ವಿಶ್ವದಲ್ಲಿಯೇ ಅತೀ ಉದ್ದನೆಯ ಪ್ಲಾಟಫಾರಂ ಹೊಂದಿರುವ ರೈಲು ನಿಲ್ದಾಣ ಈಗ ನಮ್ಮ ಕರ್ನಾಟಕದಲ್ಲಿ, ಫೋಟೋಸ್ ಇಲ್ಲಿವೆ ನೋಡಿ

Edited By: ಆಯೇಷಾ ಬಾನು

Updated on: Jun 10, 2022 | 11:47 AM

ವೇಗದಿಂದ ಬೆಳವಣಿಗೆ ಕಾಣುತ್ತಿರುವ ಹುಬ್ಬಳ್ಳಿಯಲ್ಲಿ ಜನಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಬೆಳೆಯುತ್ತಿದೆ. ಈ ಅಂಶಗಳನ್ನ ಗಮನದಲ್ಲಿಟ್ಟುಕೊಂಡು, ರೈಲು ನಿಲ್ದಾಣ ನವೀಕರಣ ಮಾಡುವ ನಿರ್ಧಾರ ಮಾಡಲಾಗಿದ್ದು ವಿಶ್ವದಲ್ಲಿಯೇ ಅತೀ ಉದ್ದನೆಯ ಪ್ಲಾಟಫಾರಂ ಹೊಂದಿರುವ ನಿಲ್ದಾಣ ಎಂಬ ಕೀರ್ತಿಗೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜಿ ರೈಲು ನಿಲ್ದಾಣ ಪಾತ್ರವಾಗಿದೆ.

1 / 6
ವಿಶ್ವದಲ್ಲಿಯೇ ಅತೀ ಉದ್ದನೆಯ ಪ್ಲಾಟಫಾರಂ ಹೊಂದಿರುವ ನಿಲ್ದಾಣ ಎಂಬ ಕೀರ್ತಿಗೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜಿ ರೈಲು ನಿಲ್ದಾಣ ಪಾತ್ರವಾಗಿದೆ.

ವಿಶ್ವದಲ್ಲಿಯೇ ಅತೀ ಉದ್ದನೆಯ ಪ್ಲಾಟಫಾರಂ ಹೊಂದಿರುವ ನಿಲ್ದಾಣ ಎಂಬ ಕೀರ್ತಿಗೆ ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಸ್ವಾಮಿಜಿ ರೈಲು ನಿಲ್ದಾಣ ಪಾತ್ರವಾಗಿದೆ.

2 / 6

115 ಕೋಟಿ ರೂಪಾಯಿ ಅನುದಾನದಲ್ಲಿ 2019ರಲ್ಲಿ ಪ್ರಾರಂಭವಾದ ನವೀಕರಣ ಕಾರ್ಯ ಕೇವಲ ಎರಡೇ ವರ್ಷದಲ್ಲಿ ಪೂರ್ಣಗೊಂಡು 24 ಫೆಬ್ರವರಿ 2021ರಂದು ಲೋಕಾರ್ಪಣೆಗೊಂಡಿತು.

3 / 6

5 ಪ್ಲಾಟಫಾರಂ ಹೊಂದಿದ್ದ ನಿಲ್ದಾಣದಲ್ಲಿ ಇನ್ನೂ 3 ಪ್ಲಾಟಫಾರಂ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಮುಗಿಯುವ ಹಂತದಲ್ಲಿದೆ. ಜಂಕ್ಷನ್ ಆಗಿರುವ ಈ ನಿಲ್ದಾಣ, ದಕ್ಷಿಣದಲ್ಲಿ ಬೆಂಗಳೂರು, ಮೈಸೂರು ಹಾಗು ಉತ್ತರದಲ್ಲಿ ಪುಣೆ, ಮುಂಬೈ, ದೆಹಲಿಗೆ ಪ್ರಯಾಣಿಸುವವರಿಗೆ ಕೇಂದ್ರವಾಗಿದೆ.

4 / 6

5 ಸ್ಟಾರ್ ರೇಟಿಂಗ್ ಪಡೆದ ಭಾರತದ 3 ರೈಲ್ವೇ ಕ್ಯಾಂಟೀನ್ ಗಳಲ್ಲಿ ಇದೂ ಒಂದು. ಉತ್ತಮ ಗುಣಮಟ್ಟದ ಆಹಾರ ಮತ್ತು ಸೇವೆ ನೀಡುವ ಕ್ಯಾಂಟೀನ್ ಗಳಿಗೆ ಎಫ್ ಎಸ್ ಎಸ್ ಎ ಐ ನಿಂದ ಕೊಡುವ ರೇಟಿಂಗ್ ಇದಾಗಿದೆ.

5 / 6

ರೈಲು ನಿಲ್ದಾಣದ ನವೀಕರಣದ ಜೊತೆಗೆಯೇ ಇತ್ತೀಚೆಗೆ ರೈಲು ಸೌಧ ಹಾಗು ರೈಲ್ವೇ ವಸ್ತು ಸಂಗ್ರಹಾಲಯ ಕೂಡ ಲೋಕಾರ್ಪಣೆಯಾಗಿದೆ. ಸಂಗ್ರಹಾಲಯ ಅವಳಿ ನಗರದ ಜನರನ್ನು ಹಾಗು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇಲ್ಲಿನ ಟಾಯ್ ಟ್ರೇನ್ ಮಕ್ಕಳ ಅಚ್ಚುಮೆಚ್ಚಿನ ಸ್ಥಳವಾಗಿದೆ.

6 / 6

ಹುಬ್ಬಳ್ಳಿ- ಬೆಂಗಳೂರು ಮಧ್ಯೆ ಇಂಟರ್ ಸಿಟಿ ರೈಲು ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಜೋಶಿ ಅವರ ಕಾರ್ಯಕಾಲದಲ್ಲಿಯೇ ರೈಲ್ವೇ ವ್ಯವಸ್ಥೆಗೆ ಸಂಬಂಧಪಟ್ಟ ಮತ್ತಷ್ಟು ಗಣನೀಯ ಕೆಲಸಗಳಾಗಿರುವುದು ವಿಶೇಷ.

Published On - 11:47 am, Fri, 10 June 22

Loading...
Unable to load recommendations.
Follow Us