Kannada News Photo gallery Wife divorced her husband and married another young woman unbder Lesbian Marriage in West Bengal Supreme Court
ಇಬ್ಬರು ಮಕ್ಕಳಾದ ಮೇಲೆ ಗಂಡನಿಗೆ ಸೋಡಾ ಚೀಟಿ ಕೊಟ್ಟು, ಪ್ರೇಮಿಸಿದ ಯುವತಿಯ ಜೊತೆ ದೇವಸ್ಥಾನದಲ್ಲಿ ಮದುವೆಯಾದ ಹೆಂಡತಿ!
ಮಹಿಳೆಯೊಬ್ಬರು ತನ್ನ ಪತಿಗೆ (Husband) ವಿಚ್ಛೇದನ ನೀಡಿ (Divorce), ತಾನು ಪ್ರೇಮಿಸಿದ ಸ್ನೇಹಿತೆಯನ್ನೇ ವರಿಸಿದ್ದಾಳೆ. ಇಬ್ಬರು ಮಹಿಳೆಯರೂ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗುವ ಮೂಲಕ ಸತಿ ದಂಪತಿಗಳಾಗಿದ್ದಾರೆ.
1 / 8
ಮಹಿಳೆಯೊಬ್ಬರು ತನ್ನ ಪತಿಗೆ (Husband) ವಿಚ್ಛೇದನ ನೀಡಿ (Divorce), ತಾನು ಪ್ರೇಮಿಸಿದ ಸ್ನೇಹಿತೆಯನ್ನೇ ವರಿಸಿದ್ದಾಳೆ. ಇಬ್ಬರು ಮಹಿಳೆಯರೂ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗುವ ಮೂಲಕ ಸತಿ ದಂಪತಿಗಳಾಗಿದ್ದಾರೆ.
2 / 8
ಇಬ್ಬರು ಮಕ್ಕಳಾದ ಮೇಲೆ ಗಂಡನಿಗೆ ಸೋಡಾ ಚೀಟಿ ಕೊಟ್ಟು, ಪ್ರೇಮಿಸಿದ ಯುವತಿಯ ಜೊತೆ ದೇವಸ್ಥಾನದಲ್ಲಿ ಮದುವೆಯಾದ ಹೆಂಡತಿ!
3 / 8
ಮಹಿಳೆಯೊಬ್ಬರು ತನ್ನ ಪತಿಗೆ (Husband) ವಿಚ್ಛೇದನ ನೀಡಿ (Divorce), ತಾನು ಪ್ರೇಮಿಸಿದ ಸ್ನೇಹಿತೆಯನ್ನೇ ವರಿಸಿದ್ದಾಳೆ. ಇಬ್ಬರು ಮಹಿಳೆಯರೂ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗುವ ಮೂಲಕ ಸತಿ ದಂಪತಿಗಳಾಗಿದ್ದಾರೆ. ಇದರೊಂದಿಗೆ ಸಲಿಂಗ ವಿವಾಹವನ್ನು (Lesbian Marriage) ಕಾನೂನುಬದ್ಧಗೊಳಿಸುವ ಕುರಿತು ಸುಪ್ರೀಂ ಕೋರ್ಟ್ (Supreme Court) ತೀರ್ಪು ಬರುವ ಮುನ್ನವೇ ಪಶ್ಚಿಮ ಬಂಗಾಳದಲ್ಲಿ ಇಬ್ಬರು ಮಹಿಳೆಯರ ವಿವಾಹವು ಬಿಸಿ ಚರ್ಚೆಗೆ ಆಸ್ಪದವಾಗಿದೆ.
4 / 8
ವಿವರ ಇಲ್ಲಿದೆ... ಪಶ್ಚಿಮ ಬಂಗಾಳದ (West Bengal) ಮೌಸುಮಿ ದತ್ತಾ ಮತ್ತು ಮೌಮಿತಾ ಎಂಬ ಇಬ್ಬರು ಮಹಿಳೆಯರು ಕೆಲ ಸಮಯದಿಂದ ಡೇಟಿಂಗ್ ಮಾಡುತ್ತಿದ್ದರಂತೆ. ಇಬ್ಬರೂ ಈಗ ಮದುವೆಯಾಗಲು ನಿರ್ಧರಿಸಿದರು. ಆದರೆ ಮೌಸುಮಿ ದತ್ತಾ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ! ಇದರೊಂದಿಗೆ ಮೌಮಿತಾ ಮೌಸುಮಿಯ ಮಕ್ಕಳನ್ನು ತನ್ನ ಮಕ್ಕಳನ್ನಾಗಿ ಸ್ವೀಕರಿಸಲು ಒಪ್ಪಿದ್ದಾಳೆ.
5 / 8
ಇದರೊಂದಿಗೆ ಮೌಸುಮಿ ತನ್ನ ಪತಿಗೆ ವಿಚ್ಛೇದನ ನೀಡಿ ಭಾನುವಾರ (ಮೇ 28) ಚಿಂಘಿಘಾಟ್‌ನ ಬಗ್ಗರ್‌ನಲ್ಲಿರುವ ಭೂತನಾಥ ದೇವಸ್ಥಾನದಲ್ಲಿ ಮೌಮಿತಾ ಅವರನ್ನು ವಿವಾಹವಾದರು.
6 / 8
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮೌಸುಮಿ, ಪತಿ ತನಗೆ ದಿನನಿತ್ಯ ಚಿತ್ರಹಿಂಸೆ ನೀಡುತ್ತಿದ್ದು, ಅದಕ್ಕಾಗಿಯೇ ಪತಿಯಿಂದ ಬೇರ್ಪಟ್ಟಿದ್ದೇನೆ ಎಂದಿದ್ದಾಳೆ.
7 / 8
ಮತ್ತೊಂದೆಡೆ ಮೌಮಿತಾ ಹೇಳಿದ್ದು.. 'ಪ್ರೀತಿ ಇರುವುದು ಗಂಡು ಹೆಣ್ಣಿನ ನಡುವೆ ಮಾತ್ರವೇ? ಇಬ್ಬರು ಮಹಿಳೆಯರು ಅಥವಾ ಇಬ್ಬರು ಪುರುಷರ ನಡುವೆ ಪ್ರೀತಿ ಅರಳಬಹುದು ಮತ್ತು ಅವರು ಒಟ್ಟಿಗೆ ಇರಬಹುದು. ತಾನು ಮೌಸುಮಿಯನ್ನು ಮದುವೆಯಾಗುವುದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ, ಆದ್ದರಿಂದ ಅವರು ನಮ್ಮನ್ನು ಮನೆಯೊಳಗೆ ಬಿಡಲಿಲ್ಲ. ನನ್ನ ಜೀವನದುದ್ದಕ್ಕೂ ಅವಳೊಂದಿಗೇ ಇರುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದೆ. ನಾನು ಯಾವುದೇ ಸಂದರ್ಭದಲ್ಲೂ ಮೌಸುಮಿಯನ್ನು ಬಿಟ್ಟು ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದೆ.
8 / 8
ಅದಕ್ಕಾಗಿಯೇ ನಾನು ನನ್ನ ಗೆಳತಿಯೊಂದಿಗೆ ಬಾಡಿಗೆ ಮನೆಯಲ್ಲಿ ಸಂಸಾರ ಹೂಡಿದ್ದೇನೆ' ಎಂದು ಮೌಮಿತಾ ಹೇಳಿದರು. ಸಂಪ್ರದಾಯವನ್ನು ಮುರಿದು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ಈ ಇಬ್ಬರು ಮಹಿಳೆಯರ ವಿಚಿತ್ರ ಕಥೆ ವೈರಲ್ ಆಗುತ್ತಿದೆ.