ಬಿಡುಗಡೆಗೆ ಸಿದ್ಧವಾದ ಶವೋಮಿ 14 ಸರಣಿ: ಅದ್ಭುತ ಲುಕ್, ಸೂಪರ್ ಫೀಚರ್ಸ್

|

Updated on: Feb 13, 2024 | 6:55 AM

Xiaomi 14 Series: ಕಳೆದ ಕೆಲವು ದಿನಗಳಿಂದ ಶವೋಮಿ ಕಂಪನಿಯ ಶವೋಮಿ 14 ಸರಣಿಯ ಬಗ್ಗೆ ಭಾರೀ ಸುದ್ದಿ ಹರಿದಾಡುತ್ತಿದೆ. ಇದೀಗ ಈ ಫೋನ್ ಇದೇ ತಿಂಗಳ 25 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಕಂಪನಿ ಅಧಿಕೃತ ಘೋಷಣೆ ಮಾಡಿಲ್ಲ. ಈ ಫೋನ್ ಯಾವ ವೈಶಿಷ್ಟ್ಯಗಳನ್ನು ಹೊಂದಿದೆ ಎಂಬುದನ್ನು ನೋಡೋಣ.

1 / 5
ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ದೈತ್ಯ ಶವೋಮಿ ಹೊಸ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಶವೋಮಿ ತನ್ನ 14 ಸರಣಿಯ ಫೋನ್‌ಗಳನ್ನು ಇದೇ ತಿಂಗಳ 25 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ಇದರಲ್ಲಿ ಶವೋಮಿ 14 Ultra ಜೊತೆಗೆ ಶವೋಮಿ 14 ಮತ್ತು ಶವೋಮಿ 14 Pro ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತದೆ.

2 / 5
ಈ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ, ಶವೋಮಿ 14 ಆಲ್ಟ್ರಾ 6.73-ಇಂಚಿನ QHD + AMOLED LTPO ಡಿಸ್ಪ್ಲೇಯನ್ನು ಹೊಂದಿರುತ್ತದೆ. ಈ ಡಿಸ್​ಪ್ಲೇ 120 Hz ನ ರಿಫ್ರೆಶ್ ದರವನ್ನು ಹೊಂದಿದೆ. ಇದರ ಜೊತೆಗೆ ಈ ಫೋನ್​ನಲ್ಲಿ ವಾವ್ ಎನಿಸುವ ಫೀಚರ್ಸ್ ನೀಡಲಾಗಿದೆ.

3 / 5
ಕ್ವಾಲ್ಕಂನ ಸ್ನಾಪ್​ಡ್ರಾಗನ್ 8 Gen 3 SoC ಚಿಪ್ ಸೆಟ್ ಅನ್ನು ಈ ಫೋನ್‌ನಲ್ಲಿ ನೀಡಲಾಗಿದೆ. ಆಂಡ್ರಾಯ್ಡ್ 14 ಆಧಾರಿತ ಹೈಪರ್ ಓಎಸ್ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, ಕಂಪನಿಯು ಇನ್ನೂ ಬೆಲೆಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಇದು ಪ್ರೀಮಿಯಂ ಫೋನಾಗಿದೆ.

4 / 5
ಕ್ಯಾಮೆರಾ ವಿಚಾರಕ್ಕೆ ಬಂದರೆ, ಈ ಸ್ಮಾರ್ಟ್‌ಫೋನ್‌ಗೆ ಲೈಕಾ ಬೆಂಬಲಿತ ಟ್ರಿಪಲ್ ಅಪರೂಪದ ಕ್ಯಾಮೆರಾ ಘಟಕವನ್ನು ನೀಡಲಾಗಿದೆ. 50-ಮೆಗಾಪಿಕ್ಸೆಲ್ 1-ಇಂಚಿನ ಪ್ರಾಥಮಿಕ ಕ್ಯಾಮೆರಾ, ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಸಂವೇದಕ ಮತ್ತು ಇತರ ಎರಡು 50-ಮೆಗಾಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾಗಳಿವೆ.

5 / 5
ಎರಡು 50-ಮೆಗಾಪಿಕ್ಸೆಲ್ ಸಂವೇದಕ ಕ್ಯಾಮೆರಾಗಳಲ್ಲಿ, ಒಂದು 3x ಮತ್ತು ಇನ್ನೊಂದು 5x ಜೂಮ್ ಸಾಮರ್ಥ್ಯ ಹೊಂದಿದೆ. ಇದು 32 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿರುತ್ತದೆ. ಈ ಫೋನ್ 5300 mAh ಬ್ಯಾಟರಿಯನ್ನು ಹೊಂದಿದ್ದು, 90 ವ್ಯಾಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.