ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್ಆ್ಯಪ್ ತನ್ನ ಪಾವತಿ ಸೇವೆಯನ್ನು (WhatsApp payment) ಎಲ್ಲಾ ಬಳಕೆದಾರರಿಗೂ ಲಭ್ಯಗೊಳಿಸಿದೆ. 2020 ರಲ್ಲಿ ಭಾರತದಲ್ಲಿ ವಾಟ್ಸ್ಆ್ಯಪ್ ಪೇಮೆಂಟ್ ಸೇವೆಯನ್ನು ಆರಂಭಿಸಿದ್ದರೂ, ಎಲ್ಲಾ ಬಳಕೆದಾರರಿಗೆ ಪಾವತಿ ಸೇವೆಯನ್ನಿ ವಿಸ್ತರಿಸಿರಲಿಲ್ಲ. ಇದೀಗ ಪ್ರತಿಯೊಂದು ವಾಟ್ಸ್ಆ್ಯಪ್ ಖಾತೆಯಲ್ಲೂ ಪೇಮೆಂಟ್ ಆಯ್ಕೆ ನೀಡಲಾಗಿದೆ ಎಂದು ವಾಟ್ಸ್ಆ್ಯಪ್ ತಿಳಿಸಿದೆ.
ಇದಕ್ಕಾಗಿ ಬಳಕೆದಾರರು ತಮ್ಮ ವಾಟ್ಸ್ಆ್ಯಪ್ ಖಾತೆಯನ್ನು ಪರಿಶೀಲಿಸಬಹುದು. ವಾಟ್ಸ್ಆ್ಯಪ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿದರೆ ಬಲಭಾಗದಲ್ಲಿ 3 ಡಾಟ್ಗಳು ಕಾಣಸಿಗುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಐದನೇ ಸ್ಥಾನದಲ್ಲಿ payment (ಪೇಮೆಂಟ್) ಆಯ್ಕೆ ಇರುತ್ತದೆ. ಅದನ್ನು ಕ್ಲಿನ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಲು ಆಯ್ಕೆ ನೀಡಲಾಗಿರುತ್ತದೆ.
ಅಲ್ಲಿ ಅ್ಯಡ್ ಪೇಮೆಂಟ್ ಮೆಥಡ್ (Add Payment Method) ಮೇಲೆ ಕ್ಲಿಕ್ ಮಾಡಿದರೆ, ಕಂಟಿನ್ಯೂ ಬಟನ್ ಕಾಣಿಸಲಿದೆ. ಅದನ್ನು ಕ್ಲಿಕ್ ಮಾಡಿದರೆ ಬ್ಯಾಂಕುಗಳ ಆಯ್ಕೆ ಇರಲಿದೆ. ಇಲ್ಲಿ ನೀವು ನಿಮ್ಮ ಖಾತೆ ಹೊಂದಿರುವ ಬ್ಯಾಂಕ್ ಅನ್ನು ಆಯ್ಕೆ ಮಾಡಬೇಕು. ಬಳಿಕ ಎಸ್ಎಂಎಸ್ನ ವೆರಿಫಿಕೇಷನ್ ನೀಡಿದರೆ ನಿಮ್ಮ ಮೊಬೈಲ್ ನಂಬರ್ಗೆ ಒಟಿಪಿ ಸಂಖ್ಯೆ ಬರಲಿದೆ.
ನಿಮ್ಮ ಬ್ಯಾಂಕ್ ಖಾತೆ ನಂಬರ್ ಹಾಗೂ ವಾಟ್ಸ್ಆ್ಯಪ್ ನಂಬರ್ ಒಂದೇ ಆಗಿದ್ದರೆ ಎರಡೂ ಲಿಂಕ್ ಆಗಿ ವಾಟ್ಸ್ಆ್ಯಪ್ ಪೇಮೆಂಟ್ ಆಯ್ಕೆ ಕ್ರಿಯೇಟ್ ಆಗಲಿದೆ. ಅಷ್ಟೇ ಅಲ್ಲದೆ ಮೇಲ್ಭಾಗದಲ್ಲಿ ನಿಮ್ಮ ಯುಪಿಐ ಐಡಿ, ಹೆಸರು ಹಾಗೂ ಬಲಭಾಗದಲ್ಲಿ ಕ್ಯೂರ್ಆರ್ ಕೋಡ್ ಕಾಣಿಸಲಿದೆ. ಇದಾದ ಬಳಿಕ ನೀವು ಕ್ಯೂರ್ ಕೋಡ್ ಸಂದೇಶ ಕಳುಹಿಸಿ ಅಥವಾ ತೋರಿಸಿ ಹಣವನ್ನು ನಿಮ್ಮ ಖಾತೆಗೆ ಹಾಕಿಸಿಕೊಳ್ಳಬಹುದು. ಹಾಗೆಯೇ ನಿಮ್ಮ ಖಾತೆಯಿಂದ ನ್ಯೂ ಪೇಮೆಂಟ್ ಆಯ್ಕೆಯ ಮೂಲಕ ಇತರರ ಕ್ಯೂಆರ್ ಕೋಡ್ಗೆ ಅಥವಾ ಯುಪಿಐ ಐಡಿಗೆ ಹಣ ಪಾವತಿಸಬಹುದು. ಈ ವೇಳೆ ಯುಪಿಐ ಪಿನ್ ನಮೂದಿಸುವುದು ಅನಿವಾರ್ಯ.
ಒಂದು ವೇಳೆ ನಿಮಗೆ ನಿಮ್ಮ ಖಾತೆಯ ಯುಪಿಐ ಪಿನ್ ಗೊತ್ತಿಲ್ಲದಿದ್ದರೆ, ಅಲ್ಲಿ ಯುಪಿಐ ಪಿನ್ ಕ್ರಿಯೇಟ್ ಮಾಡಲು ಆಯ್ಕೆ ನೀಡಲಾಗಿರುತ್ತದೆ. ಅದನ್ನು ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಯ ಡೆಬಿಟ್ ಕಾರ್ಡ್ನ ಕೊನೆಯ ನಂಬರ್ಗಳ ಮಾಹಿತಿ ನೀಡಬೇಕಾಗುತ್ತದೆ. ಅದರಂತೆ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ ನಿಮ್ಮ ಡೆಬಿಟ್ ಕಾರ್ಡ್ (ಎಟಿಎಂ ಕಾರ್ಡ್)ನ ಕೊನೆಯ 6 ನಂಬರ್ಗಳನ್ನು ಹಾಗೂ ಕಾರ್ಡ್ನ ವಾಲಿಡಿಟಿ ವರ್ಷವನ್ನು ನಮೂದಿಸಬೇಕು. ಆ ಬಳಿಕ ನಿಮ್ಮ ಮೊಬೈಲ್ ನಂಬರ್ಗೆ ಒಟಿಪಿ ನಂಬರ್ ಬರಲಿದೆ. ಆ ನಂಬರ್ ಅನ್ನು ಹಾಗೂ ಎಟಿಎಂ ಕಾರ್ಡ್ ಪಿನ್ ನಂಬರ್ನ್ನು ನಮೂದಿಸಿದರೆ ಯುಪಿಐ ಪಿನ್ ಕ್ರಿಯೇಟ್ ಮಾಡುವ ಆಯ್ಕೆ ದೊರೆಯಲಿದೆ. ಅದರಂತೆ ನಿಮಗೆ ನೆನಪಿಡಲು ಸುಲಭವಾಗುವಂತ ನಾಲ್ಕು ನಂಬರ್ಗಳ ಪಿನ್ ಕ್ರಿಯೇಟ್ ಮಾಡಬೇಕು. ಆ ಬಳಿಕ ವಾಟ್ಸ್ಆ್ಯಪ್ ಪೇಮೆಂಟ್ ವೇಳೆ ಅದೇ ಯುಪಿಐ ಪಿನ್ ನಮೂದಿಸಿ ಹಣ ಪಾವತಿಸಬಹುದು.