Edamame Beans: ದೈನಂದಿನ ಆಹಾರದಲ್ಲಿ ಸೋಯಾ ಬೀನ್ಸ್ ಸೇರಿಸಿ; ಆರೋಗ್ಯಕರ ಬದಲಾವಣೆಯ ಬಗ್ಗೆ ತಿಳಿಯಿರಿ
TV9 Web | Updated By: preethi shettigar
Updated on:
Oct 05, 2021 | 2:05 PM
ಸೋಯಾ ಬೀನ್ಸ್ ಅನ್ನು ಸೂಪ್, ಸಲಾಡ್ ಮಾಡಲು ಬಳಸಬಹುದು. ಇದು ಹೆಚ್ಚು ಕೊಲೆಸ್ಟ್ರಾಲ್ ಅನ್ನು ಹೊಂದಿರುವುದಿಲ್ಲ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಇವು ಪ್ರೋಟೀನ್‌ನ ಉತ್ತಮ ಮೂಲವಾಗಿದೆ.
1 / 5
ಮೂಳೆಗಳಿಗೆ ಒಳ್ಳೆಯದು - ಅಧ್ಯಯನದ ಪ್ರಕಾರ ಸೋಯಾ ಬೀನ್ಸ್ನಲ್ಲಿ ಕಂಡುಬರುವ ಐಸೊಫ್ಲಾವೋನ್ಗಳು ಮೂಳೆಯ ಆರೋಗ್ಯವನ್ನು ಉತ್ತೇಜಿಸಲು ಮತ್ತು ಮೂಳೆ ನೋವು ಮತ್ತು ಇನ್ನಿತರ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
2 / 5
ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ - ಸೋಯಾ ಬೀನ್ಸ್ ಗ್ಲೈಸೆಮಿಕ್ ಸೂಚ್ಯಂಕದಲ್ಲಿ ಕಡಿಮೆ ಕಂಡುಬರುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮತ್ತು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದರ ಹೊರತಾಗಿ, ಪ್ರೋಟೀನ್ ಸಮೃದ್ಧವಾಗಿದೆ. ಸೋಯಾ ಬೀನ್ಸ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
3 / 5
ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ - ಅಧ್ಯಯನದ ಪ್ರಕಾರ, ಸೋಯಾ ಬೀನ್ಸ್ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸೋಯಾ ಬೀನ್ಸ್ ನಿಯಮಿತವಾಗಿ ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.
4 / 5
ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ - ಅಧ್ಯಯನದ ಪ್ರಕಾರ, ಸೋಯಾ ಬೀನ್ಸ್ನಲ್ಲಿ ಕಂಡುಬರುವ ಪ್ರೋಟೀನ್ ಪ್ರಮಾಣವು ಬೊಜ್ಜಿನ ಮೇಲೆ ಪ್ರಯೋಜನಕಾರಿ ಪರಿಣಾಮವನ್ನು ಬೀರುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
5 / 5
ಆರೋಗ್ಯಕರ ಆಹಾರ ತಯಾರಿ- 1 ಕಪ್ ಸೋಯಾ ಬೀನ್ಸ್ ಬೀಜಗಳನ್ನು ಕುದಿಸಿ. ನಂತರ ಅದಕ್ಕೆ 4 ಬೆಳ್ಳುಳ್ಳಿ, ಲವಂಗ, 2 ಟೊಮ್ಯಾಟೊ, 1 ಚಮಚ ನಿಂಬೆ ರಸ, ರುಚಿಗೆ ಉಪ್ಪು, 3-5 ತಾಜಾ ಕರಿಬೇವು ಎಲೆ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಈಗ ಸೋಯಾ ಬೀನ್ಸ್ ಪಲ್ಯ ಸವಿಯಲು ಸಿದ್ಧ.