AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AFG: ಟಿ20ಯಲ್ಲಿ ಬೇಡದ ದಾಖಲೆಗೆ ಕೊರಳೊಡ್ಡಿದ ಭಾರತ ಮೊದಲ ನಾಯಕ ರೋಹಿತ್..!

IND vs AFG: ಈ ಪಂದ್ಯದಲ್ಲಿ ಯಾವುದೇ ರನ್ ಗಳಿಸದೇ ರನೌಟ್ ಆಗಿ ಪೆವಿಲಿಯನ್‌ಗೆ ಮರಳಿದ ರೋಹಿತ್, ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಟೀಂ ಇಂಡಿಯಾದ ಮೊದಲ ನಾಯಕ ಎಂಬ ಬೇಡದ ದಾಖಲೆಗೆ ಕೊರಳೊಡ್ಡಿದರು.

ಪೃಥ್ವಿಶಂಕರ
|

Updated on: Jan 12, 2024 | 4:46 PM

Share
ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಭಾರತ ತಂಡ 6 ವಿಕೆಟ್‌ಗಳಿಂದ ಸುಲಭವಾಗಿ ಗೆದ್ದುಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ 158 ರನ್ ಕಲೆಹಾಕಿದರೆ, ಗುರಿ ಬೆನ್ನಟ್ಟಿದ ಭಾರತ 6 ವಿಕೆಟ್​ಗಳಿಂದ ಜಯದ ನಗೆ ಬೀರಿತು.

1 / 6
ಇನ್ನು ಈ ಪಂದ್ಯದಲ್ಲಿ 14 ತಿಂಗಳ ನಂತರ ಟಿ20 ಮಾದರಿಯಲ್ಲಿ ಕಣಕ್ಕಿಳಿದಿದ್ದ ನಾಯಕ ರೋಹಿತ್ ಶರ್ಮಾಗೆ ವಿಶೇಷವಾದ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಮೊದಲ ಓವರ್​ನಲ್ಲೇ ರೋಹಿತ್ ಶೂನ್ಯಕ್ಕೆ ರನೌಟ್​ಗೆ ಬಲಿಯಾಗಬೇಕಾಯಿತು. ಇದರೊಂದಿಗೆ ನಾಯಕ ರೋಹಿತ್ ಶರ್ಮಾ ಹೆಸರಿಗೆ ಅನಗತ್ಯ ದಾಖಲೆಯೊಂದು ಸೇರ್ಪಡೆಯಾಯಿತು.

2 / 6
ಈ ಪಂದ್ಯದಲ್ಲಿ ಯಾವುದೇ ರನ್ ಗಳಿಸದೇ ರನೌಟ್ ಆಗಿ ಪೆವಿಲಿಯನ್‌ಗೆ ಮರಳಿದ ರೋಹಿತ್, ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಟೀಂ ಇಂಡಿಯಾದ ಮೊದಲ ನಾಯಕ ಎಂಬ ಬೇಡದ ದಾಖಲೆಗೆ ರೋಹಿತ್ ಕೊರಳೊಡ್ಡಿದರು.

3 / 6
ಹಾಗೆಯೇ ಅಂತಾರಾಷ್ಟ್ರೀಯ ಟಿ20ಯಲ್ಲಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ ವಿಶ್ವ ಕ್ರಿಕೆಟ್​ನ 9ನೇ ನಾಯಕ ಎಂಬ ಕುಖ್ಯಾತಿಗೂ ರೋಹಿತ್ ಭಾಜನರಾದರು. ಅಂತಾರಾಷ್ಟ್ರೀಯ ಟಿ20ಯಲ್ಲಿ ರೋಹಿತ್ ಶರ್ಮಾ 11ನೇ ಬಾರಿಗೆ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು.

4 / 6
ಇದು ಬೇಡದ ದಾಖಲೆಗಳ ವಿಚಾರದವಾದರೆ, ಈ ಪಂದ್ಯದಲ್ಲಿ ಶೂನ್ಯ ಸುತ್ತಿದರೂ ರೋಹಿತ್, ಆಟಗಾರನಾಗಿ 100 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

5 / 6
ಇದರೊಂದಿಗೆ 14 ತಿಂಗಳ ಬಳಿಕ ಟಿ20ಯಲ್ಲಿ ಭಾರತದ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಇದೀಗ ಟಿ20ಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅತ್ಯಂತ ಹಿರಿಯ ನಾಯಕ ಎನಿಸಿಕೊಂಡಿದ್ದಾರೆ. ರೋಹಿತ್ 36 ವರ್ಷ 256 ದಿನಗಳಲ್ಲಿ ಭಾರತ ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

6 / 6