Weight Loss: ತೂಕ ಇಳಿಸಬೇಕಾ? ಈ ತಪ್ಪುಗಳನ್ನೆಂದೂ ಮಾಡಬೇಡಿ

ತೂಕ ಇಳಿಸಲು ಬಹಳ ಪ್ರಯತ್ನ ಪಡುತ್ತೀರಾ? ತೂಕ ಇಳಿಸಲು ವ್ಯಾಯಾಮ, ಜಿಮ್ ವರ್ಕ್​ಔಟ್, ಡಯೆಟ್ ಮಾಡುವವರು ಮಾಡುವ ಕೆಲವು ಸಾಮಾನ್ಯ ತಪ್ಪುಗಳಿಂದಾಗಿ ತೂಕ ಇಳಿಸಲು ಕಷ್ಟವಾಗುತ್ತದೆ. ಅವರ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಯಶಸ್ವಿಯಾಗಿ ತೂಕ ಇಳಿಸಿಕೊಳ್ಳಬಹುದು.

Weight Loss: ತೂಕ ಇಳಿಸಬೇಕಾ? ಈ ತಪ್ಪುಗಳನ್ನೆಂದೂ ಮಾಡಬೇಡಿ
ತೂಕ ಇಳಿಕೆImage Credit source: istock
Follow us
ಸುಷ್ಮಾ ಚಕ್ರೆ
|

Updated on: Apr 20, 2024 | 11:23 AM

ತೂಕ ಇಳಿಸಲು (Weight Loss Tips) ಪ್ರಯತ್ನ ಮಾಡುವವರು ಆಹಾರ, ವ್ಯಾಯಾಮ (Exercise) ಅಥವಾ ಮಲಗುವ ಮಾದರಿಗಳ ಬಗ್ಗೆಯೂ ಗಮನ ಹರಿಸಬೇಕು. ಇದೇ ಮೊದಲ ಬಾರಿಗೆ ತೂಕ ಇಳಿಸುವ ಪ್ರಯತ್ನ ಮಾಡುತ್ತಿದ್ದರೆ ಆರಂಭಿಕರು ವಿಶೇಷವಾಗಿ ಜಾಗರೂಕರಾಗಿರಬೇಕು. ಟ್ರ್ಯಾಕ್‌ನಲ್ಲಿ ಉಳಿಯುವ ಬಗ್ಗೆ ಎಚ್ಚರದಿಂದಿರಬೇಕು. ತೂಕ ಇಳಿಕೆಗೆ ಜನರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದಕ್ಕೆ ಒಂದು ದೊಡ್ಡ ಪಟ್ಟಿಯೇ ಇದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ತೂಕ ಇಳಿಸಲು ತೊಂದರೆ ಮಾಡುವ ಕೆಲವು ಅಭ್ಯಾಸಗಳಿವು…

ಊಟವನ್ನು ಬಿಟ್ಟುಬಿಡುವುದು:

ಹೆಚ್ಚುವರಿ ತೂಕ ಇಳಿಸಿಕೊಳ್ಳಲು ಆಹಾರವನ್ನು ಸೇವಿಸದೇ ಉಪವಾಸ ಇರುವುದು ಪರಿಹಾರವಲ್ಲ. ಇದು ಉಲ್ಟಾ ಪರಿಣಾಮ ಬೀರಬಹುದು. ತೂಕ ಇಳಿಕೆ ದೇಹವು ಆರೋಗ್ಯಕರವಾಗಿ ಉಳಿಯಲು ಇದು ಸಮರ್ಥನೀಯ ವಿಧಾನವಾಗಿದೆ. ಕ್ಯಾಲೋರಿ ಕಡಿಮೆ ಮಾಡಲು ಊಟವನ್ನು ತಪ್ಪಿಸುವುದು ನಿಮ್ಮ ಚಯಾಪಚಯವನ್ನು ನಿಧಾನಗೊಳಿಸುತ್ತದೆ.

ಇದನ್ನೂ ಓದಿ: Summer Health: ಬಿಸಿಲಲ್ಲಿ ಸೆಖೆ ತಾಳಲಾರದೆ ಐಸ್ ನೀರು ಕುಡಿಯುತ್ತೀರಾ?

ಫೈಬರ್ ಅನ್ನು ಕಳೆದುಕೊಳ್ಳುವುದು:

ಸಮತೋಲಿತ ಆಹಾರವನ್ನು ಸೇವಿಸುವುದು ಅಗತ್ಯವಾಗಿದ್ದರೂ, ಫೈಬರ್ ಅನ್ನು ಮರೆತುಬಿಡುವುದು ಒಳ್ಳೆಯದಲ್ಲ. ಫೈಬರ್ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಚಯಾಪಚಯವನ್ನು ವೇಗಗೊಳಿಸುತ್ತದೆ. ಇದು ಕ್ಯಾಲೊರಿಗಳನ್ನು ವೇಗವಾಗಿ ಕಡಿಮೆಯಾಗುವಂತೆ ಮಾಡುತ್ತದೆ.

ಅತಿಯಾದ ಒತ್ತಡ:

ಕೆಲವೊಮ್ಮೆ ಅತಿಯಾದ ಒತ್ತಡ ನಮ್ಮ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸಬಹುದು. ಒತ್ತಡದ ಆಳ ಮತ್ತು ಪರಿಣಾಮವನ್ನು ನಾವು ಗ್ರಹಿಸದೇ ಇರಬಹುದು. ಒತ್ತಡದ ಹಾರ್ಮೋನ್‌ಗಳ ಅತಿಯಾದ ಬಿಡುಗಡೆಯಿಂದಾಗಿ ತೂಕ ಹೆಚ್ಚಾಗಬಹುದು.

ಪ್ಯಾಕ್ ಮಾಡಲಾದ ಆಹಾರಗಳು:

ಪ್ಯಾಕ್ ಮಾಡಲಾಗುವ ಆಹಾರ ಸೇವಿಸುವಾಗ ಯಾವಾಗಲೂ ಲೇಬಲ್‌ಗಳನ್ನು ಓದಿ. ಕೆಲವೊಮ್ಮೆ ಪ್ಯಾಕ್ ಮಾಡಿದ, ನೀವು ಆರೋಗ್ಯಕರ ಎಂದುಕೊಂಡಿರುವ ಆಹಾರಗಳು ನೀವು ಯೋಚಿಸುವಷ್ಟು ಆರೋಗ್ಯಕರವಾಗಿರುವುದಿಲ್ಲ. ಹಲವು ಅಪಾಯದಿಂದ ದೂರವಿರಲು ಸಾಧ್ಯವಾದಷ್ಟು ಮನೆ ಊಟವನ್ನು ಸೇವಿಸುವಂತೆ ತಜ್ಞರು ಶಿಫಾರಸು ಮಾಡುತ್ತಾರೆ.

ಇದನ್ನೂ ಓದಿ: ಈ 8 ಆಹಾರಗಳನ್ನು ಎಂದಿಗೂ ಮತ್ತೆ ಬಿಸಿ ಮಾಡಬೇಡಿ

ನೀರು ಕುಡಿಯದಿರುವುದು:

ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳುವುದು ತೂಕ ಇಳಿಸಿಕೊಳ್ಳುವ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ದೇಹವನ್ನು ಆರೋಗ್ಯಕರವಾಗಿಡಲು ಸಹ ಇದು ಸಹಕಾರಿ. ಇದು ನಿರ್ಜಲೀಕರಣ ಮತ್ತು ಅನಗತ್ಯ ಕಡುಬಯಕೆಗೆ ಕಾರಣವಾಗಬಹುದು. ದ್ರವ ಸೇವನೆಯು ಚಯಾಪಚಯ ದರ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಸಹಾಯ ಮಾಡುತ್ತದೆ, ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ನಿದ್ರಾಹೀನತೆ:

ಕಳಪೆ ನಿದ್ರೆಯ ಮಾದರಿಯು ನಿಮ್ಮ ತೂಕ ಇಳಿಸುವ ದಿನಚರಿಯನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು. ದೇಹವು ನಿದ್ರಿಸಿದಾಗ ಅದು ಚೇತರಿಸಿಕೊಳ್ಳುತ್ತದೆ ಮತ್ತು ಮರುದಿನಕ್ಕೆ ಸಿದ್ಧವಾಗುತ್ತದೆ. ಆದರೆ ನಿದ್ರೆಯ ವೇಳಾಪಟ್ಟಿಗಳು ಅಸ್ತವ್ಯಸ್ತವಾಗಿರುವಾಗ, ಅದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವಯಸ್ಕರಿಗೆ ಕನಿಷ್ಠ 7-8 ಗಂಟೆಗಳ ಕಾಲ ಉತ್ತಮ ಗುಣಮಟ್ಟದ ನಿದ್ರೆ ಅತ್ಯಗತ್ಯ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ