WhatsApp: ನಕಲಿ ವಾಟ್ಸ್​ಆ್ಯಪ್ ಬಂದಿದೆ…ವಾಟ್ಸ್​ಆ್ಯಪ್ ಎಚ್ಚರಿಕೆ..!

| Updated By: ಝಾಹಿರ್ ಯೂಸುಫ್

Updated on: Jul 13, 2022 | 11:58 AM

WhatsApp: ಪ್ರಸ್ತುತ ವಿಶ್ವದ ಅತಿದೊಡ್ಡ ಮಲ್ಟಿಮೀಡಿಯಾ ಅಪ್ಲಿಕೇಶನ್ ಆಗಿರುವ ವಾಟ್ಸ್​ಆ್ಯಪ್​ನ ನಕಲಿ ಆ್ಯಪ್​ಗಳು ಕೂಡ ಲಭ್ಯವಿದೆ. ಅದರಲ್ಲೂ ಇತ್ತೀಚೆಗೆ ಪ್ಲೇಸ್ಟೋರ್​ನಲ್ಲೇ ಹೇ ವಾಟ್ಸ್​ಆ್ಯಪ್ ಹೆಸರಿನ ನಕಲಿ ಆ್ಯಪ್ ಕೂಡ ಕಂಡು ಬಂದಿತ್ತು.

1 / 6
ಮೆಟಾ-ಮಾಲೀಕತ್ವದ ವಿಶ್ವದ ಜನಪ್ರಿಯ ಅಪ್ಲಿಕೇಶನ್ ವಾಟ್ಸ್​ಆ್ಯಪ್​ನ​ (WhatsApp) ನಕಲಿ ಆ್ಯಪ್​ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಖುದ್ದು ವಾಟ್ಸ್​ಆ್ಯಪ್ ಮುಖ್ಯಸ್ಥರೇ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಹಲವು ರೀತಿಯ ಫೇಕ್​ ವಾಟ್ಸ್​ಆ್ಯಪ್​ ಅಪ್ಲಿಕೇಶನ್​ ಇದ್ದು, ಇಂತಹ ಆ್ಯಪ್​ಗಳ ಬಳಕೆದಾರರನ್ನು ಹ್ಯಾಕರ್​ಗಳು ಗುರಿಯಾಗಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

2 / 6
ಈ ಬಗ್ಗೆ ಟ್ವೀಟ್ ಮಾಡಿರುವ ವಾಟ್ಸ್​ಆ್ಯಪ್ ಸಿಇಒ ಕ್ಯಾತ್‌ಕಾರ್ಟ್, ಬಳಕೆದಾರರು ನಕಲಿ ಅಥವಾ ಮೋಡಿಫೈ ವಾಟ್ಸ್​ಆ್ಯಪ್​ಗಳನ್ನು ಡೌನ್‌ಲೋಡ್ ಮಾಡುವುದು ಒಳ್ಳೆಯದಲ್ಲ. ಈ ಆ್ಯಪ್​ಗಳು ನಿಮ್ಮ ಗೌಪ್ಯತೆ ಮತ್ತು ಭದ್ರತೆಗೆ ಮಾರಕ ಎಂಬುದರ ಬಗ್ಗೆ ಎಚ್ಚರವಿರಲಿ. ವಂಚಕರು ಇಂತಹ ಆ್ಯಪ್​ಗಳ ಮೂಲಕ ನಿಮ್ಮ ಡೇಟಾ ಮೇಲೆ ಕಣ್ಣಿಟ್ಟಿರುತ್ತಾರೆ ಎಂದು ಎಚ್ಚರಿಸಿದ್ದಾರೆ.

3 / 6
 ಪ್ರಸ್ತುತ ವಿಶ್ವದ ಅತಿದೊಡ್ಡ ಮಲ್ಟಿಮೀಡಿಯಾ ಅಪ್ಲಿಕೇಶನ್ ಆಗಿರುವ ವಾಟ್ಸ್​ಆ್ಯಪ್​ನ ನಕಲಿ ಆ್ಯಪ್​ಗಳು ಕೂಡ ಲಭ್ಯವಿದೆ. ಅದರಲ್ಲೂ ಇತ್ತೀಚೆಗೆ ಪ್ಲೇಸ್ಟೋರ್​ನಲ್ಲೇ ಹೇ ವಾಟ್ಸ್​ಆ್ಯಪ್ ಹೆಸರಿನ ನಕಲಿ ಆ್ಯಪ್ ಕೂಡ ಕಂಡು ಬಂದಿತ್ತು. ಈ ಆ್ಯಪ್​ ಅನ್ನು  ಹೇಮೊಡ್ಸ್ ಎಂಬ ಡೆವಲಪರ್ ಅಭಿವೃದ್ಧಿಪಡಿಸಿದ್ದರು.

4 / 6
ಹೇ ವಾಟ್ಸ್​​ಆ್ಯಪ್​ನಲ್ಲಿ ಮಾಲ್​ವೇರ್ ಕಂಡು ಬಂದಿದ್ದು, ಇದರ ಬಳಕೆದಾರರ ಡೇಟಾ ಮೇಲೆ ಹ್ಯಾಕರುಗಳು ಕಣ್ಣಿಟ್ಟಿರುವುದು ಕೂಡ ಖಚಿತವಾಗಿತ್ತು. ಇದರ ಬೆನ್ನಲ್ಲೇ ಇದೀಗ ನಕಲಿ ವಾಟ್ಸ್​ಆ್ಯಪ್​ಗಳ ಬಳಕೆಯ ಬಗ್ಗೆ ವಾಟ್ಸ್​ಆ್ಯಪ್ ಸಿಇಓ ಕ್ಯಾತ್​ಕಾರ್ಟ್ ಅವರೇ ಎಚ್ಚರಿಸಿದ್ದಾರೆ.

5 / 6
ವಿಲ್ ಕ್ಯಾತ್‌ಕಾರ್ಟ್ ಅವರು ಈ ನಿಟ್ಟಿನಲ್ಲಿ ಗೂಗಲ್‌ನೊಂದಿಗೆ ಚರ್ಚಿಸಿದ್ದು, ಇದಾದ ಬಳಿಕ ಹೇ ವಾಟ್ಸ್​ಆ್ಯಪ್ ಅನ್ನು ತೆಗೆದು ಹಾಕಲಾಯಿತು.

6 / 6
ಆದರೆ ಇದೇ ಅಪ್ಲಿಕೇಶನ್ ಅನ್ನು ಥರ್ಡ್​ ಪಾರ್ಟಿ ಮೂಲಕ ಡೌನ್​ ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಹೀಗಾಗಿ ಯಾರೂ ಕೂಡ ನಕಲಿ ವಾಟ್ಸ್​​ಆ್ಯಪ್​ಗಳನ್ನು ಡೌನ್​ಲೋಡ್​ ಮಾಡದಂತೆ ಎಚ್ಚರವಹಿಸಲು ತಿಳಿಸಲಾಗಿದೆ.