- Kannada News Photo gallery When buying a new smartphone, they say 'charge it fully and use it': Do you know why?
Tech Tips: ಹೊಸ ಸ್ಮಾರ್ಟ್ಫೋನ್ ಖರೀದಿಸಿದಾಗ ‘ಚಾರ್ಜ್ ಫುಲ್ ಮಾಡಿ ಉಪಯೋಗಿಸಿ’ ಎಂದು ಹೇಳುತ್ತಾರೆ: ಯಾಕೆ ಗೊತ್ತೇ?
ಮೊಬೈಲ್‌ಗಳು ತಯಾರಾಗಿ ಓರ್ವ ಗ್ರಾಹಕನ ಕೈ ತಲುಪಲು ಕನಿಷ್ಟ ಎಂದರೂ 3 ರಿಂದ 6 ತಿಂಗಳ ಸಮಯ ಹಿಡಿಯುತ್ತದೆ. ಈ ಸಮಯದಲ್ಲಿ ಬ್ಯಾಟರಿ ಸೆಲ್‌ಗಳು ಸಂಕುಚಿತಗೊಂಡಿರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಒಮ್ಮೆ ಬ್ಯಾಟರಿ ಪೂರ್ಣ ಡೆಡ್ ಆದರೆ ಅದರ ಕಾರ್ಯನಿರ್ವಹಣಾ ಶಕ್ತಿ ಕುಂದುತ್ತದೆ.
Updated on: Aug 03, 2023 | 1:43 PM

ನೀವು ಯಾವುದೇ ಹೊಸ ಮೊಬೈಲ್ ಅನ್ನು ಖರೀದಿಸಿದಾಗ ಚಾರ್ಜ್ ಫುಲ್ ಮಾಡಿದ ನಂತರವೇ ಉಪಯೋಗಿಸಿ, ಯಾವುದೇ ಕಾರಣಕ್ಕೂ ಚಾರ್ಜ್ ಮಾಡದೆ ಈ ಹೊಸ ಮೊಬೈಲ್ ಅನ್ನು ಬಳಕೆ ಮಾಡಬೇಡಿ ಎಂದು ಹೇಳುತ್ತಾರೆ.

ಅಷ್ಟಕ್ಕು ಹೊಸ ಮೊಬೈಲ್ ಖರೀಸದಿಸಿದ ನಂತರ ಮೊಬೈಲ್ ಅನ್ನು ಪೂರ್ತಿ ಚಾರ್ಜ್ ಮಾಡಲು ಹೇಳುವುದು ಏಕೆ? ಚಾರ್ಜ್ ಮಾಡದೆ ಏಕೆ ಬಳಸಬಾರದು? ಒಂದು ವೇಳೆ ಹಾಗೆಯೇ ಬಳಸಿದರೆ ಏನಾಗುತ್ತದೆ? ಇದರ ಹಿಂದಿರುವ ಸಾಮಾನ್ಯ ಜ್ಞಾನ ಏನು ಎಂಬುದನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ.

ಇದಕ್ಕೆ ಲೀ-ಐಯಾನ್ ಬ್ಯಾಟರಿ ಕಾರಣ: ಪ್ರಸ್ತುತ ಹೆಚ್ಚು ಮೊಬೈಲ್‌ಗಳಲ್ಲಿ ಬಳಕೆಯಲ್ಲಿರುವ ಲಿ-ಐಯಾನ್ ಬ್ಯಾಟರಿ ಖರೀದಿಸಿದ ಹೊಸ ಮೊಬೈಲ್ ಅನ್ನು ಪೂರ್ತಿ ಚಾರ್ಜ್ ಮಾಡಿ ಬಳಸಲು ಮುಖ್ಯ ಕಾರಣ.

ಲಿ- ಐಯಾನ್ ಬ್ಯಾಟರಿಯಲ್ಲಿನ ಪ್ರತಿ ಕೋಶದ DOD (ಡೆಪ್ತ್ ಆಫ್ ಡಿಸ್ಟಾರ್ಜ್) ಅನ್ನು ಪೂರ್ತಿ ತಗ್ಗಿಸಲು ಮೊಬೈಲ್ ಕಂಪನಿಗಳು ಸೂಚಿಸುತ್ತವೆ. ಬ್ಯಾಟರಿಯು ಶೇ. 100 ರಷ್ಟು ಸಂಪೂರ್ಣ ಚಾರ್ಜ್ ಆಗಿದ್ದರೆ ಬ್ಯಾಟರಿಯ ಡಿಒಡಿ 0% ಆಗಿದೆ ಎಂದರ್ಥ. ಆಗ ನಿಮ್ಮ ಮೊಬೈಲ್ಗೆ ಯಾವುದೆ ತೊಂದರೆ ಆಗುವುದಿಲ್ಲ.

20% ಗಿಂತ ಕಡಿಮೆ ಇರಬೇಕು: ಮೇಲೆ ತಿಳಿಸಿದಂತೆ ಲಿ-ಐಯಾನ್ ಬ್ಯಾಟರಿಯ DOD (ಡೆಪ್ತ್ ಆಫ್ ಡಿಸ್ಟಾರ್ಜ್) ಪೂರ್ತಿ ಕಡಿಮೆ ಇದ್ದರೆ ಒಳ್ಳೆಯದು. ಅಂದರೆ, ಸಂಪೂರ್ಣ ಚಾರ್ಜ್ ಆದ ಬ್ಯಾಟರಿ ಫೋನ್ ಶುರು ಮಾಡಲು ಇರಬೇಕು. ಹಾಗಾಗಿ, ಬ್ಯಾಟರಿಯಲ್ಲಿ ಕನಿಷ್ಟಪಕ್ಷ ಎಂದರೂ 20% ಗಿಂತ ಕಡಿಮೆ ಡಿಒಡಿ ಇರಬೇಕು. ಅಂದರೆ 80% ಹೆಚ್ಚು ಬ್ಯಾಟರಿ ಶಕ್ತಿ ತುಂಬಿರಬೇಕು.

ಹಾರ್ಡ್‌ವೇರ್ ರಕ್ಷಣೆಗಾಗಿ: ತುಂಬಾ ದಿನಗಳಿಂದ ಬಳಕೆಯಲ್ಲಿರದ ಮೊಬೈಲ್ ಬ್ಯಾಟರಿ, ಒಮ್ಮೆಲೇ ಮೊಬೈಲ್‌ನ ಎಲ್ಲಾ ಬಿಡಿಭಾಗಗಳಿಗೂ ವಿಧ್ಯುತ್ ಶಕ್ತಿಯನ್ನು ಪೂರೈಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಮೊಬೈಲ್‌ನ ಹಾರ್ಡ್‌ವೇರ್ ಭಾಗಗಳು ಹೆಚ್ಚು ವಿಧ್ಯುತ್ ಶಕ್ತಿಯನ್ನು ಬೇಡುವುದರಿಂದ ಮೊಬೈಲ್ ಬ್ಯಾಟರಿ ಪೂರ್ತಿ ತುಂಬಿರಬೇಕಾಗುತ್ತದೆ.

ಚಾರ್ಜ್ ಮಾಡದಿದ್ದರೆ ಏನಾಗುತ್ತದೆ?: ಮೊಬೈಲ್‌ಗಳು ತಯಾರಾಗಿ ಓರ್ವ ಗ್ರಾಹಕನ ಕೈ ತಲುಪಲು ಕನಿಷ್ಟ ಎಂದರೂ 3 ರಿಂದ 6 ತಿಂಗಳ ಸಮಯ ಹಿಡಿಯುತ್ತದೆ. ಈ ಸಮಯದಲ್ಲಿ ಬ್ಯಾಟರಿ ಸೆಲ್‌ಗಳು ಸಂಕುಚಿತಗೊಂಡಿರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಒಮ್ಮೆ ಬ್ಯಾಟರಿ ಪೂರ್ಣ ಡೆಡ್ ಆದರೆ ಅದರ ಕಾರ್ಯನಿರ್ವಹಣಾ ಶಕ್ತಿ ಕುಂದುತ್ತದೆ.

ಬೇರೆ ಏನು ಕಾರಣ?: ಹೊಸ ಮೊಬೈಲ್ ಖರೀಸದಿಸಿದ ನಂತರ ಮೊಬೈಲ್ ಅನ್ನು ಪೂರ್ತಿ ಚಾರ್ಜ್ ಮಾಡಲು ಹೇಳಲು ಇವಿಷ್ಟೆ ಕಾರಣಗಳಲ್ಲದೇ ಮತ್ತೊಂದು ಕಾರಣವಿದೆ. ಗ್ರಾಹಕರು ಹೊಸ ಮೊಬೈಲ್ ಖರೀದಿಸಿದ ನಂತರ ಮೊಬೈಲ್ ಬಳಕೆಯ ಪೂರ್ತಿ ಅನುಭವ ಪಡೆಯಬೇಕು. ಬ್ಯಾಟರಿ ಬೇಗ ಖಾಲಿಯಾಗುವ ಕಿರಿಕಿರಿ ಅವರಿಂದ ದೂರವಿರಬೇಕು ಎಂದು ಮೊಬೈಲ್ ಕಂಪನಿಗಳು ಹೇಳುತ್ತವೆ.









