Sabudana disadvantages: ಸಬ್ಬಕ್ಕಿ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಬಹುದು; ಇರಲಿ ಎಚ್ಚರ
TV9 Web | Updated By: preethi shettigar
Updated on:
Mar 01, 2022 | 7:10 AM
ಸಬ್ಬಕ್ಕಿಯನ್ನು ಮನೆಗಳಲ್ಲಿ ಹಲವು ವಿಧಗಳಲ್ಲಿ ಬೇಯಿಸಿ ತಿನ್ನಲಾಗುತ್ತದೆ. ಅದರಲ್ಲಿ ಖಿಚಡಿ ಮಾಡುವುದು ತುಂಬಾ ಸಾಮಾನ್ಯವಾಗಿದೆ. ಇದು ಸಾಕಷ್ಟು ಆರೋಗ್ಯಕರವಾಗಿದ್ದರೂ, ಕೆಲವರು ಅದರಿಂದ ದೂರವಿರಬೇಕು. ಇಲ್ಲಿದೆ ಇದಕ್ಕೆ ಕಾರಣ.
1 / 5
ತೂಕ ಹೆಚ್ಚಾಗುವುದು: ತೂಕ ಇಳಿಸಿಕೊಳ್ಳಲು ಬಯಸುವವರು ಸಬ್ಬಕ್ಕಿ ತಿನ್ನಬಾರದು ಎಂದು ಹೇಳಲಾಗುತ್ತದೆ. ಇದು ಬಹಳಷ್ಟು ಕೊಬ್ಬು ಮತ್ತು ಪ್ರೋಟೀನ್ ಅನ್ನು ಹೊಂದಿರುತ್ತದೆ. ಸಬ್ಬಕ್ಕಿ ತಿನ್ನುವುದರಿಂದ ದೇಹದಲ್ಲಿನ ಕ್ಯಾಲೊರಿಗಳು ಪಿಷ್ಟದ ರೂಪದಲ್ಲಿ ಹೆಚ್ಚಾಗುತ್ತವೆ.
2 / 5
ಮಧುಮೇಹ: ತಜ್ಞರ ಪ್ರಕಾರ, ಸಬ್ಬಕ್ಕಿಯು ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿಲ್ಲ ಮತ್ತು ಇದನ್ನು ಪ್ರತಿದಿನ ಸೇವಿಸಿದರೆ, ಅದು ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಸಬ್ಬಕ್ಕಿ ಸೇವಿಸಲೇಬಾರದು.
3 / 5
ಕಿಡ್ನಿ ಕಲ್ಲುಗಳು: ಕಿಡ್ನಿಯಲ್ಲಿ ಕಲ್ಲುಗಳ ಸಮಸ್ಯೆ ಇರುವವರು ಸಬ್ಬಕ್ಕಿ ಸೇವಿಸಬಾರದು ಎಂದು ತಜ್ಞರು ನಂಬುತ್ತಾರೆ. ಇದರಿಂದ ಕಲ್ಲುಗಳ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು ಎನ್ನಲಾಗಿದೆ.
4 / 5
ಬ್ರೈನ್ ಡ್ಯಾಮೇಜ್: ಸಬ್ಬಕ್ಕಿಯಲ್ಲಿ ಸೈನೈಡ್ ಪ್ರಮಾಣ ಕಡಿಮೆ ಇರುವುದು ಕಂಡುಬಂದರೂ, ಅತಿಯಾದ ಸೇವನೆಯಿಂದ ಅಡ್ಡ ಪರಿಣಾಮಗಳಾಗಬಹುದು. ಇದರಿಂದ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ತಜ್ಞರ ಪ್ರಕಾರ, ಪರಿಸ್ಥಿತಿ ಹದಗೆಟ್ಟರೆ ಕೋಮಾ ಹೋಗುವ ಸ್ಥಿತಿ ಎದುರಾಗಬಹುದು.
5 / 5
ಹೃದ್ರೋಗ: ಸಬ್ಬಕ್ಕಿಯಲ್ಲಿ ಇರುವ ಹೆಚ್ಚುವರಿ ಕೊಬ್ಬಿನಿಂದಾಗಿ, ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವು ಹೆಚ್ಚಾಗಬಹುದು ಮತ್ತು ಈ ಸಮಸ್ಯೆಯು ನಿಮ್ಮನ್ನು ಶೀಘ್ರದಲ್ಲೇ ಹೃದ್ರೋಗಿಯನ್ನಾಗಿ ಮಾಡಬಹುದು. ನೀವು ಹೃದ್ರೋಗಿಗಳಾಗಿದ್ದರೆ, ನೀವು ತಜ್ಞರ ಸಲಹೆಯ ಮೇರೆಗೆ ಮಾತ್ರ ಸೇವಿಸಬೇಕು.