ಹಳೆಯ ದೆಹಲಿ ಬೀದಿಗಳಲ್ಲಿ ರಾತ್ರಿಯಲ್ಲಿ ಭಯಾನಕ ದೃಶ್ಯಗಳು ಕಂಡುಬಂದಿವೆ. ಅಲ್ಲಿ ದೆವ್ವಗಳು ಸುತ್ತಾಡುವ ಹಾಗೆ ಭಾಸವಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇದು ಎಷ್ಟರಮಟ್ಟಿಗೆ ನಿಜ ಎಂದು ಪರಿಶೀಲಿಸಿದ ನಂತರ ನಮಗೆ ಒಂದು ಕುತೂಹಲಕಾರಿ ವಿಷಯ ತಿಳಿಯಿತು. ಕೃತಕ ಬುದ್ಧಿಮತ್ತೆ (Artificial intelligence -AI) ಬಳಸಿ ಕಲಾವಿದರೊಬ್ಬರು ಈ ಫೋಟೋಗಳನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ಸೃಜನಶೀಲತೆ ನಿಜಕ್ಕೂ ಅದ್ಭುತವಾಗಿದೆ. ಆ ಕಲಾವಿದ ನಿಜವಾಗಿಯೂ ರಾಕ್ಷಸರನ್ನೇ ಸೃಷ್ಟಿಸಿದ್ದಾರಾ ಎಂದು ಆಶ್ಚರ್ಯಪಡುವಷ್ಟು ಕಂಡುಬಂದಿದೆ.