WhatsApp banned: ಭಾರತದಲ್ಲಿ 30 ಲಕ್ಷಕ್ಕೂ ಅಧಿಕ ವಾಟ್ಸ್ಆ್ಯಪ್ ಖಾತೆ ಬ್ಯಾನ್
TV9 Web | Updated By: ಝಾಹಿರ್ ಯೂಸುಫ್
Updated on:
Sep 01, 2021 | 9:35 PM
WhatsApp banned: ಮೇ 26, 2021 ರಂದು ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು (5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು) ಪ್ರತಿ ತಿಂಗಳು ವರದಿಗಳನ್ನು ಪ್ರಕಟಿಸಬೇಕು. ಸ್ವೀಕರಿಸಿದ ದೂರುಗಳ ವಿವರಗಳನ್ನು ಮತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು.
1 / 6
ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸ್ಆ್ಯಪ್ ಜೂನ್ 16 ರಿಂದ ಜುಲೈ 31 ನಡುವೆ 3 ದಶಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ನಿರ್ಬಂಧಿಸಿದೆ ಎಂದು ಘೋಷಿಸಿದೆ. ಅಂದರೆ 46 ದಿನಗಳಲ್ಲಿ ಬರೋಬ್ಬರಿ 3,027,000 ಭಾರತೀಯ ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸ್ಆ್ಯಪ್ ಹೇಳಿಕೊಂಡಿದೆ.
2 / 6
ಜೂನ್ 16 ರಿಂದ ಜುಲೈ 31ರ ಅವಧಿಯಲ್ಲಿ 594 ದೂರುಗಳನ್ನು ಸ್ವೀಕರಿಸಲಾಗಿದೆ. ವಾಟ್ಸ್ಆ್ಯಪ್ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಅದರಂತೆ 30 ಲಕ್ಷಕ್ಕೂ ಅಧಿಕ ವಾಟ್ಸ್ಆ್ಯಪ್ ಖಾತೆಗಳು ಬ್ಯಾನ್ ಮಾಡಲಾಗಿದೆ ಎಂದು ವಾಟ್ಸ್ಆ್ಯಪ್ ತಿಳಿಸಿದೆ.
3 / 6
ಆ ಪೈಕಿ ಶೇ .95 ಕ್ಕಿಂತ ಹೆಚ್ಚು ಖಾತೆಗಳು ಸ್ಪ್ಯಾಮ್ ಸಂದೇಶಗಳನ್ನು ರವಾನಿಸುತ್ತಿತ್ತು. ಮತ್ತೊಂದೆಡೆ, ಜೂನ್ 16 ಮತ್ತು ಜುಲೈ 31 ರ ನಡುವೆ, ಇನ್‌ಸ್ಟಾಗ್ರಾಮ್‌ನಲ್ಲಿ 1,504 ದೂರುಗಳನ್ನು ಸ್ವೀಕರಿಸಲಾಗಿದೆ. ಇನ್ನುಳಿದಂತೆ 265 ದೂರುಗಳು ಬಂದಿದ್ದವು ಎಂದು ಫೇಸ್‌ಬುಕ್ ಕಂಪೆನಿ ಹೇಳಿದೆ.
4 / 6
ಕಳೆದ ತಿಂಗಳು ತನ್ನ ವರದಿಯಲ್ಲಿ ಮೇ 15 ರಿಂದ ಜೂನ್ 15 ರ ನಡುವೆ ಭಾರತದಲ್ಲಿ ಕನಿಷ್ಠ 20 ಲಕ್ಷ ಖಾತೆಗಳನ್ನು ನಿಷೇಧಿಸಿದೆ ಎಂದು ವಾಟ್ಸ್ಆ್ಯಪ್ ಒಡೆತನದ ಫೇಸ್‌ಬುಕ್ ಹೇಳಿತ್ತು. ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳಿಗೆ ಅನುಸಾರವಾಗಿ ಕಂಪೆನಿಯು ಈ ಕ್ರಮಗೊಳ್ಳುತ್ತಿದೆ ಎಂದು ಸ್ಪಷ್ಟಪಡಿಸಿದೆ.
5 / 6
ಇನ್ನೊಂದೆಡೆ ಗೂಗಲ್ ಸರ್ಚ್ ಇಂಜಿನ್ ಕೂಡ ಜುಲೈನಲ್ಲಿ, ಮೇ ಮತ್ತು ಜೂನ್ ತಿಂಗಳಲ್ಲಿ ಸ್ವೀಕರಿಸಿದ ದೂರುಗಳನ್ನು ಆಧರಿಸಿ 1.5 ಲಕ್ಷಕ್ಕೂ ಹೆಚ್ಚು ವಿಷಯವನ್ನು ತೆಗೆದುಹಾಕಿದೆ ಎಂದು ಹೇಳಿದೆ. ಇವುಗಳಲ್ಲಿ, ಶೇ. 98 ರಷ್ಟು ಕಾಪಿರೈಟ್ ದೂರುಗಳಾಗಿದ್ದವು ಎಂದು ಗೂಗಲ್ ತಿಳಿಸಿದೆ.
6 / 6
ಮೇ 26 ರಂದು ಜಾರಿಗೆ ಬಂದ ಹೊಸ ಐಟಿ ನಿಯಮಗಳ ಪ್ರಕಾರ ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು (5 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು) ಪ್ರತಿ ತಿಂಗಳು ವರದಿಗಳನ್ನು ಪ್ರಕಟಿಸಬೇಕು. ಸ್ವೀಕರಿಸಿದ ದೂರುಗಳ ವಿವರಗಳನ್ನು ಮತ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು.
Published On - 7:24 pm, Wed, 1 September 21