ಕೆಲವರಿಗೆ ಏನೇ ತಿಂದರೂ, ಕುಡಿದರೂ ಎದೆನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ ಪದೇ ಪದೇ ಬರುವ ಎದೆನೋವಿಗೆ ಮಾತ್ರೆ ತೆದುಕೊಳ್ಳುವ ಬದಲು ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿಕೊಂಡು ಎದೆ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು.
ತಣ್ಣೀರಿನೊಂದಿಗೆ ಸ್ವಲ್ಪ ನಿಂಬೆ ರಸ ಬೆರೆಸಿ ಒಂದು ವಾರ ಸೇವಿಸಿದರೆ ಎದೆನೋವು ಬರುವುದು ಕಡಿಮೆಯಾಗುತ್ತದೆ. ನಿಂಬೆ ರಸ ಕೆಲವರ ದೇಹಕ್ಕೆ ಆಗುವುದಿಲ್ಲ ಅಂತವರು ಇದನ್ನು ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳಿ.
ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ನೆನೆಹಾಕಿ. ಬಳಿಕ ಶೋಧಿಸಿ ಆ ನೀರಿಗೆ ಹಾಲು ಮತ್ತು ಸಕ್ಕರೆ ಬೆರೆಸಿ ಸೇವಿಸಿದರೆ ಎದೆನೋವು ಕಡಿಮೆ ಆಗುತ್ತದೆ.
ಎಳೆಯ ಸೀಬೆಕಾಯಿಯನ್ನು ಕತ್ತರಿಸಿ ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯವನ್ನು ಸಿದ್ದಪಡಿಸಿ ಅದಕ್ಕೆ ಮಜ್ಜಿಗೆ ಬೆರೆಸಿ ಕುಡಿಯುವುದರಿಂದಲೂ ಕೂಡ ಎದೆನೋವು ಕಡಿಮೆ ಆಗುತ್ತದೆ.
ಕೊತ್ತಂಬರಿ ಸೊಪ್ಪನ್ನು ಎಳನೀರಿನೊಂದಿಗೆ ರುಬ್ಬಿ ಆ ಮಿಶ್ರಣಕ್ಕೆ ಕಲ್ಲು ಸಕ್ಕರೆ, ಏಲಕ್ಕಿ ಪುಡಿ ಬೆರೆಸಿ ದಿನಕ್ಕೆ ಮೂರು ಬಾರಿ ಸೇವನೆ ಮಾಡಿದಲ್ಲಿ ಎದೆನೋವು ಕಡಿಮೆಯಾಗುತ್ತದೆ. ಈ ಮಾಹಿತಿಯನ್ನು lifestylekannadati ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.