Kannada News Photo gallery WhatsApp New Feature testing the ability to group admin delete any specific messages for everyone in group
WhatsApp: ವಾಟ್ಸ್ಆ್ಯಪ್ ಡಿಲೀಟ್ ಮೆಸೇಜ್ನಲ್ಲಿ ಶಾಕಿಂಗ್ ಬದಲಾವಣೆ: ಹೊಸ ಅಪ್ಡೇಟ್ನಲ್ಲಿದೆ ಊಹಿಸಲಾಗದ ಫೀಚರ್
TV9 Web | Updated By: Vinay Bhat
Updated on:
Dec 16, 2021 | 3:01 PM
WhatsApp New Feature: ಇತ್ತೀಚೆಗಷ್ಟೆ ವಾಯ್ಸ್ ಮೆಸೇಜ್ ಕಳುಹಿಸುವ ಮೊದಲು ವಾಯ್ಸ್ ಮೆಸೇಜ್ಗಳನ್ನು ಕೇಳಲು ಅನುವು ಮಾಡಿಕೊಡುವ ಆಯ್ಕೆಯನ್ನು ನೀಡಿದ್ದ ವಾಟ್ಸ್ಆ್ಯಪ್ ಇದೀಗ ಗ್ರೂಪ್ ಅಡ್ಮಿನ್ಗಳಿಗೆ ವಿಶೇಷ ಅಧಿಕಾರವೊಂದನ್ನು ನೀಡುವ ಫೀಚರ್ ಅನ್ನು ಪರಿಚಯಿಸುತ್ತಿದೆ.
1 / 7
ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ ತನ್ನ ಬಳಕೆದಾರರ ದಿನದಿಂದ ದಿನಕ್ಕೆ ಹೆಚ್ಚಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ವಾಟ್ಸ್ಆ್ಯಪ್ ಒಳಗೊಂಡಿರುವ ಫೀಚರ್ಸ್. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಸದಾ ಒಂದಲ್ಲ ಒಂದು ಹೊಸ ಆಯ್ಕೆಯನ್ನು ಪರಿಚಯಿಸಿ ಅಪ್ಡೇಟ್ಗಳನ್ನು ನೀಡುವ ವಾಟ್ಸ್ಆ್ಯಪ್ ಇದೀಗ ಡಿಲೀಟ್ ಮೆಸೇಜ್ ಆಯ್ಕೆಯಲ್ಲಿ ಬದಲಾವಣೆ ತರಲು ಮುಂದಾಗಿದೆ.
2 / 7
ಹೌದು, ವಾಟ್ಸ್ಆ್ಯಪ್ ಇದೀಗ ಗ್ರೂಪ್ ಅಡ್ಮಿನ್ಗಳಿಗೆ ವಿಶೇಷ ಅಧಿಕಾರವೊಂದನ್ನು ನೀಡುವ ಫೀಚರ್ ಅನ್ನು ಪರಿಚಯಿಸುತ್ತಿದೆ. ಈ ಹೊಸ ವೈಶಿಷ್ಟ್ಯಗಳು ಶೀಘ್ರದಲ್ಲೇ ಬರಬಹುದು. ಹೀಗಾಗಿ ಗ್ರೂಪ್ ಅಡ್ಮಿನ್‌ಗಳು ಸದಸ್ಯರ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಬಹುದು.
3 / 7
ಇದರ ಪ್ರಕಾರ ಗ್ರೂಪ್ ಅಡ್ಮಿನ್‌ಗಳು ಗ್ರೂಪ್ನಲ್ಲಿ ಬಂದ ಯಾವುದೇ ಮೆಸೇಜ್ಗಳನ್ನು ಡಿಲೀಟ್ ಮಾಡುವ ಅಧಿಕಾರ ಹೊಂದಿರುತ್ತಾರೆ. ಇದು ಸ್ಪಾಮ್ ಮೆಸೇಜ್ ಅಥವಾ ಯಾವುದಾದರು ಅಶ್ಲೀಲ ಸಂಭಾಷಣೆ, ವಿಡಿಯೋ, ಫೋಟೋಗಳನ್ನು ತೆರವು ಮಾಡಲು ಸಹಕಾರಿ ಆಗುತ್ತಾದೆ. ಅಂದರೆ, ಗ್ರೂಪ್ನಲ್ಲಿ ಬೇರೆ ಯಾರಾದರು ಅನಗತ್ಯ ಮೆಸೇಜ್ಗಳನ್ನು ಕಳುಹಿಸಿದರೆ ಅದನ್ನು ಅಡ್ಮಿನ್ ಡಿಲೀಟ್ ಮಾಡಬಹುದಾಗಿದೆ.
4 / 7
ಗ್ರೂಪ್ ಅಡ್ಮಿನ್ ಡಿಲೀಟ್ ಮೆಸೇಜ್ ಆಯ್ಕೆ ಸದ್ಯಕ್ಕೆ ಪರೀಕ್ಷಾ ಹಂತದಲ್ಲಿದೆ. 2.22.1.1 ಅಪ್ಡೇಟ್ನಲ್ಲಿ ಈ ಫೀಚರ್ಸ್ ಬಳಕೆದಾರರಿಗೆ ಸಿಗಲಿದೆಯಂತೆ. ಮೆಸೇಜ್ ಡಿಲೀಟ್ ಆದ ಸಂದರ್ಭ This was removed by an admin ಎಂದು ಕಾಣಿಸುತ್ತದೆ.
5 / 7
ವಾಟ್ಸ್ಆ್ಯಪ್ನಲ್ಲಿ ಈ ವರ್ಷ 2022 ರಲ್ಲಿ ಸಾಲು ಸಾಲು ಹೊಸ ಅಪ್ಡೇಟ್ಗಳು ಬರಲು ತಯಾರಾಗಿದೆ. ಸಂದೇಶ ಪ್ರತಿಕ್ರಿಯೆಗಳು, ಸಮುದಾಯಗಳು (message reactions, communities) ಆಯ್ಕೆಗಳು, ಲಾಗೌಟ್ ಆಯ್ಕೆ, ಲಾಸ್ಟ್ ಸೀನ್ ಕೆಲವರಿಗೆ ಮಾತ್ರ ಕಾಣುವಂತೆ ಮಾಡುವುದು ಸೇರಿದಂತೆ ಇನ್ನು ಕೆಲವು ಅನುಕೂಲಕರ ಆಯ್ಕೆಗಳನ್ನು ಪರಿಚಯಿಸಲು ವಾಟ್ಸ್ಆ್ಯಪ್ ಸಿದ್ಧತೆ ನಡೆಸುತ್ತಿದೆ.
6 / 7
ಇದರ ಜೊತೆಗೆ ವಾಟ್ಸ್ಆ್ಯಪ್ನಲ್ಲಿ ಚಾಟ್‌ಗಳಲ್ಲಿ ವೈಯಕ್ತಿಕ ವಾಲ್‌ಪೇಪರ್‌ಗಳನ್ನು ಬದಲಾಯಿಸಲು ಅವಕಾಶ ನೀಡಲಿದೆ. ಅಂದರೆ ವಾಟ್ಸ್ಆ್ಯಪ್ ವೈಯುಕ್ತಿಕ ಚಾಟ್ ಬ್ಯಾಕ್‌ಗ್ರೌಂಡ್ ವಾಲ್ ಪೇಪರ್‌ನಲ್ಲಿ ಹೊಸ ಫೀಚರ್ಸ್ ಬರಲಿದೆ. ಈ ಹೊಸ ಫೀಚರ್ ಮೂಲಕ ಪ್ರತಿ ಚಾಟ್ ಮತ್ತು ಗುಂಪಿಗೆ ನಿಮಗಿಷ್ಟವಾದ ಬ್ಯಾಕ್‌ಗ್ರೌಂಡ್ ಸೆಟ್ ಮಾಡಬಹುದು. ಸದ್ಯದಲ್ಲೇ ಈ ಆಯ್ಕೆ ಬಳಕೆದಾರರಿಗೆ ಸಿಗಲಿದೆಯಂತೆ. ಇದಲ್ಲದೆ ವಾಟ್ಸ್ಆ್ಯಪ್ iOS 15 ನಲ್ಲಿ ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಇದು ಫೋಕಸ್ ಮೋಡ್‌ಗೆ ಬೆಂಬಲವನ್ನು ನೀಡಲಿದೆ.
7 / 7
ಅಲ್ಲದೆ ನೊಟಿಫಿಕೇಶನ್ ಜೊತೆಗೆ ಗ್ರೂಪ್ ಮತ್ತು ಪ್ರೊಫೈಲ್ ಚಿತ್ರಗಳನ್ನು ಡಿಸ್‌ಪ್ಲೇ ಮಾಡಲಿದೆ. ವಾಯ್ಸ್ ನೋಟ್‌ಗಳನ್ನು ರೆಕಾರ್ಡ್ ಮಾಡುವಾಗ ಅಪ್ಲಿಕೇಶನ್ ವಿರಾಮ ಮತ್ತು ಪುನರಾರಂಭದ ಬೆಂಬಲವನ್ನು ಸಹ ಸೇರಿಸಿದೆ.