Weight Loss
ತೂಕ ಇಳಿಸಿಕೊಳ್ಳುವುದು ಕೇವಲ ಸುಂದರವಾಗಿ ಕಾಣಲು ಮಾತ್ರವಲ್ಲ; ಆರೋಗ್ಯಕ್ಕೂ ಬಹಳ ಅಗತ್ಯ. ದೇಹದ ತೂಕ ಅತಿಯಾದರೆ ಆ ಬೊಜ್ಜಿನಿಂದಾಗಿ ಡಯಾಬಿಟಿಸ್, ಅಧಿಕ ರಕ್ತದೊತ್ತಡ (ಬಿಪಿ), ಹೃದ್ರೋಗ ಸೇರಿದಂತೆ ಅನೇಕ ರೀತಿಯ ರೋಗಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ, ತೂಕವನ್ನು ಕಡಿಮೆ ಮಾಡಿಕೊಳ್ಳಲು ನಮ್ಮ ಡಯೆಟ್ನಲ್ಲಿ ಫೈಬರ್, ಕ್ಯಾಲ್ಸಿಯಂ, ಐರನ್, ಅಧಿಕ ನೀರಿನಂಶವಿರುವ ಆಹಾರಗಳನ್ನು ಹೆಚ್ಚು ಸೇರಿಸಿಕೊಳ್ಳಬೇಕು. ಇದರ ಜೊತೆಗೆ ದಿನನಿತ್ಯ 30 ನಿಮಿಷಗಳ ವಾಕಿಂಗ್ ಅಥವಾ ಜಾಗಿಂಗ್, ಲಘು ವ್ಯಾಯಾಮಗಳು ಕೂಡ ಅತ್ಯಗತ್ಯ. ಆದರೆ, ತೂಕ ಇಳಿಸಿಕೊಳ್ಳಲು ಅತಿಯಾದ ಮೆಡಿಸಿನ್ಗಳನ್ನು ಸೇವಿಸಬೇಡಿ. ಇದರ ಬದಲು ಆರೋಗ್ಯಕರ ರೀತಿಯಲ್ಲೇ ತೂಕ ಇಳಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಯಾವ ರೀತಿಯ ಅಡ್ಡಪರಿಣಾಮಗಳೂ ಆಗದಂತೆ ಎಚ್ಚರ ವಹಿಸಬಹುದಾಗಿದೆ.