- Kannada News Photo gallery Cricket photos IPL 2021 Royal Challengers Bangalore RCB Duo Virat Kohli and Mohammed Siraj Reach Dubai
Virat Kohli: ಆರ್ಸಿಬಿ ತಂಡ ಸೇರಿಕೊಂಡ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್
IPL 2021 RCB: ವಿರಾಟ್ ಕೊಹ್ಲಿ ಜೊತೆಗೆ ಆರ್ಸಿಬಿ ತಂಡದವರೇ ಆದ ಮೊಹಮ್ಮದ್ ಸಿರಾಜ್ ಕೂಡ ಮ್ಯಾಂಚೆಸ್ಟರ್ನಿಂದ ದುಬೈಗೆ ಆಗಮಿಸಿ ತಂಡದ ಇತರ ಸದಸ್ಯರು ಉಳಿದುಕೊಂಡಿರುವ ಹೋಟೆಲ್ ಸೇರಿಕೊಂಡರು.
Updated on: Sep 13, 2021 | 10:19 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಹದಿನಾಲ್ಕನೇ ಆವೃತ್ತಿ ಎರಡನೇ ಚರಣದ ಪಂದ್ಯಗಳಲ್ಲಿ ಪಾಲ್ಗೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ತಂಡವನ್ನು ಸೇರಿಕೊಂಡಿದ್ದಾರೆ. ಆರ್ಸಿಬಿ ಟ್ವಿಟ್ಟರ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ವಿರಾಟ್ ಕೊಹ್ಲಿ ಜೊತೆಗೆ ಆರ್ಸಿಬಿ ತಂಡದವರೇ ಆದ ಮೊಹಮ್ಮದ್ ಸಿರಾಜ್ ಕೂಡ ಮ್ಯಾಂಚೆಸ್ಟರ್ನಿಂದ ದುಬೈಗೆ ಆಗಮಿಸಿ ತಂಡದ ಇತರ ಸದಸ್ಯರು ಉಳಿದುಕೊಂಡಿರುವ ಹೋಟೆಲ್ ಸೇರಿಕೊಂಡರು.

ಇನ್ನೂ ರೋಹಿತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ ಮತ್ತು ಸೂರ್ಯಕುಮಾರ್ ಯಾದವ್ ಅವರು ಮ್ಯಾಂಚೆಸ್ಟರ್‌ನಿಂದ ಅಬುದಾಬಿಗೆ ಚಾರ್ಟರ್ ಫ್ಲೈಟ್‌ನಲ್ಲಿ ಮೊದಲನೇಯವರಾಗಿ ಬಂದಿಳಿದರು. ಇಲ್ಲಿ ಇವರು 6 ದಿನಗಳ ಕಡ್ಡಾಯ ಕ್ವಾರಂಟೈನ್ ಅನುಸರಿಸಬೇಕಿದೆ.

ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಅವರ ಪತ್ನಿ ಹಾಗೂ ಅವರ ಮಗು ಕೂಡ ದುಬೈಗೆ ತಲುಪಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಟಿಮ್ ಸೌಥೀ ಕೂಡ ದುಬೈಗೆ ತಲುಪಿದರು.

ಆರ್ಸಿಬಿ ತಂಡದ ಪ್ರಮುಖ ವೇಗಿ ನ್ಯೂಜಿಲೆಂಡ್ನ ಕೇಲ್ ಜೆಮಿಸನ್.

ಆರ್ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಗ್ಲೆನ್ ಮ್ಯಾಕ್ಸ್ವೆಲ್.

IPL 2021 Rohit Sharma Bumrah Suryakumar land in Abu Dhabi after MI arrange charter flight
