
ಚಳಿಗಾಲದಲ್ಲಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಮೂಲಂಗಿ ಸುಲಭವಾಗಿ ದೊರೆಯುತ್ತದೆ. ನೀವು ಇದನ್ನು ರೈತಾ, ಕರಿ, ಪಲ್ಯ ಮತ್ತು ಫ್ರೈ ಮಾಡಲು ಬಳಸಬಹುದು. ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ತಾಮ್ರದಂತಹ ಅಂಶಗಳು ಮೂಲಂಗಿಯಲ್ಲಿ ಸಮೃದ್ಧವಾಗಿದೆ. ಹೀಗಾಗಿ ಈ ತರಕಾರಿ ಜೀರ್ಣಕಾರಿ ಸಮಸ್ಯೆಗಳಿಂದ ಜನರನ್ನು ರಕ್ಷಿಸುತ್ತದೆ.

ಚಳಿಗಾಲದಲ್ಲಿ ಅವರೆಕಾಳನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದನ್ನು ಸಾಂಬಾರ್, ಸಾಗು ಮತ್ತು ರೊಟ್ಟಿ ಇತ್ಯಾದಿಗಳಲ್ಲಿ ಸೇರಿಸಲಾಗುತ್ತದೆ. ಅವರೆಕಾಳು ಚಳಿಗಾಲದ ತಿಂಗಳುಗಳಲ್ಲಿ ಬೆಂಗಳೂರಿನ ಬಹುತೇಕ ಎಲ್ಲಾ ಅಡುಗೆಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಇದನ್ನು ದೋಸೆ, ಪಾನಿ ಪುರಿ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ.

ಸಿಹಿ ಗೆಣಸು ತುಂಬಾ ರುಚಿಯಾದ ಆಹಾರ. ಈ ಬೇರು ತರಕಾರಿ ಫೈಬರ್ ಮತ್ತು ವಿಟಮಿನ್‌ಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಬರ್ಗರ್, ಚಿಪ್ಸ್ ಮತ್ತು ಚಾಟ್ಸ್ ಮಾಡಲು ಇದನ್ನು ಬಳಸಲಾಗುತ್ತದೆ. ಚಳಿಗಾಲದಲ್ಲಿ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿದರೆ ಆರೋಗ್ಯಕ್ಕೆ ಉಪಯುಕ್ತಕರವಾಗಿರುತ್ತದೆ.

ನೆಲ್ಲಿಕಾಯಿಯ ಸೇವನೆಯು ಚಳಿಗಾಲಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸಲು, ಕೂದಲು ಮತ್ತು ಚರ್ಮದ ಕಾಂತಿ ಹೆಚ್ಚಿಸಲು ಇದು ಪ್ರಯೋಜನಕಾರಿಯಾಗಿದೆ. ಉಪ್ಪಿನಕಾಯಿ ತಯಾರಿಸಲು ಇದನ್ನು ಬಳಸಲಾಗುತ್ತದೆ.