- Kannada News Photo gallery PM Narendra Modi offers prayers at Shree Kalaram Temple in Nashik Maharashtra
ನಾಸಿಕ್‌ನಲ್ಲಿರುವ ಶ್ರೀ ಕಾಲಾರಾಮ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಶ್ರೀ ಕಾಲಾರಾಮ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ದೈವಿಕ ವಾತಾವರಣದಿಂದ ಆಧ್ಯಾತ್ಮಿಕ ಅನುಭವವಾಗಿದೆ. ನನ್ನ ಸಹ ಭಾರತೀಯರ ಶಾಂತಿ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Updated on: Jan 12, 2024 | 5:58 PM

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಶ್ರೀ ಕಾಲಾರಾಮ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನರೇಂದ್ರ ಮೋದಿ

ಗೋದಾವರಿ ದಡದಲ್ಲಿರುವ ನಾಸಿಕ್‌ನ ಪಂಚವಟಿ ಪ್ರದೇಶದಲ್ಲಿ ನೆಲೆಗೊಂಡಿದೆ ಈ ಪುರಾತನ ಕಾಲಾರಾಮ್ ದೇವಾಲಯ

ನಾಸಿಕ್‌ನ ರಾಮಕುಂಡ್‌ನಲ್ಲಿ ನಡೆದ ಪೂಜೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದಾರೆ

ಶ್ರೀ ಕಾಲಾರಾಮ್ ದೇವಾಲಯವನ್ನು 1782 ರಲ್ಲಿ ನಿರ್ಮಿಸಲಾಯಿತು. ಹಳೇ ಗುಡಿಸಲು ಇದ್ದ ಸ್ಥಳದಲ್ಲಿ ಭಗವಾನ್ ರಾಮನು ವನವಾಸದ ಸಮಯದಲ್ಲಿ ವಾಸಿಸುತ್ತಿದ್ದನೆಂದು ನಂಬಲಾಗಿದೆ.

1930 ರ ಮಾರ್ಚ್‌ನಲ್ಲಿ ದಲಿತರಿಗೆ ದೇಗುಲಕ್ಕೆ ಪ್ರವೇಶ ಕೋರಿ ಬಿಆರ್ ಅಂಬೇಡ್ಕರ್ ಅವರು ಇಲ್ಲಿ ಪ್ರತಿಭಟನೆ ನಡೆಸಿದ್ದರು

ಶ್ರೀ ಕಾಲಾರಾಮ್ ದೇವಸ್ಥಾನಕ್ಕೆ ಆಗಮಿಸುವ ಮೊದಲು ಗೋದಾವರಿ ನದಿಯಲ್ಲಿ ಜಲಪೂಜೆ ನಡೆಸಿದ ಮೋದಿ ಆರತಿಯಲ್ಲಿ ಭಾಗವಹಿಸಿದ್ದಾರೆ.

ಧಾರ್ಮಿಕ ಸ್ಥಳಗಳನ್ನು ಶುಚಿಯಾಗಿಡಲು ನೀಡಿದ ಕರೆಯ ಭಾಗವಾಗಿ ಮೋದಿ ಅವರು ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದರು

ದೇವಸ್ಥಾನಗಳು ಮತ್ತು ಇತರ ಧಾರ್ಮಿಕ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲು ನಾನು ಕರೆ ನೀಡಿದ್ದೇನೆ. ಇಂದು ನನಗೆ ಪ್ರಾರ್ಥನೆ ಸಲ್ಲಿಸಲು ಮತ್ತು ಶ್ರೀ ಕಾಲಾರಾಮ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಲು ಅವಕಾಶ ಸಿಕ್ಕಿತು ಎಂದಿದ್ದಾರೆ ಮೋದಿ



