ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಸೀಮಂತದ ಕಲರ್ಫುಲ್ ಫೋಟೋ ಗ್ಯಾಲರಿ ಇಲ್ಲಿದೆ..
ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂದು (ಸೆ.13) ರೇವತಿಗೆ ಸೀಮಂತ ನೆರವೇರಿದ್ದು, ಆ ಸಮಾರಂಭದ ಕಲರ್ಫುಲ್ ಫೋಟೋಗಳು ಇಲ್ಲಿವೆ..
Updated on: Sep 13, 2021 | 4:21 PM

Nikhil Kumaraswamy wife Revathi baby shower ceremony in photo gallery

Nikhil Kumaraswamy wife Revathi baby shower ceremony in photo gallery

ಕೊವಿಡ್ ನಿಯಮಾವಳಿ ಹಿನ್ನೆಲೆಯಲ್ಲಿ ಹೆಚ್ಚಿನವರನ್ನು ಆಹ್ವಾನಿಸಲು ಸಾಧ್ಯವಾಗಿಲ್ಲ. ಕುಮಾರಸ್ವಾಮಿ ಕುಟುಂಬದ ಆಪ್ತರು ಈ ಸೀಮಂತ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.

ರೇವತಿ ಪ್ರೆಗ್ನೆಂಟ್ ಎಂಬ ಸುದ್ದಿ ಇತ್ತೀಚಿನ ಕೆಲವು ತಿಂಗಳುಗಳಿಂದ ಕೇಳಿಬರುತ್ತಿತ್ತು. ಈ ವರ್ಷ ಜೂನ್ನಲ್ಲಿ ಆ ಬಗ್ಗೆ ಸ್ವತಃ ನಿಖಿಲ್ ಪ್ರತಿಕ್ರಿಯೆ ನೀಡಿದ್ದರು. ‘ಕೇಳಿಬರುತ್ತಿರುವ ಸುದ್ದಿ ನಿಜ. ನಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ. ಶೀಘ್ರದಲ್ಲಿ ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಬರಲಿದ್ದಾರೆ’ ಎಂದು ನಿಖಿಲ್ ಹೇಳಿದ್ದರು.

ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಬ್ಯುಸಿ ಆಗಿರುವ ನಿಖಿಲ್ ಅವರು ಕುಟುಂಬದ ಕಡೆಗೂ ಹೆಚ್ಚು ಗಮನ ನೀಡುತ್ತಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ನಿಖಿಲ್ ಮತ್ತು ರೇವತಿ ದಂಪತಿಗೆ ಎಲ್ಲರಿಂದ ಶುಭ ಹಾರೈಕೆಗಳು ಕೇಳಿಬರುತ್ತಿವೆ




