
ನಿಮಗೆ ಮೆಟ್ಟಿಲುಗಳನ್ನು ಹತ್ತುವುದು ಮತ್ತು ವಾಕಿಂಗ್ ಮಾಡುವುದು ಇಷ್ಟವಿಲ್ಲದಿದ್ದರೆ, ಕೆಲವು ಸುಲಭವಾದ ಸ್ಟ್ರೆಚಿಂಗ್ ವ್ಯಾಯಾಮಗಳನ್ನು ಮಾಡಬಹುದು. ನೇರವಾಗಿ ಕುಳಿತು ಕಾಲನ್ನು ಮುಟ್ಟುವುದು ಅಥವಾ ಕುಳಿತಲ್ಲೇ ದೇಹದ ಸದೃಢತೆ ಕಾಪಾಡುವ ಇನ್ನಿತರ ಸರಳ ವ್ಯಾಯಾಮವನ್ನು ಮಾಡಬಹುದು. ಸೂರ್ಯ ನಮಸ್ಕಾರ ಮಾಡುವ ಮುನ್ನ ಈ ಸರಳ ವ್ಯಾಯಾಮ ಮಾಡಿ. ಇದು ದೇಹವು ಸೂರ್ಯ ನಮಸ್ಕಾರ ಮಾಡಲು ಸಂಪೂರ್ಣವಾಗಿ ಸಿದ್ಧವಾಗಿರಿಸುತ್ತದೆ.

ಮೆಟ್ಟಿಲು ಹತ್ತುವುದು ಮತ್ತು ಇಳಿಯುವುದು ಪರಿಣಾಮಕಾರಿ ವ್ಯಾಯಾಮವಾಗಿದೆ. ಸೂರ್ಯ ನಮಸ್ಕಾರ ಮಾಡುವ ಮೊದಲು ನೀವು 4 ರಿಂದ 8 ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತಿಳಿಯುವ ವ್ಯಾಯಾಮ ಮಾಡಿ. ಇದು ಬೇಗ ತೂಕ ಇಳಿಸಿಕೊಳ್ಳಬೇಕು ಎನ್ನುವವರಿಗೆ ನೆರವಾಗುತ್ತದೆ.

ಸೂರ್ಯ ನಮಸ್ಕಾರ ಮಾಡುವ ಮುನ್ನ ವಾಕಿಂಗ್ ಮಾಡುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅಭ್ಯಾಸವಾಗಿದೆ. ತುಂಬಾ ನಿಧಾನವಾಗಿ ವಾಕಿಂಗ್ ಮಾಡಬೇಡಿ. ವಾಕಿಂಗ್ನ ನಂತರ ಹೃದಯ ಬಡಿತ ಹೆಚ್ಚಾಗುತ್ತದೆ.

ಜಾಗಿಂಗ್ ಒಂದು ಉತ್ತಮ ವ್ಯಾಯಾಮವಾಗಿದ್ದು, ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಹೊರತಾಗಿ, ಸೂರ್ಯ ನಮಸ್ಕಾರ ಮಾಡುವ ಮುನ್ನ ಜಾಗಿಂಗ್ ಮಾಡುವುದರಿಂದ ದೇಹ ಹೆಚ್ಚು ಸದೃಢವಾಗಿರುತ್ತದೆ.

ಯೋಗಾಭ್ಯಾಸವನ್ನು ಪ್ರಾರಂಭಿಸುವ ಮೊದಲು ನಿಮ್ಮ ದೇಹಕ್ಕೆ ಉತ್ತಮ ಚಲನೆಯನ್ನು ನೀಡಲು ತಲೆ ತಿರುಗಿಸುವುದು, ಭುಜವನ್ನು ಅತ್ತಿಂದಿತ್ತ ತಿರುಗಿಸುವುದು, ಮೊಣಕಾಲಿನ ವ್ಯಾಯಾಮ ಅಗತ್ಯವಾಗಿದೆ.