150 ಕಿ.ಮೀ ಮೈಲೇಜ್ ನೀಡುವ ಚಿಕ್ಕ ಕಾರು ಬಿಡುಗಡೆ ಮಾಡಿದ ಟೊಯೊಟಾ

TV9 Digital Desk

| Edited By: Zahir Yusuf

Updated on: Sep 12, 2021 | 10:45 PM

ಈ ಕಾರಿನ ಬ್ಯಾಟರಿ ಸಂಪೂರ್ಣ ಚಾರ್ಜ್​ ಆಗಲು ತೆಗೆದುಕೊಳ್ಳುವ ಸಮಯ 5 ಗಂಟೆಗಳು. ಹಾಗೆಯೇ 100V/6A ಗುಣಮಟ್ಟದ ವಿದ್ಯುತ್ ಪೂರೈಕೆಯ ಸಹಾಯದಿಂದ ಸಂಪೂರ್ಣ ಚಾರ್ಜ್ ಮಾಡಿಕೊಳ್ಳಲು 16 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

Sep 12, 2021 | 10:45 PM
ಜಪಾನಿನ ಕಾರು ಕಂಪನಿ ಟೊಯೋಟಾ ಮೋಟಾರ್ ಕಾರ್ಪೊರೇಶನ್‌ ಮಿನಿ ಎಲೆಕ್ಟ್ರಿಕ್ ಕಾರು ಸಿ+ಪಾಡ್ (C + POD) ಅನ್ನು ಪರಿಚಯಿಸಿದೆ. ಇಬ್ಬರು ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾದ ಈ ಕಾರನ್ನು ಸ್ಪೆಷಲ್ ಎಡಿಷನ್​ ಅಡಿಯಲ್ಲಿ ಬಿಡುಗಡೆ ಮಾಡಿದೆ.

1 / 6
ಈ ಕಾರು ಗಾತ್ರದಲ್ಲಿ ತುಂಬಾ ಚಿಕ್ಕದಾಗಿದ್ದು, ಇದರ ಒಟ್ಟು ತೂಕ ಕೇವಲ 690 ಕೆಜಿ. ಹಾಗೆಯೇ ಇದರ ಉದ್ದ 2,490 ಮಿಮೀ, ಅಗಲ 1290 ಮಿಮೀ ಮತ್ತು ಎತ್ತರ 1,550 ಮಿಮೀ ಆಗಿದೆ. ಈ ಕಾರಿನಲ್ಲಿ ಕೇವಲ ಇಬ್ಬರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇದೆ. ಹಾಗೆಯೇ ಈ ಕಾರಿನ ಬ್ಯಾಕ್​ನಲ್ಲಿ ಲಗೇಜ್ ಸ್ಪೇಸ್ ಕೂಡ ನೀಡಲಾಗಿರುವುದು ವಿಶೇಷ.

2 / 6
 C + POD ಕಾರಿನಲ್ಲಿ  9.06 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ನೀಡಲಾಗಿದೆ. ಮೋಟಾರ್ ಗರಿಷ್ಠ 12 ಎಚ್ ಪಿ ಪವರ್ ಮತ್ತು 56 ಎನ್ ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಅದರಂತೆ ಈ ಕಾರನ್ನು 60 ಕಿ.ಮೀ ವೇಗದಲ್ಲಿ ಓಡಿಸಬಹುದು.

3 / 6
ಇನ್ನು ಈ ಕಾರಿನ ಬ್ಯಾಟರಿ ಸಂಪೂರ್ಣ ಚಾರ್ಜ್​ ಆಗಲು ತೆಗೆದುಕೊಳ್ಳುವ ಸಮಯ 5 ಗಂಟೆಗಳು. ಹಾಗೆಯೇ 100V/6A ಗುಣಮಟ್ಟದ ವಿದ್ಯುತ್ ಪೂರೈಕೆಯ ಸಹಾಯದಿಂದ ಸಂಪೂರ್ಣ ಚಾರ್ಜ್ ಮಾಡಿಕೊಳ್ಳಲು 16 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

4 / 6
ಇನ್ನು ಒಂದು ಬಾರಿ ಪೂರ್ಣ ಚಾರ್ಜ್​ ಮಾಡಿಕೊಂಡರೆ 150 ಕಿಲೋಮೀಟರ್ ವರೆಗೆ ಚಲಿಸಬಹುದು ಎಂದು ಟೊಯೋಟಾ ಹೇಳಿಕೊಂಡಿದೆ. ಹೀಗಾಗಿ ದೂರದ ಪ್ರಯಾಣಕ್ಕೂ ಈ ಕಾರನ್ನು ಬಳಸಿಕೊಳ್ಳಬಹುದು.

5 / 6
ಸದ್ಯ C + POD ಕಾರನ್ನು ಎರಡು ಮಾಡೆಲ್​ಗಳಲ್ಲಿ ಬಿಡುಗಡೆ ಮಾಡಲಾಗಿದ್ದು, ಅದರಂತೆ ಎಕ್ಸ್ ವೇರಿಯಂಟ್ ಬೆಲೆ 1.65 ಮಿಲಿಯನ್ ಯೆನ್. ಅಂದರೆ ಭಾರತೀಯ ಕರೆನ್ಸಿಯ ಮೌಲ್ಯ 11.75 ಲಕ್ಷ ರೂ. ಹಾಗೆಯೇ ಜಿ ವೇರಿಯಂಟ್ ಬೆಲೆ 1.71 ಮಿಲಿಯನ್ ಯೆನ್ ಆಗಿದ್ದು, ಇದರ ಭಾರತೀಯ ಮೌಲ್ಯ 12.15 ಲಕ್ಷ ರೂ.

6 / 6

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada