Best Credit Cards for Women: ಮಹಿಳೆಯರಿಗೆ ಸೂಕ್ತವಾದ ಕ್ರೆಡಿಟ್ ಕಾರ್ಡ್​ಗಳಿವು

|

Updated on: Mar 03, 2023 | 6:38 PM

Women's Day 2023: ಅನೇಕ ವಿಚಾರಗಳಲ್ಲಿ ಮಹಿಳೆಯರು ಪುರುಷರಿಗಿಂತ ತುಸು ವಿಭಿನ್ನ. ವೆಚ್ಚದಿಂದ ಹಿಡಿದು ಉಳಿತಾಯದವರೆಗೆ ಮಹಿಳೆಯರ ದೃಷ್ಟಿಕೋನವೇ ಬೇರೆ ತೆರನಾದುದು. ಮಾರ್ಚ್ 8, ಅಂತರರಾಷ್ಟ್ರೀಯ ಮಹಿಳಾ ದಿನ ಇರುವ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಸೂಕ್ತವೆನಿಸುವ ಕ್ರೆಡಿಟ್ ಕಾರ್ಡ್​ಗಳ ಬಗ್ಗೆ ಮಾಹಿತಿ ಇಲ್ಲಿದೆ.

1 / 8
ಕ್ರೆಡಿಟ್ ಕಾರ್ಡ್ ಇಂದಿನ ದಿನಮಾನದಲ್ಲಿ ಬಹಳ ಅಗತ್ಯ ಇರುವ ಹಣಕಾಸು ಸಾಧನ. ಹಣದ ಕೊರತೆ ಬಿದ್ದಾಗ ಶಾಪಿಂಗ್ ಮಾಡಲು ಇದರ ಬಳಕೆ ಇದೆಯಾದರೂ, ವಿವಿಧ ಡಿಸ್ಕೌಂಟ್, ಆಫರ್​ಗಳನ್ನು ಪಡೆಯಲೂ ಹಲವರು ಕ್ರೆಡಿಟ್ ಕಾರ್ಡ್ ಬಳಸುವುದುಂಟು. ಪೈಸಾ ಬಜಾರ್ ಕಂಪನಿ (Paisabazaar) ಮಹಿಳೆಯರ ಮನಃಸ್ಥಿತಿಗೆ ತಕ್ಕಂತಿರುವ ಇಂಥ ಕ್ರೆಡಿಟ್ ಕಾರ್ಡ್​ಗಳ ಪಟ್ಟಿ ಮಾಡಿದೆ. ಭಾರತೀಯ ನಾರೀಮಣಿಯರಿಗೆ ಇದು ಉಪಯೋಗಕ್ಕೆ ಬರಬಹುದು.

2 / 8
Axis Bank MyZone ಕ್ರೆಡಿಟ್ ಕಾರ್ಡ್: ವಾರ್ಷಿಕ 500 ರೂ ಶುಲ್ಕ ಇರುವ ಈ ಕ್ರೆಡಿಟ್ ಕಾರ್ಡ್ ಕೂಡ ಮಹಿಳೆಯರ ಪಾಲಿಗೆ ಪೈಸಾ ವಸೂಲ್ ಆಗಬಹುದು. ಪೇಟಿಎಂ ಮೂವೀಸ್​ನಲ್ಲಿ ನೀವು ಎರಡನೇ ಬಾರಿ ಮೂವಿ ಟಿಕೆಟ್ ಬುಕ್ ಮಾಡಿದರೆ ಶೇ. 100 ಡಿಸ್ಕೌಂಟ್. ಅಂದರೆ ಉಚಿತವಾಗಿ ಟಿಕೆಟ್ ಸಿಗುತ್ತದೆ. ಕನಿಷ್ಠ 2,000 ರೂನಷ್ಟು ಶಾಪಿಂಗ್ ಮಾಡಿದರೆ ಸೋನಿಲೈವ್ ಪ್ರೀಮಿಯಮ್​ನ ವಾರ್ಷಿಕ ಸಬ್​ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ. ಆಜಿಯೋದಲ್ಲಿ 600 ರೂ ಡಿಸ್ಕೌಂಟ್ ಸಿಗುತ್ತದೆ. ಪ್ರತೀ 200 ರೂ ವೆಚ್ಚಕ್ಕೆ 4 ಎಡ್ಜ್ ರಿವಾರ್ಡ್ ಅಂಕಗಳು ಪ್ರಾಪ್ತವಾಗುತ್ತವೆ. ಯಾವುದಾದರೊಂದು ಏರ್​ಪೋರ್ಟ್ ಲೌಂಜ್​ನ ಸೌಲಭ್ಯ ಸಿಗುತ್ತದೆ. ಇದರ ವಾರ್ಷಿಕ ಶುಲ್ಕ 500 ರೂ.

3 / 8
ಎಸ್​ಬಿಐ ಕಾರ್ಡ್: ಆನ್​ಲೈನ್ ಟ್ರಾನ್ಸಾಕ್ಷನ್ ಮಾಡಿದಾಗೆಲ್ಲಾ ಶೇ. 5ರಷ್ಟು ಕ್ಯಾಷ್​ಬ್ಯಾಕ್ ಸಿಗುತ್ತದೆ. ಆಫ್​ಲೈನ್ ವಹಿವಾಟಿಗೆ ಶೇ. 1ರಷ್ಟು ಕ್ಯಾಶ್​ಬ್ಯಾಕ್ ಬರುತ್ತದೆ. ಎಲ್ಲಾ ಪೆಟ್ರೋಲ್ ಬಂಕ್​ಗಳಲ್ಲೂ ಫುಯಲ್ ಸರ್ಚಾರ್ಜ್​ನಲ್ಲಿ ಶೇ. 1ರಷ್ಟು ವಿನಾಯಿತಿ ಸಿಗುತ್ತದೆ. ಇದರ ವಾರ್ಷಿಕ ಶುಲ್ಕ 999 ರೂ ಇದೆ. ಒಂದು ವರ್ಷದಲ್ಲಿ ನೀವು ಈ ಕ್ರೆಡಿಟ್ ಕಾರ್ಡ್ ಬಳಸಿ 2 ಲಕ್ಷ ರೂ ವೆಚ್ಚ ಮಾಡಿದರೆ ವಾರ್ಷಿಕ ಶುಲ್ಕದಿಂದಲೂ ವಿನಾಯಿತಿ ಸಿಗುತ್ತದೆ.

4 / 8
Standard Chartered Bank EaseMyTrip ಕ್ರೆಡಿಟ್ ಕಾರ್ಡ್- ಇದರ ವಾರ್ಷಿಕ ಶುಲ್ಕ 350 ರೂ ಇದೆ. ಆದರೆ, ಈ ಕಾರ್ಡ್​ನಿಂದ ಸಿಗುವ ಡಿಸ್ಕೌಂಟ್, ಆಫರ್ಸ್, ರಿವಾರ್ಡ್ ಎಲ್ಲವೂ ಬಹಳ ಹೆಚ್ಚು. ಈ ಕಾರ್ಡ್ ಬಳಸಿ ಹೋಟೆಲ್ ಬುಕ್ ಮಾಡಿದರೆ ತತ್​ಕ್ಷಣಕ್ಕೆ ಶೇ. 20ರಷ್ಟು ರಿಯಾಯಿತಿ ಸಿಗುತ್ತದೆ. ಇನ್ನು ವಿಮಾನ ಟಿಕೆಟ್ ಬುಕ್ ಮಾಡಿದಾಗ ಶೇ. 10ರಷ್ಟು ಡಿಸ್ಕೌಂಟ್ ಲಭ್ಯವಾಗುತ್ತದೆ. ಬಸ್ ಟಿಕೆಟ್ ಬುಕ್ ಮಾಡಿದರೆ 125ರೂವರೆಗೂ ರಿಯಾಯಿತಿ ಇರುತ್ತದೆ. ಬಹುತೇಕ ಪ್ರತೀ ಖರೀದಿಯಿಂದಲೂ ಹೆಚ್ಚು ರಿವಾರ್ಡ್​ಗಳು ಸಿಗುತ್ತವೆ.

5 / 8
American Express SmartEarn ಕ್ರೆಡಿಟ್ ಕಾರ್ಡ್: ಅಮೇಜಾನ್, ಫ್ಲಿಪ್​ಕಾರ್ಟ್, ಊಬರ್ ಪ್ಲಾಟ್​ಫಾರ್ಮ್​ಗಳಲ್ಲಿ ಈ ಕ್ರೆಡಿಟ್ ಕಾರ್ಡ್ ಬಳಸಿ ಮಾಡಲಾಗುವ ಪ್ರತೀ 50 ರೂ ವೆಚ್ಚಕ್ಕೂ 10 ಪಟ್ಟು ಹೆಚ್ಚು ಮೆಂಬರ್​ಶಿಪ್ ರಿವಾರ್ಡ್ ಅಂಕಗಳು ಸಿಗುತ್ತವೆ. ಪೇಟಿಎಂ ವ್ಯಾಲಟ್, ಸ್ವಿಗ್ಗಿ, ಬುಕ್ ಮೈ ಶೋ, ಪಿವಿಆರ್, ಮಿಂತ್ರಾ, ಜಬೋಂಗ್, ಗ್ರೋಫರ್ಸ್, ಬಿಗ್ ಬಜಾರ್ ಮತ್ತಿತರೆಡೆ ವೆಚ್ಚ ಮಾಡಿದಾಗಲೂ ಬಹಳಷ್ಟು ರಿವಾರ್ಡ್ ಪಾಯಿಂಟ್ಸ್ ಸಿಗುತ್ತವೆ. ಕಾರ್ಡ್ ಪಡೆದು ಮೊದಲ 90 ದಿನಗಳಲ್ಲಿ ನೀವು 10 ಸಾವಿರ ರೂ ವೆಚ್ಚ ಮಾಡಿದರೆ 500 ರೂ ನೇರ ಕ್ಯಾಶ್​ಬ್ಯಾಕ್ ಸಿಗುತ್ತದೆ. ಈ ಕಾರ್ಡ್​ನ ವಾರ್ಷಿಕ ಶುಲ್ಕ 495 ರೂ ಇದೆ.

6 / 8
Flipkart Axis Bank ಕ್ರೆಡಿಟ್ ಕಾರ್ಡ್: ಫ್ಲಿಪ್​ಕಾರ್ಟ್, ಮಿಂತ್ರಾ, ಊಬರ್, ಸ್ವಿಗ್ಗಿ, ಕ್ಯೂರ್​ಫಿಟ್, ಟಾಟಾ ಪ್ಲೇ, ಕ್ಲಿಯರ್​ಟ್ರಿಪ್ ಇತ್ಯಾದಿ ಕಡೆ ಶಾಪಿಂಗ್​ಗೆ ಈ ಕ್ರೆಡಿಟ್ ಕಾರ್ಡ್ ಬಳಸಿದರೆ ಶೇ. 4ರಿಂದ ಶೇ. 5ರವರೆಗೂ ಡಿಸ್ಕೌಂಟ್ ಸಿಗುತ್ತದೆ. ವೆಲ್ಕಂ ಬೆನಿಫಿಟ್​ಗಳೇ ಸಾವಿರ ರೂಗೂ ಹೆಚ್ಚಿವೆ. ಇದರ ಜೊತೆಗೆ ವರ್ಷಕ್ಕೆ ನಾಲ್ಕು ಲೌಂಜ್ ಅಕ್ಸೆಸ್ ಕೂಡ ಸಿಗುತ್ತದೆ. ಈ ಕಾರ್ಡ್​ನ ವಾರ್ಷಿಕ ಶುಲ್ಕ 500 ರೂ ಇದೆ.

7 / 8
ಈ ಮೇಲಿನ ಎಲ್ಲಾ ಮಾಹಿತಿಯನ್ನು ಒದಗಿಸಿರುವುದು ಪೈಸಾಬಜಾರ್. ಉಡುಗೆ, ಊಟ, ಸಿನಿಮಾ, ಪ್ರವಾಸ ಇತ್ಯಾದಿ ಕ್ಷೇತ್ರಗಳಲ್ಲಿ ಭಾರತೀಯ ಮಹಿಳೆಯರು ಮಾಡುವ ವೆಚ್ಚದ ಮಾಹಿತಿಯನ್ನ ಆಧರಿಸಿ ಅವರಿಗೆ ಸೂಕ್ತವೆನಿಸುವ ಕ್ರೆಡಿಟ್ ಕಾರ್ಡ್​ಗಳನ್ನು ಪಟ್ಟಿ ಮಾಡಲಾಗಿದೆ.

8 / 8
ಗಮನಿಸಿ: ಕ್ರೆಡಿಟ್ ಕಾರ್ಡ್ ನೀಡುವ ಆಫರ್​ಗಳನ್ನು ನೋಡಿ ನೀವು ಕಾರ್ಡ್ ಪಡೆಯಲು ಮುಂದಾದರೆ ಜಾಗ್ರತೆ. ನಿಮ್ಮ ದೈನಂದಿನ ಅಗತ್ಯತೆಗಳು, ಅನಿವಾರ್ಯತೆಗಳು ಇತ್ಯಾದಿ ಅಂಶಗಳನ್ನು ಗಮನಿಸಿ ಕ್ರೆಡಿಟ್ ಕಾರ್ಡ್ ಪಡೆಯಬೇಕು. ಡಿಸ್ಕೌಂಟ್​ಗಳಿಗೋಸ್ಕರ ವೆಚ್ಚ ಮಾಡುವಂತಾಗಬಾರದು. ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಲಿಲ್ಲವೆಂದರೆ ನಿಮ್ಮ ಕ್ರೆಡಿಟ್ ರೇಟಿಂಗ್ ಬಿದ್ದುಹೋಗುತ್ತದೆ. ಅದರ ಪರಿಣಾಮ ನಾನಾ ಸ್ತರಗಳಲ್ಲಿ ನಿಮ್ಮನ್ನು ಬಾಧಿಸಬಹುದು. ಹೀಗಾಗಿ, ಎಚ್ಚರದಿಂದ ಹೆಜ್ಜೆ ಇಡಿ.

Published On - 1:03 pm, Fri, 3 March 23