ನಾರ್ಮಲ್ ಡೆಲಿವರಿ ಆಗಲು ಗರ್ಭಿಣಿಯರು ರೂಢಿಸಿಕೊಳ್ಳಬೇಕಾದ 8 ಅಭ್ಯಾಸಗಳಿವು
ನಾರ್ಮಲ್ ಹೆರಿಗೆಯ ಬಗ್ಗೆ ನಿಮಗೆ ಹೆಚ್ಚು ಆಸಕ್ತಿ ಇದ್ದರೆ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಮತ್ತು ದೈಹಿಕ ವಿಶ್ರಾಂತಿಗೆ ಆದ್ಯತೆ ನೀಡುವುದು ಬಹಳ ಮುಖ್ಯ. ನಾರ್ಮಲ್ ಡೆಲಿವರಿ ಆಗಲು ಮಹಿಳೆಯರು ಅನುಸರಿಸಬೇಕಾದ ಅಭ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ.
1 / 8
ಗರ್ಭಿಣಿಯರಲ್ಲಿ ಇತ್ತೀಚೆಗೆ ಸಿಸೇರಿಯನ್ ಡೆಲಿವರಿ ಪ್ರಮಾಣ ಹೆಚ್ಚಾಗುತ್ತಿದೆ. ಇದಕ್ಕೆ ವೈದ್ಯರ ನಿರ್ಧಾರ ಒಂದು ಕಾರಣವಾದರೆ ನಾರ್ಮಲ್ ಡೆಲಿವರಿಗೆ ಹೆದರುವ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತೊಂದು ಕಾರಣ. ನಾರ್ಮಲ್ ಡೆಲಿವರಿ ಆಗಲು ಮಹಿಳೆಯರು ಅನುಸರಿಸಬೇಕಾದ ಅಭ್ಯಾಸಗಳ ಬಗ್ಗೆ ಮಾಹಿತಿ ಇಲ್ಲಿದೆ.
2 / 8
ನಾರ್ಮಲ್ ಡೆಲಿವರಿ ಆಗಲು ನಾವು ಹೆರಿಗೆ ಮಾಡಿಸಲು ಆಯ್ಕೆ ಮಾಡಿಕೊಳ್ಳುವ ವೈದ್ಯರು ಕೂಡ ಕಾರಣರಾಗುತ್ತಾರೆ. ನೀವು ಸುಲಭವಾಗಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವಂತಹ ಮತ್ತು ನಿಮಗೆ ಕಂಫರ್ಟಬಲ್ ಎನಿಸುವ ವೈದ್ಯರನ್ನು ಆಯ್ಕೆ ಮಾಡಿಕೊಳ್ಳಿ.
3 / 8
ನಿಯಮಿತ ವ್ಯಾಯಾಮ, ಯೋಗ, ವಾಕಿಂಗ್ ಮಾಡುವುದರಿಂದ ನಾರ್ಮಲ್ ಡೆಲಿವರಿಯ ಸಾಧ್ಯತೆ ಹೆಚ್ಚುತ್ತದೆ. ಡೆಲಿವರಿಗೆ 1 ತಿಂಗಳು ಇದೆ ಎನ್ನುವಾಗ ಮೆಟ್ಟಿಲನ್ನು ಹತ್ತಿ ಇಳಿಯುವುದು, ಸಣ್ಣಪುಟ್ಟ ವ್ಯಾಯಾಮಗಳನ್ನು ಮಾಡಿ.
4 / 8
ಆದಷ್ಟೂ ಶಾಂತವಾಗಿ, ನೆಮ್ಮದಿಯಾಗಿರಿ. ಯಾರೋ ಹೇಳಿದ್ದನ್ನು ಕೇಳಿ ಟೆನ್ಷನ್ ಮಾಡಿಕೊಳ್ಳಬೇಡಿ. ನಿಮ್ಮ ಮಾನಸಿಕ ಆರೋಗ್ಯ ಮಗುವಿನ ಮೇಲೂ ಪರಿಣಾಮ ಬೀರುತ್ತದೆ.
5 / 8
ಡಾಕ್ಟರ್ ಹೇಳಿದ್ದನ್ನು ಕೇಳುವ ಮೊದಲು ನಿಮ್ಮ ಡೆಲಿವರಿ ಬಗ್ಗೆ ನೀವೂ ಸ್ವಲ್ಪ ಪ್ಲಾನ್ ಮಾಡಿಕೊಳ್ಳಿ. ಆಗ ನಿಮ್ಮ ವೈದ್ಯರೊಂದಿಗೆ ಚರ್ಚಿಸಿ, ನಾರ್ಮಲ್ ಡೆಲಿವರಿಯ ಬಗ್ಗೆ ಮಾಹಿತಿ ಪಡೆಯಬಹುದು.
6 / 8
ನಾರ್ಮಲ್ ಡೆಲಿವರಿ ಮೂಲಕ ಮಗುವಿಗೆ ಜನ್ಮ ನೀಡಲು ಬಯಸುವವರಿಗೆ ತಾಳ್ಮೆ ಮುಖ್ಯವಾಗಿದೆ. ಪ್ರಸವದ ಆರಂಭಿಕ ಹಂತಗಳನ್ನು ಮನೆಯಲ್ಲಿ ಕಳೆಯುವುದು, ವಿಶ್ರಾಂತಿ, ಹೈಡ್ರೀಕರಿಸಿದ ಮತ್ತು ಉತ್ತಮ ಪೋಷಣೆ ಮಾಡಿಕೊಳ್ಳುವುದು ಅಗತ್ಯ.
7 / 8
ನಾರ್ಮಲ್ ಹೆರಿಗೆಯ ಬಗ್ಗೆ ನಿಮಗೆ ಹೆಚ್ಚು ಆಸಕ್ತಿ ಇದ್ದರೆ ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಮತ್ತು ದೈಹಿಕ ವಿಶ್ರಾಂತಿಗೆ ಆದ್ಯತೆ ನೀಡುವುದು ಬಹಳ ಮುಖ್ಯ.
8 / 8
ಕೆಲವೊಮ್ಮೆ ಅನಿವಾರ್ಯವಾಗಿ ಕೊನೆಯ ಹಂತದಲ್ಲಿ ಆರೋಗ್ಯದಲ್ಲಿ ಏರುಪೇರಾದಾಗ ಸಿ ಸೆಕ್ಷನ್ ಮಾಡಿಸಲಾಗುತ್ತದೆ. ಆದರೆ, ನೀವೇ ಸಿ ಸೆಕ್ಷನ್ ಪ್ಲಾನ್ ಮಾಡದಿರುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಉತ್ತಮ.