಹಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಏನನ್ನೂ ತಿನ್ನದಿದ್ದಾಗ, ದೇಹವು ತನ್ನನ್ನು ತಾನೇ ಸರಿಪಡಿಸಿಕೊಳ್ಳಲು ಅಂದರೆ ಜೀರ್ಣ ಕ್ರಿಯೆಯನ್ನು ಸರಾಗ ಪೂರ್ಣ ಸಮಯವನ್ನು ಪಡೆಯುತ್ತದೆ.
3 / 6
ನೀರಿನ ಉಪವಾಸವು ನಮ್ಮ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ, ಇದು ಇನ್ಸುಲಿನ್ ಅನ್ನು ಮೊದಲಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
4 / 6
ನೀರಿನ ಉಪವಾಸದಿಂದ ದೇಹದಲ್ಲಿ ಸಂಗ್ರಹವಾದ ಕೊಳೆ ಮತ್ತು ಕೊಬ್ಬು ಹೊರಹಾಕಲ್ಪಡುತ್ತದೆ ಮತ್ತು ಇದು ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸಹಾಯಕವಾಗಿದೆ.
5 / 6
ನೀರಿನ ಉಪವಾಸ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದಾಗಿ ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
6 / 6
ನೀರಿನ ಉಪವಾಸವು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯ ಕಾಯಿಲೆಗಳನ್ನು ತಡೆಯುತ್ತದೆ.
Published On - 8:11 pm, Sat, 20 January 24