ಯಾದಗಿರಿ ನಗರದ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು
TV9 Web | Updated By: Rakesh Nayak Manchi
Updated on:
Nov 07, 2022 | 12:54 PM
Yadgiri: ನಗರದ ರಸ್ತೆಗಳ ಮೇಲೆ ಓಡಾಡಬೇಕು ಅಂದರೆ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಓಡಾಡಬೇಕು. ವಾಹನ ಸವಾರರು ಸ್ವಲ್ಪ ಯಾಮಾರಿದರೂ ಪ್ರಾಣ ಪಕ್ಷಿ ಹಾರಿ ಹೋಗುವುದು ಗ್ಯಾರಂಟಿ.
1 / 5
ಯಾದಗಿರಿ ಜಿಲ್ಲಾ ಕೇಂದ್ರ ರಸ್ತೆಗಳನ್ನ ಒಮ್ಮೆ ನೋಡಿದರೆ ಮತ್ತೊಮ್ಮೆ ಇತ್ತ ಬರಲೇಬಾರದು ಎನ್ನುವಂತಾಗಿದೆ. ಏಕೆಂದರೆ ನಗರದ ಯಾವ ರಸ್ತೆಗೆ ಕಾಲಿಟ್ಟರೂ ಹೊಂಡಗಳ ಕಾಣಸಿಗುತ್ತದೆ. ಕಳೆದ ಎರಡು ತಿಂಗಳಲ್ಲಿ ಈ ಗುಂಡಿಗಳಿಂದ ಮೂವರು ವಾಹನ ಸವಾರರು ಸಾವಿಗೀಡಾಗಿದ್ದಾರೆ. ದುರ್ಘಟನೆಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳಿಗೆ ಮಾತ್ರ ಕರುಣೆ ಬಂದಿಲ್ಲ. ಹೀಗಾಗಿ ವಾಹನ ಸವಾರರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಲು ಆರಂಭಿಸಿದ್ದಾರೆ.
2 / 5
ಯಾದಗಿರಿ ನಗರದ ಹೃದಯ ಭಾಗದಲ್ಲಿರುವ ಸುಭಾಷ್ ವೃತ್ತದಲ್ಲಿ ರಸ್ತೆಯ ತುಂಬೆಲ್ಲ ಗುಂಡಿಗಳು ಬಿದ್ದಿವೆ. ಅಷ್ಟೇ ಯಾಕೆ ನಗರದ ಹತ್ತಿಕುಣಿ ಕ್ರಾಸ್ ರಸ್ತೆ, ಜಿಲ್ಲಾಧಿಕಾರಿ ಕಚೇರಿ ರಸ್ತೆ, ಹೈದ್ರಾಬಾದ್ ರಸ್ತೆ ಸೇರಿದಂತೆ ನಾನಾ ಕಡೆ ಇರುವ ರಸ್ತೆಗಳ ತುಂಬೆಲ್ಲ ಗುಂಡಿಗಳೇ ಹೆಚ್ಚಾಗಿ ಕಾಣುತ್ತಿವೆ.
3 / 5
Yadgiri Potholes on main roads in Yadgir city news in kannada
4 / 5
Yadgiri Potholes on main roads in Yadgir city news in kannada
5 / 5
Yadgiri Potholes on main roads in Yadgir city news in kannada
Published On - 10:56 am, Mon, 7 November 22