ಈ ಗ್ರಹಣದಿಂದ ತಲಾ 4 ರಾಶಿಗಳಿಗೆ ಶುಭ, ಅಶುಭ ಹಾಗೂ ಮಿಶ್ರ ಫಲಗಳನ್ನು ನೀಡುತ್ತದೆ. ಮೊದಲಿಗೆ ಶುಭ ಫಲ ಚಿಂತನೆಯನ್ನು ಯಾರಿಗೆ ಮಾಡಬಹುದು ಅಂತ ನೋಡುವುದಾದರೆ, ಯಾವ ರಾಶಿಯಿಂದ ಮೊದಲುಗೊಂಡು 3, 6, 10 ಹಾಗೂ 11ನೇ ಮನೆಯಲ್ಲಿ ಗ್ರಹಣ ಸಂಭವಿಸುತ್ತಿದೆಯೋ ಅಂಥವರಿಗೆ ಶುಭ ಆಗುತ್ತದೆ. ಕನ್ಯಾ, ಮಿಥುನ, ಕುಂಭ ಹಾಗೂ ಮಕರ ರಾಶಿಯವರಿಗೆ ಶುಭ ಫಲಗಳನ್ನು, ಇನ್ನು ಅಶುಭ ಫಲಗಳು ಅಂತ 1, 4, 8, 12ನೇ ರಾಶಿಯಾಗುವ ವೃಶ್ಚಿಕ, ಸಿಂಹ, ಮೇಷ ಹಾಗೂ ಧನುಸ್ಸು ರಾಶಿಯವರಿಗೆ ಹೇಳಬಹುದು. 2, 5, 7 ಹಾಗೂ 9ನೇ ಮನೆ ಆಗುವ ತುಲಾ, ಕರ್ಕಾಟಕ, ವೃಷಭ ಮತ್ತು ಮೀನ ರಾಶಿಯವರಿಗೆ ಮಿಶ್ರ ಫಲ ಅಂತ ಹೇಳಬಹುದು. ಯಾರ್ಯಾರಿಗೆ ಅಶುಭ ಹಾಗೂ ಮಿಶ್ರ ಫಲ ಅಂತಿದೆಯೋ ಅವರು ಡಿಸೆಂಬರ್ ಐದನೇ ತಾರೀಕು ಕೆಂಪು ಬಟ್ಟೆಯಲ್ಲಿ ಮೂರರಿಂದ ಐದು ಹಿಡಿ ಗೋಧಿಯನ್ನು ಕಟ್ಟಿ, ವೀಳ್ಯದೆಲೆ, ದಕ್ಷಿಣೆ, ಬಾಳೆಹಣ್ಣು ಸಮೇತ ದಾನ ಮಾಡಿ. ಹಾಗಿದ್ದ ಮೇಲೆ 12 ರಾಶಿಯವರ ಮೇಲೆ ಬೀರುವ ಪರಿಣಾಮ ಏನು ಎಂಬುದನ್ನು ಮುಂದೆ ಓದಿ.