Women’s Day Special: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾಂಪ್ರದಾಯಿಕ ಉಡುಪು ತೊಟ್ಟು ಬೈಕ್ ಕಿಕ್ ಸ್ಟಾರ್ಟ್ ಮಾಡಿದ ಮಹಿಳಾಮಣಿಗಳು
ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಈ ದಿನದ ಪ್ರಯುಕ್ತ ರಾಜ್ಯದ ವಿವಿಧೆಡೆ ಮಹಿಳೆಯರು ವಿವಿಧ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಿಳೆಯರು ಸಂಪ್ರದಾಯದ ಉಡುಪಲ್ಲಿ.. ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಾ ಮಹಿಳೆಯರು ಬೈಕ್ ಏರಿ ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಬೈಕ್ ರೈಡ್ ಮಾಡಿದ್ದಾರೆ. ದುಬಾರಿ ಬೆಲೆಯ ಬೈಕ್ಗಳನ್ನ ಚಲಾಯಿಸಿ ನಾರಿಮಣಿಯರು ಸೈ ಎನಿಸಿಕೊಂಡಿದ್ದಾರೆ.