ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ: ಅಯೋಧ್ಯೆ ಜಗಮಗ, ಮದುವಣಗಿತ್ತಿಯಂತೆ ಸಿಂಗಾರಗೊಂಡ ದೇವನಗರಿ

ಅಯೋಧ್ಯೆಯ ಗರ್ಭಗುಡಿಯಲ್ಲಿ ವಿರಾಜಮಾನವಾಗಿ ನಿಂತಿರುವ ಬಾಲರಾಮನಿಗೆ ನಾಳೆ ಪ್ರಾಣಪ್ರತಿಷ್ಠಾಪನೆ ನಡೆಯುತ್ತಿದೆ. ಅತ್ಯಂತ ವಿಧಿವತ್ತಾಗಿ ಕಾರ್ಯಕ್ರಮ ನಡೆಯಲಿದೆ. ಸದ್ಯ ಅಯೋಧ್ಯೆ ಜಗಮಗಿಸುತ್ತಿದೆ. ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಇಡೀ ದೇಶವೇ ಭಕ್ತಿ ಭಾವದಿಂದ ಎದುರು ನೋಡುತ್ತಿರುವ ರಾಮಮಂದಿರ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ.

ಗಂಗಾಧರ​ ಬ. ಸಾಬೋಜಿ
|

Updated on: Jan 21, 2024 | 8:32 AM

ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಜ. 22ರಂದು ಶತಶತಮಾನಗಳಿಂದ ರಾಮ ಭಕ್ತರ ಕನವರಿಕೆಗೆ ಫಲಸಿಗುವ ಸನ್ನಿವೇಶ ಒದಗಿ ಬರಲಿದೆ. ಅದಕ್ಕಾಗಿ ದೇವನಗರಿ ಅಯೋಧ್ಯೆ ಹಿಂದೆಂದಿಗಿಂತಲೂ ನವ ವೈಭವದಲ್ಲಿ ಅದ್ಧೂರಿಯಾಗಿ ಸಜ್ಜುಗೊಂಡಿದೆ.

1 / 7
ರಾಮ ಮಂದಿರದ ವಿಹಂಗಮ ನೋಟ ಎಲ್ಲರನ್ನ ಸೆಳೆಯುತ್ತಿದೆ. ವಿದ್ಯುತ್ ದೀಪಗಳ ಅಲಂಕಾರ ಒಂದೆಡೆಯಾದರೆ, ನಾನಾ ಬಗೆಯ ಹೂಗಳಿಂದ ರಾಮನ ಭವ್ಯ ಮಂದಿರವನ್ನ ಸಿಂಗಾರಗೊಳಿಸಲಾಗಿದೆ.

2 / 7
ರಾಮಮಂದಿರದ ಕಂಬ ಕಂಬಗಳೂ ಪುಷ್ಪಾಲಂಕೃತವಾಗಿ ಕಂಗೊಳಿಸುತ್ತಿವೆ. ಸ್ವಾಗತ ದ್ವಾರವನ್ನು ಪುಷ್ಪಲಂಕಾರದಿಂದ ಅಲಂಕರಿಸಲಾಗಿದೆ.

3 / 7
ದೇವಾಲಯದ ಅಲಂಕಾರಕ್ಕಾಗಿ 50 ಸಾವಿರ ಕೆಜಿಗೂ ಹೆಚ್ಚು ಹೂವುಗಳನ್ನು ಬಳಕೆ ಮಾಡಲಾಗಿದೆ. ಈ ಹೂವುಗಳು ದೇಶದ ಮೂಲೆ ಮೂಲೆಯಿಂದ ಅಯೋಧ್ಯೆ ತರಲಾಗಿದೆ.

4 / 7
ಚೆಂಡು ಹೂವುಗಳನ್ನು ಅಲಂಕಾರದಲ್ಲಿ ಬಳಸಲಾಗಿದೆ. ಇದರೊಂದಿಗೆ ಕೆಂಪು, ಹಳದಿ, ಹಸಿರು ಮತ್ತು ನೀಲಿ ಬಣ್ಣದ ಹೂಗಳನ್ನು ಬಳಸಿಕೊಳ್ಳಲಾಗಿದೆ.

5 / 7
ದೇವಾಲಯದ ಒಳಗಿನ ವಿನ್ಯಾಸದಂತೆಯೇ, ಸುಂದರ ಮತ್ತು ಭವ್ಯವಾಗಿ ಕಾಣಲು ಅದೇ ರೀತಿಯಲ್ಲಿ ಹೂವುಗಳಿಂದ ಅಲಂಕರಿಸಲಾಗಿದೆ.

6 / 7
ಅಯೋಧ್ಯೆಯಲ್ಲಿ ರಾಮಲಾಲ ಪ್ರಾಣಪ್ರತಿಷ್ಠಾಪನೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಹೀಗಿರುವಾಗ ದೇಗುಲದ ಜತೆಗೆ ಇಡೀ ಅಯೋಧ್ಯೆ ಸಿಂಗಾರಗೊಳ್ಳುತ್ತಿದೆ.

7 / 7
Follow us